ಒಳ್ಳೆಯ ಸಿನಿಮಾ ಸಿಗುತ್ತಿಲ್ಲ, ಒಟಿಟಿ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ರಮ್ಯಾ
06 Feb 2025
Manjunatha
ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿರುವ ನಟಿ ರಮ್ಯಾ, ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳಲು ಸಜ್ಜಾಗಿದ್ದಾರೆ.
ರಾಜಕಾರಣಕ್ಕೆ ವಿದಾಯ
ಕಳೆದ ಕೆಲ ವರ್ಷಗಳಿಂದಲೂ ಒಳ್ಳೆಯ ಸಿನಿಮಾಕ್ಕಾಗಿ ಹುಡುಕಾಟ ನಡೆಸುತ್ತಿರುವ ರಮ್ಯಾಗೆ ಒಂದೊಳ್ಳೆ ಕತೆಯೇ ಸಿಗುತ್ತಿಲ್ಲವಂತೆ.
ಸಿನಿಮಾಕ್ಕಾಗಿ ಹುಡುಕಾಟ
ರಮ್ಯಾಗೆ ಬರುತ್ತಿರುವ ಕತೆಗಳನ್ನು ಅವರು ರಿಜೆಕ್ಟ್ ಮಾಡುತ್ತಿದ್ದಾರಂತೆ, 20 ವರ್ಷದ ಹಿಂದೆ ನಿರ್ವಹಿಸಿದ್ದ ರೀತಿಯ ಪಾತ್ರಗಳೇ ಬರುತ್ತಿವೆಯಂತೆ.
ರಿಜೆಕ್ಟ್ ಮಾಡುತ್ತಿದ್ದಾರಂತೆ
ಮಹಿಳಾ ಪ್ರಧಾನ ಸಿನಿಮಾಗಳನ್ನು ಕನ್ನಡ ಚಿತ್ರರಂಗ ಸೂಕ್ತ ರೀತಿಯಲ್ಲಿ ನಿರ್ಮಾಣ ಮಾಡತ್ತಿಲ್ಲ, ಮಲಯಾಳಂ ಚಿತ್ರರಂಗ ಚೆನ್ನಾಗಿ ಮಾಡುತ್ತಿದೆ ಎಂದಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾ
ಫಿಲಂ ಫೆಸ್ಟ್ನಲ್ಲಿ ಭಾಗವಹಿಸಿ ಮಾತನಾಡಿದ ನಟಿ ರಮ್ಯಾ, ಒಳ್ಳೆಯ ಸಬ್ಜೆಕ್ಟ್ ದೊರೆತರೆ ಒಟಿಟಿಯಲ್ಲಿ ನಟಿಸಲು ಸಹ ತಯಾರು ಇರುವುದಾಗಿ ಹೇಳಿದ್ದಾರೆ ಅವರು.
ಒಳ್ಳೆಯ ಸಬ್ಜೆಕ್ಟ್ ದೊರೆತರೆ
‘ಉತ್ತರಕಾಂಡ’ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ, ಆದರೆ ಅವರು ಸೀಕ್ವೆಲ್ ಮಾಡುತ್ತೀವಿ ಎನ್ನುತ್ತಿದ್ದಾರೆ. ಅಷ್ಟು ಸಮಯ ಕೊಡಲಾಗುತ್ತಿಲ್ಲ ಎಂದಿದ್ದಾರೆ.
‘ಉತ್ತರಕಾಂಡ’ ಸಿನಿಮಾ
ಕೆಲವರಷ್ಟೆ ರಮ್ಯಾಗೆ ಒಳ್ಳೆಯ ಚಿತ್ರಕತೆಗಳನ್ನು ಕೊಟ್ಟಿದ್ದಾರಂತೆ. ಆದರೆ ರಮ್ಯಾ ಯಾವುದನ್ನೂ ಇನ್ನೂ ಅಂತಿಮಗೊಳಿಸಿಲ್ಲ. ರಮ್ಯಾರ ಕಮ್ಬ್ಯಾಕ್ ಸಿನಿಮಾ ಯಾವುದಾಗಲಿದೆ ನೋಡಬೇಕು.
ರಮ್ಯಾರ ಕಮ್ಬ್ಯಾಕ್
ಕಮಲ್ ಹಾಸನ್, ಅಜಿತ್ ಕುಮಾರ್ ಬಳಿಕ ದಿಟ್ಟ ನಿರ್ಧಾರ ಕೈಗೊಂಡ ನಟಿ ನಯನತಾರಾ
ಇದನ್ನೂ ನೋಡಿ