ಅನನ್ಯಾ ಪಾಂಡೆ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆಗೆ ಒಂದು ಹೊಸ ಕಾರು ಕೊಳ್ಳಬಹುದು!

14 July 2024

 Manjunatha

ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಫ್ಯಾಷನ್ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಇತ್ತೀಚೆಗೆ ಅಂಬಾನಿ ಮದುವೆಯಲ್ಲಿಯೂ ಸಖತ್ ಗಮನ ಸೆಳೆದಿದ್ದರು.

   ಬೆಡಗಿ ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಸರಳವಾಗಿ ಟಿ-ಶರ್ಟ್, ಜೀನ್ಸ್ ತೊಟ್ಟಿದ್ದರಾದರೂ ಅವರ ಕೈಲಿದ್ದ ಬ್ಯಾಗು ಗಮನ ಸೆಳೆಯಿತು.

  ಅನನ್ಯಾ ಪಾಂಡೆ ಬ್ಯಾಗು

ಅನನ್ಯಾ ಪಾಂಡೆ ಹೆಗಲಿಗೆ ನೇತು ಬಿದ್ದಿರುವ ಈ ಬ್ಯಾಗು ಸರಳವಾಗಿ ಕಂಡರು ಬಹಳ ದುಬಾರಿ. ಒಂದು ಸ್ವಿಫ್ಟ್ ಕಾರು ಕೊಳ್ಳಬಹುದು ಈ ಬ್ಯಾಗಿನ ಬೆಲೆಗೆ.

ಸ್ವಿಫ್ಟ್ ಕಾರು ಕೊಳ್ಳಬಹುದು

ಬೋಗೆಟಾ ವೆನೆಟಾ ಬ್ರ್ಯಾಂಡ್​ನ ಈ ಬ್ಯಾಗಿನ ನಿಖರವಾದ ಬೆಲೆ ಬರೋಬ್ಬರಿ 8.14 ಲಕ್ಷ ರೂಪಾಯಿಗಳು. ಇಂಥಹಾ ಹಲವು ಬ್ಯಾಗು ಅನನ್ಯಾ ಬಳಿ ಇವೆ.

    ಬ್ಯಾಗಿನ ಬೆಲೆ ಎಷ್ಟು?

ಬೋಗೆಟಾ ವೆನೆಟಾ ಇಟಲಿಯ ಜನಪ್ರಿಯ ಲಕ್ಷುರಿ ಬ್ರ್ಯಾಂಡ್​. ಇಟಲಿ ಹಲವು ಲಕ್ಷುರಿ ಬ್ರ್ಯಾಂಡ್​ಗಳ ಉಗಮ ಸ್ಥಾನ ಅದರಲ್ಲಿ ಬೋಗೆಟಾ ವೆನೆಟಾ ಸಹ ಒಂದು.

ಇಟಲಿ ಬೋಗೆಟಾ ವೆನೆಟಾ

ಬೋಗೆಟಾ ವೆನೆಟಾ ಅನನ್ಯಾರ ಫೇವರೇಟ್ ಬ್ರ್ಯಾಂಡ್​ ಈ ಬ್ರ್ಯಾಂಡ್​ನ ಬ್ಯಾಗುಗಳು ಮಾತ್ರವಲ್ಲ ಹಲವು ಬಟ್ಟೆಗಳು ಸಹ ಅನನ್ಯಾ ಪಾಂಡೆ ಬಳಿ ಇವೆ.

     ಬಟ್ಟೆಗಳು ಸಹ ಇವೆ

ಅನನ್ಯಾ ಪಾಂಡೆ ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ತೆಲುಗು ಸಿನಿಮಾದಲ್ಲಿ ನಟಿಸಿದ್ದ ಅನನ್ಯಾ, ಇದೀಗ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

      ದಕ್ಷಿಣದ ಸಿನಿಮಾ

ರಣ್ವೀರ್ ಸಿಂಗ್ ಧರಿಸಿರುವ ಈ ಕಪ್ಪು ಬಣ್ಣದ ಶೇರ್ವಾನಿ ಉಡುಪಿನ ಬೆಲೆ ಎಷ್ಟು ಲಕ್ಷ?