ನಟಿ ಆಲಿಯಾ ಭಟ್ ಮತ್ತೊಮ್ಮೆ ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ.

24 Nov 2023

ಆಲಿಯಾ ಭಟ್ ಬಾಲಿವುಡ್​ನ ಪ್ರತಿಭಾವಂತ ಬೇಡಿಕೆಯ ನಟಿ. ಭಿನ್ನ ರೀತಿಯ ಪಾತ್ರಗಳ ಮೂಲಕ ಪ್ರತಿಭೆ ಸಾಬೀತು ಪಡಿಸಿದ್ದಾರೆ.

ಬೇಡಿಕೆಯ ನಟಿ

‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ನಟನೆಗೆ ಇತ್ತೀಚೆಗಷ್ಟೆ ರಾಷ್ಟ್ರಪ್ರಶಸ್ತಿಯನ್ನೂ ಸಹ ಆಲಿಯಾ ಪಡೆದಿದ್ದಾರೆ.

ರಾಷ್ಟ್ರಪ್ರಶಸ್ತಿ

ಆಲಿಯಾ ಭಟ್ ಈಗಾಗಲೇ ಒಂದು ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಹೆಸರು ‘ಹಾರ್ಟ್ ಆಫ್ ಸ್ಟೋನ್ಸ್’

‘ಹಾರ್ಟ್ ಆಫ್ ಸ್ಟೋನ್ಸ್’

ಆಲಿಯಾ ಗರ್ಭಿಣಿ ಆಗಿದ್ದಾಗಲೇ ಆ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಯಿತಾದರೂ ಹೆಚ್ಚೇನು ಸದ್ದು ಮಾಡಲಿಲ್ಲ.

ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ

ಇದೀಗ ಆಲಿಯಾ ಭಟ್ ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಾಲಿವುಡ್ ಸಿನಿಮಾ

ಹಾಲಿವುಡ್​ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದರ ಆಕ್ಷನ್ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಆಲಿಯಾ ಭಟ್

ಆಲಿಯಾ ಭಟ್ ಪ್ರಸ್ತುತ ‘ಜಿಗ್ರಾ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಅವರು ನಿರ್ಮಾಪಕಿಯೂ ಹೌದು.

‘ಜಿಗ್ರಾ’ ಸಿನಿಮಾ

ಪ್ರತಿಭಾವಂತ ನಟಿ ಆಲಿಯಾ ಭಟ್​ ಬಾಲಿವುಡ್​ನಲ್ಲಿ ಮಿಂಚುತ್ತಿರುವಂತೆ ಹಾಲಿವುಡ್​ನಲ್ಲಿಯೂ ಮಿಂಚಲಿ ಎಂಬುದು ಅಭಿಮಾನಿಗಳ ಬಯಕೆ.

ಹಾಲಿವುಡ್​ನಲ್ಲಿ ಮಿಂಚಲಿ

ವಿವಾದದಲ್ಲಿ ತ್ರಿಷಾ ಹೆಸರು ಇಲ್ಲಿದೆ ವಿವರ