ಹೊಸ ಸಿನಿಮಾಗಳ ಒಪ್ಪಿಕೊಳ್ಳುತ್ತಿಲ್ಲ ಶ್ರೀಲೀಲಾ : ಕಾರಣವಿದೆ

ನಟಿ ಶ್ರೀಲೀಲಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲವಂತೆ, ಅದಕ್ಕೆ ಕಾರಣವೂ ಇದೆ.

09 Mar 2024

TV9 Kannada Logo For Webstory First Slide

Author : Manjunatha

ಹೊಸ ಸಿನಿಮಾಗಳ ಒಪ್ಪಿಕೊಳ್ಳುತ್ತಿಲ್ಲ ಶ್ರೀಲೀಲಾ : ಕಾರಣವಿದೆ

ಕನ್ನಡ ಸಿನಿಮಾಗಳ ಮೂಲಕ ನಟನೆ ಆರಂಭಿಸಿದ ಕರ್ನಾಟಕದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿ.

ಕನ್ನಡದ ನಟಿ ಶ್ರೀಲೀಲಾ

ಹೊಸ ಸಿನಿಮಾಗಳ ಒಪ್ಪಿಕೊಳ್ಳುತ್ತಿಲ್ಲ ಶ್ರೀಲೀಲಾ : ಕಾರಣವಿದೆ

ಮಹೇಶ್ ಬಾಬು, ನಂದಮೂರಿ ಬಾಲಕೃಷ್ಣ, ರವಿತೇಜ, ರಾಮ್, ನಿತಿನ್ ಅಂಥಹಾ ದೊಡ್ಡ ನಟರುಗಳ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ ಶ್ರೀಲೀಲಾ.

ಸ್ಟಾರ್ ನಟರೊಟ್ಟಿಗೆ ನಟನೆ

ಹೊಸ ಸಿನಿಮಾಗಳ ಒಪ್ಪಿಕೊಳ್ಳುತ್ತಿಲ್ಲ ಶ್ರೀಲೀಲಾ : ಕಾರಣವಿದೆ

ಶ್ರೀಲೀಲಾಗೆ ಅವಕಾಶಗಳ ಮೇಲೆ ಅವಕಾಶಗಳು ಅರಸಿ ಬರುತ್ತಿವೆ. ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾಕ್ಕೆ ಮುಹೂರ್ತ ಸಹ ನಡೆಯಿತು.

ಹಲವು ಅವಕಾಶಗಳು

ಆದರೆ ಈಗ ಹಠಾತ್ತನೆ ಶ್ರೀಲೀಲಾ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ. ಇದಕ್ಕೆ ಬಲವಾದ ಕಾರಣವೂ ಇದೆ.

ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ

ಹಲವರಿಗೆ ಗೊತ್ತಿರುವಂತೆ ಶ್ರೀಲೀಲಾ ಬೆಂಗಳೂರಿನ ಜನಪ್ರಿಯ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ.

ಎಂಬಿಬಿಎಸ್ ವಿದ್ಯಾರ್ಥಿ

ಅವರ ಎಂಬಿಬಿಎಸ್ ಪದವಿಯ ಅಂತಿಮ ವರ್ಷದ ಪರೀಕ್ಷೆಗಳು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿವೆ. ಪರೀಕ್ಷೆಗೆ ಶ್ರೀಲೀಲಾ ತಯಾರಾಗಬೇಕಿದೆ.

ಅಂತಿಮ ವರ್ಷದ ಪರೀಕ್ಷೆ

ಪರೀಕ್ಷೆಗಳಿಗಾಗಿ ತಯಾರಾಗಲೆಂದು ಅದಕ್ಕಾಗಿ ಸಮಯ ಮೀಸಲಿಡಲೆಂದು ನಟಿ ಶ್ರೀಲೀಲಾ ಸಿನಿಮಾಗಳಿಂದ ಬಿಡುವು ಪಡೆದುಕೊಂಡಿದ್ದಾರೆ.

ಸಿನಿಮಾಗಳಿಂದ ಬಿಡುವು

‘ಪುಷ್ಪ 2’ ಸಿನಿಮಾದ ಐಟಂ ಹಾಡಿನಲ್ಲಿ ನಟಿಸುವ ಅವಕಾಶವೂ ಸಹ ಶ್ರೀಲೀಲಾಗೆ ಬಂದಿತ್ತು. ಆದರೆ ಅದನ್ನೂ ಸಹ ಪಕ್ಕಕ್ಕೆ ತಳ್ಳಿದ್ದಾರೆ ಶ್ರೀಲೀಲಾ.

ಪುಷ್ಪ 2 ಸಿನಿಮಾ ಅವಕಾಶ

ಶ್ರೀಲೀಲಾ, ವಿಜಯ್ ದೇವರಕೊಂಡ ಸಿನಿಮಾದಿಂದಲೂ ಹೊರಗೆ ಬಂದಿದ್ದಾರೆ. ಮತ್ತೊಬ್ಬ ಸ್ಟಾರ್ ನಟನ ಸಿನಿಮಾಕ್ಕೂ ಒಲ್ಲೆ ಎಂದಿದ್ದಾರೆ.

ಸಿನಿಮಾಗಳಿಗೆ ನೋ

ತನಿಷಾ ಕುಪ್ಪಂಡ ಅಂದ ಹೊಗಳಲು ಪದಗಳೇ ಸಾಲದು