‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ವಿದಾಯ ಹೇಳಿದ ಸಂಜನಾ, ಕಾರಣವೇನು?
27 OCT 2024
Manjunatha
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸ್ನೇಹ ಪಾತ್ರ ಬಹಳ ಜನಪ್ರಿಯವಾಗಿತ್ತು, ಆತ್ಮವಿಶ್ವಾಸ, ಬುದ್ಧಿವಂತಿಕೆ ಇರುವ ಯುವತಿಯ ಪಾತ್ರವದು.
‘ಪುಟ್ಟಕ್ಕನ ಮಕ್ಕಳು’
ಹೆಣ್ಣು ಮಕ್ಕಳು ಇದ್ದರೆ ಸ್ನೇಹಾ ರೀತಿ ಇರಬೇಕು ಎಂದುಕೊಳ್ಳುವಂತೆ ಆ ಪಾತ್ರವನ್ನು ಶೇಪ್ ಮಾಡಲಾಗಿತ್ತು.
ಆದರ್ಶಮಯ ಪಾತ್ರ
ಸ್ನೇಹಾ ಪಾತ್ರದಲ್ಲಿ ನಟಿ ಸಂಜನಾ ಬುರ್ಲಿ ನಟಿಸುತ್ತಿದ್ದರು. ಆದರೆ ಈಗ ಸಂಜನಾ ಬುರ್ಲಿ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ವಿದಾಯ ಹೇಳಿದ್ದಾರೆ.
ನಟಿ ಸಂಜನಾ ಬುರ್ಲಿ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಜನಾ, ಇನ್ನು ಮುಂದೆ ತಾವು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.
ಧಾರಾವಾಹಿಲಿ ನಟಿಸಲ್ಲ
ವೈಯಕ್ತಿಕ ಜೀವನದಲ್ಲಿ ಕೆಲವು ಸವಾಲುಗಳು ಎದುರಾಗಿದ್ದು, ಅವುಗಳನ್ನು ಎದುರಿಸಲು ನಾನು ಈ ನಿರ್ಣಯ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.
ಕೆಲ ಸವಾಲು ಎದುರಾಗಿವೆ
ಮುಂದಿನ ದಿನಗಳಲ್ಲಿ ಇನ್ನೂ ಭಿನ್ನವಾದ ಪಾತ್ರದ ಮೂಲಕ ಭಿನ್ನ ರೂಪದಲ್ಲಿ ನಿಮ್ಮ ಎದುರು ಬರುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಅಭಿಮಾನಿಗಳಿಗೆ ಭರವಸೆ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರವನ್ನು ಕೊಲ್ಲಲಾಗಿದೆ. ಆಕೆಗೆ ಅಪಘಾತವಾಗಿ ನಿಧನ ಹೊಂದಿದಂತೆ ಕತೆ ಹೆಣೆಯಲಾಗಿದೆ.
ಸ್ನೇಹಾ ಪಾತ್ರ ಕೊಲ್ಲಲಾಗಿದೆ
ವಯಸ್ಸಾದವರೊಟ್ಟಿಗೆ ರೊಮ್ಯಾನ್ಸ್ ಮಾಡಲು ಬೇಜಾರಿಲ್ಲ: ಊರ್ವಶಿ ರೌಟೆಲಾ
ಇದನ್ನೂ ನೋಡಿ