ಈ ವರ್ಷದ ನ್ಯಾಷನಲ್ ಕ್ರಶ್ ಎನಿಸಿಕೊಳ್ಳುತ್ತಿರುವ ಆಯೆಷಾ ಖಾನ್, ಯಾರೀಕೆ?

11 Jan 2024

Author : Manjunatha

ಕಾಲಕಾಲಕ್ಕೆ ಕೆಲವು ನಟಿಯರು ‘ನ್ಯಾಷನಲ್ ಕ್ರಶ್’ ಸ್ಥಾನ ಅಲಂಕರಿಸುತ್ತಲೇ ಬಂದಿದ್ದಾರೆ. ಇದೀಗ ನೆಟ್ಟಿಗರಿಗೆ ಹೊಸ ಕ್ರಶ್ ಒಬ್ಬರು ಸಿಕ್ಕಿದ್ದಾರೆ.

‘ನ್ಯಾಷನಲ್ ಕ್ರಶ್’

2024ರ ಹೊಸ ನ್ಯಾಷನ್ ಕ್ರಶ್ ಎಂದು ಆಯೆಷಾ ಖಾನ್​ರನ್ನು ಕರೆಯಲಾಗುತ್ತಿದೆ. ಕೆಲವು ಇನ್​ಸ್ಟಾ ಪೇಜ್​ಗಳಲ್ಲಿ ಆಯೆಷಾ ಖಾನ್ ಚಿತ್ರಗಳು ರಾರಾಜಿಸುತ್ತಿವೆ.

ಹೊಸ ನ್ಯಾಷನಲ್ ಕ್ರಶ್

ಆಯೆಷಾ ಖಾನ್ ಬಿಗ್​ಬಾಸ್ ಹಿಂದಿ ಸೀಸನ್ 17ರ ಸ್ಪರ್ಧಿ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆ ಪ್ರವೇಶಿಸಿದ್ದಾರೆ. ಆ ಮೂಲಕ ಮನೆಯ ಸದಸ್ಯರ ಸಮೀಕರಣವನ್ನೇ ಬದಲಿಸಿಬಿಟ್ಟಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ

ಆಯೆಷಾ ಖಾನ್​ರ ಮಾತನಾಡುವ ರೀತಿ, ಕ್ಯೂಟ್ ಕ್ಯೂಟ್ ವರ್ತನೆಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ. ಆದರೆ ಮನೆಯ ಕೆಲವು ಸದಸ್ಯರಿಗೆ ಆಯೆಷಾರಿಂದ ಸಮಸ್ಯೆಯೂ ಆಗಿದೆ.

ಪ್ರೇಕ್ಷಕರಿಗೆ ಇಷ್ಟವಾಗಿದೆ

ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿರುವ ಮುನಾವರ್ ಫಾರುಖಿಯ ಮಾಜಿ ಗೆಳತಿಯಾಗಿರುವ ಆಯೆಷಾ ಖಾನ್, ಮುನಾವರ್ ವಿರುದ್ಧವಾಗಿ ಮನೆಯಲ್ಲಿ ಅಭಿಪ್ರಾಯ ಭಿತ್ತಿದ್ದಾರೆ.

ಮುನಾವರ್ ಮಾಜಿ ಗೆಳತಿ

ಮುನಾವರ್ ಫಾರುಖಿಯ ಕಠಿಣ ಮಾತುಗಳಿಂದ ಒತ್ತಡಕ್ಕೆ ಒಳಗಾಗಿ ಬಿಗ್​ಬಾಸ್ ಮನೆಯಲ್ಲಿ ಆಯೆಷಾ ಪ್ರಜ್ಞೆ ತಪ್ಪಿ ಬಿದ್ದ ಘಟನೆಯೂ ನಡೆದಿದೆ.

ಪ್ರಜ್ಞೆ ತಪ್ಪಿದ್ದ ಆಯೆಷಾ

ಆಯೆಷಾ ಖಾನ್ ಜನಪ್ರಿಯ ಟಿವಿ ತಾರೆ. ‘ಕಸೌಟಿ ಜಿಂದಗೀ ಕಿ’ ಸೇರಿದಂತೆ ಹಲವು ಹಿಂದಿ ಧಾರಾವಾಹಿಗಳಲ್ಲಿ ಆಯೆಷಾ ನಟಿಸಿದ್ದಾರೆ.

ಧಾರಾವಾಹಿಗಳಲ್ಲಿ ನಟನೆ

ಆಯೆಷಾ ಖಾನ್ ತಮ್ಮ ಗ್ಲಾಮರಸ್, ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಇಲ್ಲಿವೆ ಅವರ ಕೆಲವು ಚಿತ್ರಗಳು.

ಗ್ಲಾಮರಸ್ ನಟಿ ಆಯೆಷಾ

ಚಿತ್ರರಂಗದಿಂದ ದೂರಾಗುತ್ತಿರುವ ಪೂಜಾ ಹೆಗ್ಡೆ, ಇದೆ ಪ್ರಬಲ ಕಾರಣ