‘ಭರವಸೆಯ ಬೆಳಕು’ ಕಲ್ಕಿ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊಸ ಪೋಸ್ಟರ್ ಬಿಡುಗಡೆ

09 JUNE 2024

Author : Manjunatha

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತಾಯಿ ಆಗಲಿದ್ದಾರೆ. ಆ ಖುಷಿಯ ನಡುವೆ ಈಗ ಮತ್ತೊಂದು ಖುಷಿ ಅವರೆದುರಿಗಿದೆ.

ನಟಿ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಭಾರತದ ಅತಿ ದೊಡ್ಡ ಬಜೆಟ್​ನ ಸಿನಿಮಾ ‘ಕಲ್ಕಿ 2898 ಎಡಿ’ಯಲ್ಲಿ ನಟಿಸಿದ್ದು ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.

‘ಕಲ್ಕಿ 2898 ಎಡಿ’ ನಟನೆ

ದೀಪಿಕಾ ಪಡುಕೋಣೆ ಎಲ್ಲೋ ಕಳೆದು ಹೋದವರಂತೆ ಮುಖ ಭಾವ ಹೊಂದಿರುವ ಹೊಸ ಪೋಸ್ಟರ್ ಅನ್ನು ‘ಕಲ್ಕಿ 2898 ಎಡಿ’ ತಂಡ ಬಿಡುಗಡೆ ಮಾಡಿದೆ.

     ಪೋಸ್ಟರ್ ಬಿಡುಗಡೆ

ದೀಪಿಕಾ ಪಡುಕೋಣೆ ಗೋಣಿಪಟ್ಟೆಗಳಂತೆ ಕಾಣುವ ಬಟ್ಟೆಗಳನ್ನು ಮೈಗೆ ಸುತ್ತಿಕೊಂಡಿದ್ದಾರೆ. ಆತಂಕದಲ್ಲಿದ್ದಂತೆ ದೀಪಿಕಾ ಕಾಣುತ್ತಿದ್ದಾರೆ.

ಗೋಣಿಪಟ್ಟೆಗಳಂತೆ ಬಟ್ಟೆ

ಈಗ ಬಿಡುಗಡೆ ಆಗಿರುವ ಪೋಸ್ಟರ್​ನಲ್ಲಿ ದೀಪಿಕಾ ಪಡುಕೋಣೆ ಹಿಂದೆ ಕೆಲವು ಅರೆ ನಗ್ನ ವ್ಯಕ್ತಿಗಳು ಪರಸ್ಪರ ಜಗಳ ಮಾಡುತ್ತಿದ್ದಾರೆ. ಆದರೆ ದೀಪಿಕಾ ದಿಗಂತದ ಕಡೆ ನೋಡುತ್ತಿದ್ದಾರೆ.

ಆತಂಕದಲ್ಲಿ ನಟಿ ದೀಪಿಕಾ

ದೀಪಿಕಾ ಪಡುಕೋಣೆಯ ಪಾತ್ರದಿಂದಲೇ ಸಿನಿಮಾದಲ್ಲಿ ಭರವಸೆ ಎನ್ನುವುದು ಮೂಡುತ್ತದೆ ಎಂದು ಚಿತ್ರತಂಡ ಹೇಳಿದೆ. ಅವರ ಜನರಿಗೆ ಸ್ವಾತಂತ್ರ್ಯದ ಭರವಸೆಯನ್ನು ಕೊಡುವ ಪಾತ್ರ ಅವರದ್ದಿರಬಹುದು.

    ಸ್ವಾತಂತ್ರ್ಯದ ಭರವಸೆ

ದೀಪಿಕಾ ಪಡುಕೋಣೆ ಕೆಲವು ವರ್ಷಗಳ ಹಿಂದೆಯೇ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಆ ಸಿನಿಮಾವನ್ನು ಪ್ರಭಾಸ್ ಸಿನಿಮಾ ಎಂದು ಕರೆದಿದ್ದಕ್ಕೆ ಬೇಸರವೂ ವ್ಯಕ್ತಪಡಿಸಿದ್ದರು.

   ಚಿತ್ರೀಕರಣ ಪ್ರಾರಂಭ

ದೀಪಿಕಾ ಪಡುಕೋಣೆ ‘ಸಿಂಘಂ ಅಗೇನ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾನಲ್ಲಿ ಅವರ ಪತಿ ರಣ್ವೀರ್ ಸಿಂಗ್ ನಾಯಕ.

      ಪತಿ ರಣ್ವೀರ್ ಸಿಂಗ್

ದೀಪಿಕಾ ತಾಯಿ ಆಗಲಿದ್ದು, ಅದಾದ ಬಳಿಕ ಅವರಿಗಾಗಿ ಸಾಲು-ಸಾಲು ಸಿನಿಮಾಗಳು ಕಾಯುತ್ತಿವೆ.

   ಸಾಲು-ಸಾಲು ಸಿನಿಮಾ

ಹಾರರ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ತೆಲುಗರ ನೆಚ್ಚಿನ ನಟಿ ಮೃಣಾಲ್ ಠಾಕೂರ್