ಮದುವೆ ಬಳಿಕ ಮೊದಲ ಸಿನಿಮಾ ಒಪ್ಪಿಕೊಂಡ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ

09 JUNE 2024

Author : Manjunatha

‘ಗೂಗ್ಲಿ’ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತವಾಗಿದ್ದಾರೆ ನಟಿ ಕೃತಿ ಕರಬಂಧ.

     ನಟಿ ಕೃತಿ ಕರಬಂಧ

ಆದರೆ 2018ರ ಬಳಿಕ ಕನ್ನಡದ ಸಿನಿಮಾದಲ್ಲಿ ನಟಿಸಿಯೇ ಇಲ್ಲ ನಟಿ ಕೃತಿ ಕರಬಂಧ. ಬಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ.

  ಬಾಲಿವುಡ್​ನಲ್ಲಿ ಸೆಟಲ್

ಇತ್ತೀಚೆಗಷ್ಟೆ ನಟಿ ಕೃತಿ ಕರಬಂಧ ತಮ್ಮ ಬಹು ಸಮಯದ ಬಾಯ್​ಫ್ರೆಂಡ್ ಪುಲ್ಕಿತ್ ಸಮರ್ಥ್ ಜೊತೆಗೆ ವಿವಾಹವಾಗಿದ್ದಾರೆ.

  ಬಾಯ್​ಫ್ರೆಂಡ್ ಪುಲ್ಕಿತ್ 

ಮದುವೆಯಾದ ಬಳಿಕ ಕೃತಿ ಕರಬಂಧ ನಟಿಸುತ್ತಾರೋ ಇಲ್ಲವೋ ಎಂಬ ಅನುಮಾನವಿತ್ತು ಅದಕ್ಕೀಗ ಸ್ಪಷ್ಟನೆ ದೊರೆತಿದೆ.

  ಕೃತಿ ಕರಬಂಧ ಮದುವೆ

ಮದುವೆಯಾದ ಬಳಿಕ ನಟಿ ಕೃತಿ ಕರಬಂಧ ತಮ್ಮ ಮೊದಲ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದೂ ಸ್ಟಾರ್ ನಟನೊಟ್ಟಿಗೆ.

 ಸ್ಟಾರ್ ನಟನೊಟ್ಟಿಗೆ ನಟನೆ

ಕೃತಿ ಕರಬಂಧ ಪಿಂಕ್ ವಿಲ್ಲಾ ಜೊತೆಗಿನ ಸಂದರ್ಶನದಲ್ಲಿ ತಾವು ಹೊಸ ಸಿನಿಮಾ ಒಪ್ಪಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

     ಕೃತಿ ಹೊಸ ಸಿನಿಮಾ

ನಟಿ ಕೃತಿ ಕರಬಂಧ, ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಬಾಟಿ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ತೆಲುಗು ಸಿನಿಮಾ ಆಗಿದೆ.

  ನಟ ರಾಣಾ ದಗ್ಗುಬಾಟಿ

ಕೃತಿ ಕರಬಂಧ ಹಾಗೂ ರಾಣಾ ಈ ಹಿಂದೆ ಹೌಸ್​ಫುಲ್ 4 ಹಿಂದಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. 

    ಹೌಸ್​ಫುಲ್ 4 ಸಿನಿಮಾ

ಕೃತಿ ಕರಬಂಧ ಪ್ರಸ್ತುತ ರಿಸ್ಕಿ ರೋಮಿಯೋ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೂ ಸಹ ಹಿಂದಿ ಸಿನಿಮಾ ಆಗಿದೆ.

ರಿಸ್ಕಿ ರೋಮಿಯೋ ಸಿನಿಮಾ

‘ಭರವಸೆಯ ಬೆಳಕು’ ಕಲ್ಕಿ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊಸ ಪೋಸ್ಟರ್ ಬಿಡುಗಡೆ