ಬಾಲಿವುಡ್ ನಟಿ ಆಲಿಯಾ ಭಟ್ ವಾರ್ಷಿಕ ಆದಾಯ ಎಷ್ಟು ಕೋಟಿ ಗೊತ್ತೆ?
29 AUG 2024
Manjunatha
ಆಲಿಯಾ ಭಟ್, ಬಾಲಿವುಡ್ನ ಟಾಪ್ ನಟಿ, ರಾಷ್ಟ್ರಪ್ರಶಸ್ತಿ ಪಡೆದಿರುವುದು ಮಾತ್ರವಲ್ಲದೆ ಸತತವಾಗಿ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ.
ಬಾಲಿವುಡ್ನ ಟಾಪ್ ನಟಿ
ಆಲಿಯಾ ಭಟ್, ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ಪ್ರಮುಖ ನಟಿಯರಲ್ಲಿ ಒಬ್ಬರು. ದೀಪಿಕಾ ಪಡುಕೋಣೆ ಸಹ ಹೆಚ್ಚು ಸಂಭಾವನೆ ಪಡೆಯುತ್ತಾರೆ.
ಹೆಚ್ಚು ಸಂಭಾವನೆ ಪಡೆವ
ಆಲಿಯಾ ಭಟ್, ಬಾಲಿವುಡ್ನ ಈಗಿನ ಜನಪ್ರಿಯ ನಟಿಯರಲ್ಲಿ ಅತಿ ಹೆಚ್ಚು ಶ್ರೀಮಂತ ನಟಿಯೂ ಹೌದು. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 600 ಕೋಟಿ ರೂಪಾಯಿಗಳು.
ಶ್ರೀಮಂತ ನಟಿ ಆಲಿಯಾ
ಆಲಿಯಾ ಭಟ್ ಕೇವಲ ಸಿನಿಮಾ ಸಂಭಾವನೆಯಿಂದ ಮಾತ್ರವೇ ಅಲ್ಲದೆ, ಹಲವು ಉದ್ಯಮಗಳಿಂದಲೂ ದೊಡ್ಡ ಮೊತ್ತದ ಆದಾಯ ಗಳಿಸುತ್ತಾರೆ.
ಉದ್ಯಮಗಳಲ್ಲಿ ಹೂಡಿಕೆ
ಅಂದಹಾಗೆ ಆಲಿಯಾ ಭಟ್ರ ವಾರ್ಷಿಕ ಆದಾಯ ಸುಮಾರು 60 ಕೋಟಿ ರೂಪಾಯಿಗಳು. ಸಿನಿಮಾ, ಉದ್ಯಮ ಎಲ್ಲದರಿಂದಲೂ ಆಲಿಯಾಗೆ ಆದಾಯ ಬರುತ್ತದೆ.
ವಾರ್ಷಿಕ ಆದಾಯ
ಆಲಿಯಾ ಭಟ್, ಪ್ರಸ್ತುತ ‘ಜಿಗ್ರಾ’ ಮತ್ತು ‘ಆಲ್ಫಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿಯ ಹೊಸ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಮುಂದಿನ ಸಿನಿಮಾಗಳು
2022 ರಲ್ಲಿ ತಾಯಿಯಾಗಿರುವ ಆಲಿಯಾ ಭಟ್, ತಾಯಿಯಾದ ಬಳಿಕ ನಟನೆಯನ್ನು ತುಸು ಕಡಿಮೆ ಮಾಡಿದ್ದಾರಂತೆ. ಮೊದಲಿನಂತೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ.
ಮಗಳ ಜವಾಬ್ದಾರಿ
ತೆಲುಗು, ತಮಿಳಿನಲ್ಲಿ ಬ್ಯುಸಿಯಾದ ಮೀರಾ ಜಾಸ್ಮಿನ್, ಕನ್ನಡಕ್ಕೆ ಯಾವಾಗ?
ಇದನ್ನೂ ನೋಡಿ