64 ವರ್ಷವಾದರೂ ಯಂಗ್ ಕಾಣುತ್ತಿರುವುದೇಕೆ? ಗುಟ್ಟು ಬಿಟ್ಟುಕೊಟ್ಟ ನಾಗಾರ್ಜುನ

15 Jan 2024

Author : Manjunatha

ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನಗೆ ಈಗ 65 ವರ್ಷ ವಯಸ್ಸು. ಈಗಲೂ ಯಂಗ್ ಆಗಿಯೇ ಕಾಣುತ್ತಾರೆ.

ಅಕ್ಕಿನೇನಿ ನಾಗಾರ್ಜುನ

ನಾಗಾರ್ಜುನ ಅವರ ಅಂದಕ್ಕೆ ಮೆಚ್ಚಿ ಅವರನ್ನು ‘ಮನ್ಮಥ’ ಎಂಬ ಅಡ್ಡ ಹೆಸರಿನಿಂದ ಅಭಿಮಾನಿಗಳು ಕರೆಯುತ್ತಾರೆ.

ಮನ್ಮಥ ನಾಗಾರ್ಜುನ

ತಮ್ಮ ಸಮಕಾಲೀನ ನಟರಾದ ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ ಅವರುಗಳ ಪೈಕಿ ಅತ್ಯಂತ ಯಂಗ್ ಆಗಿ ಕಾಣುತ್ತಾರೆ ನಾಗಾರ್ಜುನ.

ಯಂಗ್ ನಾಗಾರ್ಜುನ

ಇಷ್ಟು ಯಂಗ್ ಆಗಿ, ಈಗಲೂ ಎನರ್ಜೆಟಿಕ್ ಆಗಿ ಕಾಣಲು ನಾಗಾರ್ಜುನ ಏನು ಮಾಡುತ್ತಾರೆ? ಗುಟ್ಟೊಂದನ್ನು ಅವರು ರಟ್ಟು ಮಾಡಿದ್ದಾರೆ.

ನಾಗಾರ್ಜುನ ಗುಟ್ಟು ರಟ್ಟು

ಆಸ್ಕರ್ ವಿಜೇತ ಎಂಎಂ ಕೀರವಾಣಿ ಹಾಗೂ ಚಂದ್ರಭೋಸ್ ಜೊತೆಗಿನ ಸಂದರ್ಶನದಲ್ಲಿ ನಾಗಾರ್ಜುನ ಈ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಅಕ್ಕಿನೇನಿ

‘ನಾನು ಯಾವುದೇ ಡಯಟ್ ಮಾಡುವುದಿಲ್ಲ. ಚಿಕನ್, ಫಿಶ್ ನನಗೆ ಇಷ್ಟ, ಬಹುತೇಕ ಪ್ರತಿದಿನವೂ ಅದನ್ನು ತಿನ್ನುತ್ತೇನೆ’ ಎಂದಿದ್ದಾರೆ.

ನಾಗಾರ್ಜುನ ಆಹಾರ ಕ್ರಮ

ಕೆಂಪಕ್ಕಿ ಅನ್ನ, ಸಾರು, ಚಿಕನ್, ಮೊಸರು, ಪ್ರತಿರಾತ್ರಿ ಏನಾದರೂ ಒಂದು ಸಿಹಿ ಇದೆಲ್ಲ ಇಲ್ಲದೆ ನನ್ನ ಊಟ ಪೂರ್ಣವಾಗದು ಎಂದಿದ್ದಾರೆ ನಾಗಾರ್ಜುನ.

ದಿನವೂ ಇರಬೇಕು ಇವು

ಆದರೆ ನಾನು ಪ್ರತಿದಿನವೂ ತಪ್ಪದೇ ವ್ಯಾಯಾಮ ಮಾಡುತ್ತೇನೆ. ಅದಕ್ಕಾಗಿ ಕನಿಷ್ಟ ಒಂದು ಗಂಟೆಯನ್ನು ತಪ್ಪದೆ ಎತ್ತಿಡುತ್ತೇನೆ.

ಫಿಟ್ ಆಗಿರುವುದು ಹೇಗೆ

ಕಳೆದ 35 ವರ್ಷಗಳಿಂದಲೂ ನಾನು ವ್ಯಾಯಾಮವನ್ನು ತಪ್ಪಿಸಿದ್ದಿಲ್ಲ. ಇದರಿಂದಾಗಿ ಏನೇ ತಿಂದರು, ಎಷ್ಟೇ ತಿಂದರು ವ್ಯಾಯಾಮ, ಕ್ಯಾಲರಿಗಳನ್ನು ಕರಗಿಸಿ ಆರೋಗ್ಯ ನೀಡುತ್ತದೆ ಎಂದಿದ್ದಾರೆ.

35 ವರ್ಷ ವ್ಯಾಯಾಮ

2024ರ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಆಯೆಷಾ ಖಾನ್ ಯಾರು? ಹಿನ್ನೆಲೆ ಏನು?