ಹಾರರ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್

08 JUNE 2024

Author : Manjunatha

ಮೃಣಾಲ್ ಠಾಕೂರ್, ಮರಾಠಿ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೂ ದಕ್ಷಿಣ ಭಾರತೀಯರಿಗೆ ಪರಿಚಯವಾಗಿದ್ದು ತೆಲುಗು ಸಿನಿಮಾ ಮೂಲಕ.

 ನಟಿ ಮೃಣಾಲ್ ಠಾಕೂರ್

ಮೃಣಾಲ್ ಠಾಕೂರ್ ನಟಿಸಿದ್ದ ‘ಸೀತಾ ರಾಮಂ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾದಲ್ಲಿ ಮೃಣಾಲ್ ನಟನೆಗೆ ಫಿದಾ ಆಗದವರಿಲ್ಲ.

‘ಸೀತಾ ರಾಮಂ’ ಸಿನಿಮಾ

ಮರಾಠಿ ಚೆಲುವೆ ಆಗಿದ್ದರೂ ಸಹ ತೆಲುಗು ಸಿನಿಮಾ ರಸಿಕರ ಮನದಲ್ಲಿ ಮನೆ ಮಾಡಿಕೊಂಡಿದ್ದಾರೆ ಮೃಣಾಲ್ ಠಾಕೂರ್.

   ತೆಲುಗರ ಮೆಚ್ಚಿನ ನಟಿ

ಮೃಣಾಲ್ ತೆಲುಗು ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಒಬ್ಬರು. ಆದರೆ ಅಳೆದು ತೂಗಿ ಸಿನಿಮಾಗಳನ್ನು ಆಯ್ದುಕೊಳ್ಳುತ್ತಿದ್ದಾರೆ.

ತೆಲುಗಿನ ಬೇಡಿಕೆಯ ನಟಿ

ಇದೀಗ ಮೃಣಾಲ್ ಠಾಕೂರ್ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅದೂ ಹಾರರ್ ಸಿನಿಮಾ ಮೂಲಕ.

ತಮಿಳಿಗೆ ನಟಿ ಮೃಣಾಲ್ 

ರಾಘವ್ ಲಾರೆನ್ಸ್ ನಟಿಸಿ, ನಿರ್ದೇಶಿಸುವ ‘ಕಾಂಚನಾ’ ಸಿನಿಮಾ ಸರಣಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿದೆ.

    ‘ಕಾಂಚನಾ’ ಸಿನಿಮಾ

ಇದೀಗ ‘ಕಾಂಚಾನ 4’ ಸಿನಿಮಾಕ್ಕೆ ಚಿತ್ರಕತೆ ರೆಡಿಯಾಗಿದ್ದು, ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ.

   ‘ಕಾಂಚಾನ 4’ ಸಿನಿಮಾ

ಮೃಣಾಲ್ ಠಾಕೂರ್ ಪ್ರಸ್ತುತ ಹಿಂದಿ ಸಿನಿಮಾ ‘ಪೂಜಾ ಮೇರಿ ಜಾನ್’ನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ‘ಕಾಂಚನಾ 4’ ಸೆಟ್ಟೇರಲಿದೆ.

    ಸಿನಿಮಾಗಳಲ್ಲಿ ಬ್ಯುಸಿ

ರಾಘವ್ ಲಾರೆನ್ಸ್ ಸಹ ಈಗ ಬೇರೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾದ ಬಳಿಕ ‘ಕಾಂಚನಾ 4’ ಪ್ರಾರಂಭಿಸಲಿದ್ದಾರೆ.

‘ಕಾಂಚನಾ 4’ ಪ್ರಾರಂಭ

ಅಜಿತ್ ಕುಮಾರ್ ಪುತ್ರಿಯ ಚಿತ್ರಗಳು ವೈರಲ್, ಚಿತ್ರರಂಗಕ್ಕೆ ಎಂಟ್ರಿ ಯಾವಾಗೆಂದ ಅಭಿಮಾನಿಗಳು