Pic credit - Instagram

Author: Rajesh Duggumane

ಸುಭಾಷಿಣಿ ಸಾವಿನ ಸುತ್ತ ಅನುಮಾನದ ಹುತ್ತ 

07 April 2026

ಸುಭಾಷಿಣಿ 

ತಮಿಳು ಕಿರುತೆರೆ ನಟಿ ಸುಭಾಷಿಣಿ ಸುಬ್ತಮಣಿಯಂ ಅವರು ನಿಧನ ಹೊಂದಿದ್ದಾರೆ. 

ಏಪ್ರಿಲ್ 6 

ಏಪ್ರಿಲ್ 6ರಂದು ಅವರು ಚೆನ್ನೈನಲ್ಲಿ ಶವವಾಗಿ ಪತ್ತೆಯಾಗಿದ್ದು, ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. 

ಕಿತ್ತಾಟ 

ಸುಭಾಷಿಣಿ ಅವರು ಕೊನೆಯದಾಗಿ ಪತಿ ಜೊತೆ ಮಾತನಾಡಿದ್ದರು. ಈ ವೇಳೆ ಕಿತ್ತಾಟ ನಡೆದಿದೆ ಎನ್ನಲಾಗಿದೆ. 

ಅದಕ್ಕೆ ಬೇಸರ? 

ಈ ಕಾರಣಕ್ಕೆ ಸುಭಾಷಿಣಿ ಅವರು ಬೇಸರ ಮಾಡಿಕೊಂಡರೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. 

ಕೊಲೆ ಸಂಚು? 

ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕೊಲೆ ಸಂಚಿನ ಸಾಧ್ಯತೆಯನ್ನೂ ಊಹಿಸಿದ್ದಾರೆ. 

ತನಿಖೆ ಬಳಿಕ 

ತನಿಖೆ ಬಳಿಕವೇ ಈ ವಿಷಯದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಶೀಘ್ರವೇ ಪೊಲೀಸರು ತನಿಖೆ ಪೂರ್ಣಗೊಳಿಸಲಿದ್ದಾರೆ. 

ಕಯಲ್ 

ಕಯಲ್ ಹೆಸರಿನ ಧಾರಾವಾಹಿ ಮೂಲಕ  ಸುಭಾಷಿಣಿ ಜನಪ್ರಿಯತೆ ಪಡೆದುಕೊಂಡರು.