ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಮೆಟಲ್ ಉಡುಗೆ ತೊಟ್ಟು ಮಿಂಚು ಹರಿಸಿದ ಆಲಿಯಾ

24  SEP 2024

 Manjunatha

ನಟಿ ಆಲಿಯಾ ಭಟ್ ಬಾಲಿವುಡ್​ ಮಾತ್ರವಲ್ಲ ಹಾಲಿವುಡ್ ನಟಿಯೂ ಹೌದು. ಈಗಾಗಲೇ ಒಂದು ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ.

    ನಟಿ ಆಲಿಯಾ ಭಟ್

ಮೊದಲ ಹಾಲಿವುಡ್ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿಲ್ಲವಾದರೂ ಇನ್ನೂ ಕೆಲ ಆಫರ್​ಗಳು ಆಲಿಯಾಗೆ ಬಂದಿವೆ.

ಆಲಿಯಾ ಹಾಲಿವುಡ್ ಚಿತ್ರ

ಇದರ ನಡುವೆ ಆಲಿಯಾ ಕೆಲವು ವಿದೇಶಿ ಫ್ಯಾಷನ್ ಬ್ರ್ಯಾಂಡ್​ಗಳ ಅಧಿಕೃತ ರಾಯಭಾರಿಯೂ ಆಗಿದ್ದಾರೆ.

    ಅಧಿಕೃತ ರಾಯಭಾರಿ

ಹಲವು ವಿದೇಶಿ ಫ್ಯಾಷನ್ ಶೋಗಳಲ್ಲಿ ಆಲಿಯಾ ಈ ಹಿಂದೆ ಭಾಗಿಯಾಗಿದ್ದರು. ಈಗ ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಭಾಗಿಯಾಗಿದ್ದಾರೆ.

    ವಿದೇಶಿ ಫ್ಯಾಷನ್ ಶೋ

ಪ್ರತಿಷ್ಠಿತ ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಭಾಗಿಯಾಗಿದ್ದ ನಟಿ ಆಲಿಯಾ ಭಟ್, ಮೆಟಲ್ ಉಡುಪು ಧರಿಸಿ ರ್ಯಾಂಪ್ ವಾಕ್ ಮಾಡಿದ್ದಾರೆ.

       ಮೆಟಲ್ ಉಡುಪು

ಆಲಿಯಾ ಭಟ್ ಮಾತ್ರವೇ ಅಲ್ಲದೆ ಹಲವು ಖ್ಯಾತನಾಮ ನಟಿಯರು, ಮಾಡೆಲ್​ಗಳು ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

  ಪ್ಯಾರಿಸ್ ಫ್ಯಾಷನ್ ವೀಕ್

ಆಲಿಯಾ ನಟನೆಯ ‘ಜಿಗರ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಲ್ಲಿ ಆಲಿಯಾ ನಟಿಸಿದ್ದಾರೆ.

         ‘ಜಿಗರ’ ಸಿನಿಮಾ

ಥಾಯ್ಲೆಂಡ್ ನಲ್ಲಿ ಚಿಲ್ ಮಾಡುತ್ತಿರುವ ಗ್ಲಾಮರಸ್ ಚೆಲುವೆ ನೇಹಾ ಶರ್ಮಾ