ಆಲಿಯಾ ಭಟ್ ಧರಿಸಿರುವ ಈ ಜೀನ್ಸ್ ಉಡುಗೆಯ ಬೆಲೆ ಎಷ್ಟೆಂದು ಊಹಿಸಬಲ್ಲಿರಾ?

26 May 2024

Author : Manjunatha

ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ನಟನೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

    ನಟಿ ಆಲಿಯಾ ಭಟ್

ವಿದೇಶಿ ಸಿನಿಮಾಗಳಲ್ಲಿಯೂ ನಟಿಸಿರುವ ಆಲಿಯಾ, ಪ್ರತಿಷ್ಠಿತ ವಿದೇಶಿ ಫ್ಯಾಷನ್ ಉತ್ಸವಗಳಲ್ಲಿ ಸಹ ಭಾಗವಹಿಸುತ್ತಿದ್ದಾರೆ.

ವಿದೇಶಿ ಫ್ಯಾಷನ್ ಉತ್ಸವ

ಗುಚ್ಚಿ, ಬೆಲೆನ್ಸಿಯಾಗಾ ಸೇರಿದಂತೆ ಹಲವು ಜಗದ್​ಪ್ರಸಿದ್ಧ ಬ್ರ್ಯಾಂಡ್​ಗಳ ಫ್ಯಾಷನ್ ರಾಯಭಾರಿಯಾಗಿದ್ದಾರೆ ಆಲಿಯಾ.

ಗುಚ್ಚಿ, ಬೆಲೆನ್ಸಿಯಾಗಾ

ಇತ್ತೀಚೆಗೆ ಆಲಿಯಾ ತಮ್ಮ ಕೆಲವು ಮಾದಕ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಆಲಿಯಾ ಧರಿಸಿರುವ ಉಡುಗೆ ಗಮನ ಸೆಳೆಯುತ್ತಿದೆ.

  ಆಲಿಯಾ ಮಾದಕ ಚಿತ್ರ

ಆಲಿಯಾ ಜೀನ್ಸ್​ನಿಂದ ಮಾಡಿರುವ ಸರಳವಾದ ಉಡುಗೆಯನ್ನು ತೊಟ್ಟುಕೊಂಡಿದ್ದಾರೆ. ಈ ಉಡುಗೆಯ ಬೆಲೆ ಎಷ್ಟು ಗೊತ್ತೆ?

    ಸರಳವಾದ ಉಡುಗೆ

ಆಲಿಯಾ ಧರಿಸಿರುವ ಈ ಉಡುಗೆಯ ಬೆಲೆ ಬರೋಬ್ಬರಿ 1.29 ಲಕ್ಷ ರೂಪಾಯಿಗಳು. ಈ ಉಡುಗೆ ಡೆನಿಮ್​ ಬ್ರ್ಯಾಂಡ್​ನದ್ದು.

ಉಡುಗೆಯ ಬೆಲೆ ಎಷ್ಟು?

ಈಗಾಗಲೇ ಗುಸ್ಸಿ, ಬೆಲೆನ್ಸಿಯಾಗಾ ಸೇರಿದಂತೆ ಐಶಾರಾಮಿ ಬ್ರ್ಯಾಂಡ್​ಗಳ ರಾಯಭಾರಿ ಆಗಿರುವ ಆಲಿಯಾ ಡೆನಿಮ್​ಗೂ ರಾಯಭಾರಿ ಆಗಿದ್ದಾರೆ.

ಬ್ರ್ಯಾಂಡ್​ಗಳ ರಾಯಭಾರಿ

ಚಿತ್ರದಲ್ಲಿ ಆಲಿಯಾ ಭಟ್ ಧರಿಸಿರುವ ಚಪ್ಪಲಿ ಗುಚ್ಚಿ ಬ್ರ್ಯಾಂಡ್​ನದ್ದು. ಇದರ ಬೆಲೆ ಸುಮಾರು 1.50 ಲಕ್ಷ ರೂಪಾಯಿ.

   ಚಪ್ಪಲಿ ಗುಚ್ಚಿ ಯದ್ದು

ಆಲಿಯಾ ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಒಂದು ಹಾಲಿವುಡ್ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ.

ಹಲವು ಸಿನಿಮಾನಲ್ಲಿ ಬ್ಯುಸಿ

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಪತ್ನಿ ನತಾಶಾ ಯಾರು? ಅವರ ಹಿನ್ನೆಲೆ ಏನು?