Pic credit - Instagram

Author: Rajesh Duggumane

ದೊಡ್ಡ ಕಂಬ್ಯಾಕ್ ನಿರೀಕ್ಷೆಯಲ್ಲಿ ನಟಿ ಪೂಜಾ ಹೆಗ್ಡೆ 

03 June 2026

ಪೂಜಾ ಎಂಟ್ರಿ

ಕರಾವಳಿ ಬೆಡಗಿ ಪೂಜಾ ಹೆಗ್ಡೆ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ಈ ವಾರ ಜೂನ್ 5 ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.

ಬಾಲಿವುಡ್ ಆಸೆ

ಬಹಳ ದಿನಗಳ ನಂತರ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಗಳಿಸಲು ಕಾಯುತ್ತಿರುವ ಪೂಜಾ ಪಾಲಿಗೆ ಈ ಕಾಮಿಡಿ ಚಿತ್ರ ಅತ್ಯಂತ ಪ್ರಮುಖವಾಗಿದೆ.

ದೊಡ್ಡ ಆಫರ್

ಮೊದಲ ದಿನವೇ ಟಿಕೆಟ್ ದರದಲ್ಲಿ ಶೇಕಡಾ ಐವತ್ತರಷ್ಟು ಭರ್ಜರಿ ರಿಯಾಯಿತಿ ಘೋಷಿಸಿರುವುದು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಪ್ಲಸ್ ಪಾಯಿಂಟ್ ಆಗಲಿದೆ.

ಸೌತ್ ಪೈಪೋಟಿ

ರಾಮ್ ಚರಣ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ‘ಪೆದ್ದಿ’ ಹಿಂದಿ ರಿಲೀಸ್ ಭೀತಿಯ ನಡುವೆಯೂ ಪೂಜಾ ಸಿನಿಮಾ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ನಾಯಕಿಯರ ಜಟಾಪಟಿ

ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ನಟಿ ಮೃಣಾಲ್ ಠಾಕೂರ್ ಇರುವುದರಿಂದ ಇಬ್ಬರು ಸುಂದರಿಯರ ನಟನೆಯ ಸಖತ್ ಜಟಾಪಟಿ ಪರದೆ ಮೇಲೆ ಮೂಡಿಬರಲಿದೆ.

ಸ್ಟಾರ್ ಕಾಂಬಿನೇಷನ್

ಖ್ಯಾತ ನಿರ್ದೇಶಕ ಡೇವಿಡ್ ಧವನ್ ಮತ್ತು ವರುಣ್ ಧವನ್ ಕಾಂಬಿನೇಷನ್ ಸಿನಿಮಾವನ್ನು ಗೆಲ್ಲಿಸಿ ಪೂಜಾ ಹೆಗ್ಡೆ ಕೈಹಿಡಿಯುತ್ತದೆ ಎಂಬ ನಂಬಿಕೆ ಇದೆ.

ಅಂತಿಮ ಪರೀಕ್ಷೆ

ಸತತ ಸೋಲುಗಳಿಂದ ಕಂಗಾಲಾಗಿರುವ ಪೂಜಾ ಹೆಗ್ಡೆ ಈ ಬಾರಿ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನಿಯಾಗಿ ಮತ್ತೆ ಮಿನುಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.