Pic credit - Instagram

Author: Rajesh Duggumane

ಹಸೆಮಣೆ ಏರಲು ರೆಡಿ ಆದ ಕನ್ನಡದ ನಟಿ ರೂಪಿಕಾ 

18 June 2026

ಹೊಸ ಪಯಣ

ಸ್ಯಾಂಡಲ್‌ವುಡ್ ನಟಿ ಮತ್ತು ಭರತನಾಟ್ಯ ನೃತ್ಯಗಾರ್ತಿ ರೂಪಿಕಾ ಅವರು ತಮ್ಮ ಆಪ್ತರ ಸಮ್ಮುಖದಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಭಾವಿ ಪತಿ

ಇವರ ಕೈಹಿಡಿಯಲಿರುವ ಅಂಕಿತ್ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ ಐದು ವರ್ಷಗಳಿಂದ ಕೆನಡಾದ ಇನ್ವೆಸ್ಕೋ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿದ್ದಾರೆ.

ಸಂಗೀತ ಆಸಕ್ತಿ

ಅಂಕಿತ್ ಅವರು ಕೇವಲ ಹಣಕಾಸು ತಜ್ಞರಷ್ಟೇ ಅಲ್ಲದೆ ಮ್ಯೂಸಿಕಲ್ ಕಂಪೋಸರ್ ಕೂಡ ಆಗಿದ್ದು, ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ.

ಶುಭ ಮುಹೂರ್ತ

 ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಇವರ ವಿವಾಹ ಮಹೋತ್ಸವ ನಡೆಯಲಿದ್ದು, ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

ಬಾಲನಟಿ ಮೋಡಿ

ಕಿರುತೆರೆಯ 'ಬೆಳ್ಳಿಚುಕ್ಕಿ' ಮತ್ತು 'ಬದುಕು' ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ರೂಪಿಕಾ ತಮ್ಮ ನಟನಾ ಪಯಣ ಆರಂಭಿಸಿದ್ದರು.

ಚಿತ್ರರಂಗ ಪ್ರವೇಶ

ಇವರು 2009 ರಲ್ಲಿ ತೆರೆಕಂಡ 'ಚೆಲುವಿನ ಚಿಲಿಪಿಲಿ' ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿ ಸಖತ್ ಪ್ರಸಿದ್ಧಿ ಪಡೆದರು.

ಪ್ರಸ್ತುತ ಪಾತ್ರ

ಸದ್ಯ ಜೀ ಕನ್ನಡದ ಜನಪ್ರಿಯ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸಿಂಚನಾ ಎಂಬ ಪ್ರಮುಖ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದಾರೆ.