Ananya-Pandey1

ಬಾಲಿವುಡ್ ನಟಿ ಅನನ್ಯಾ ಪಾಂಡೆ ಧರಿಸಿರುವ ಈ ಸೀದಾ-ಸಾದಾ ಉಡುಪಿನ ಬೆಲೆ ಕೆಲವು ಲಕ್ಷಗಳು

126 July 2024

 Manjunatha

TV9 Kannada Logo For Webstory First Slide

ನಟಿ ಅನನ್ಯಾ ಪಾಂಡೆ ಬಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರು. ತಮ್ಮ ಅಭಿನಯಕ್ಕಿಂತಲೂ ಗ್ಲಾಮರ್​ನಿಂದ ಹೆಚ್ಚು ಗಮನ ಸೆಳೆದಿದ್ದಾರೆ.

    ನಟಿ ಅನನ್ಯಾ ಪಾಂಡೆ

ನೆಪೊಟಿಸಮ್ ವಿಚಾರವಾಗಿ ಅತಿ ಹೆಚ್ಚು ಟ್ರೋಲ್ ಆಗುವ ನಟಿಯರಲ್ಲಿ ಅನನ್ಯಾ ಸಹ ಒಬ್ಬರು. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮುಂದುವರೆಯುತ್ತಾರೆ.

    ಟ್ರೋಲ್ ಆಗುವ ನಟಿ

ಅನನ್ಯಾ, ಇತರ ಬಾಲಿವುಡ್ ಯುವನಟಿಯರಂತೆ ಗ್ಲಾಮರಸ್ ಹಾಗೂ ಸ್ಟೈಲ್ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಸದಾ ದುಬಾರಿ ಉಡುಗೆಯನ್ನೇ ಧರಿಸುತ್ತಾರೆ.

   ಸ್ಟೈಲ್ ಮೇಲೆ  ಗಮನ

ಇತ್ತೀಚೆಗೆ ವಿಮಾನ ನಿಲ್ದಾಣಕ್ಕೆ ಹೋಗುವಾಗ ಅನನ್ಯಾ ಉಡುಗೆಯೊಂದನ್ನು ಧರಿಸಿದ್ದರು. ನೋಡಲು ಸರಳವಾಗಿ ಕಂಡರು ಉಡುಗೆಯ ಬೆಲೆ ಕೆಲ ಲಕ್ಷಗಳು.

  ಅನನ್ಯಾ ಪಾಂಡೆ ಉಡುಗೆ

ಅನನ್ಯಾ ಧರಿಸಿರುವ ಈ ಉದ್ದನೆಯ ಸ್ಟಿಟ್ ಗೌನ್ ಮಾದರಿಯ ಉಡುಗೆಯ ಬೆಲೆ 2.54 ಲಕ್ಷ ರೂಪಾಯಿಗಳು ಎಂದರೆ ನೀವು ನಂಬಲೇ ಬೇಕು.

  ಉಡುಗೆಯ ಬೆಲೆ ಎಷ್ಟು?

ಅನನ್ಯಾ ಧರಿಸಿರುವ ಉಡುಪಿನ ಹೆಸರು ಗ್ರೇ ಬೇಬಿಕಾನ್ ಡ್ರೆಸ್, ವಿದೇಶದ ಜನಪ್ರಿಯ ಬ್ರ್ಯಾಂಡ್​ನ ಉಡುಗೆ ಇದು. ಅನನ್ಯಾ ಧರಿಸಿರುವ ಚಪ್ಪಲಿ ಬೆಲೆ 60 ಸಾವಿರ ರೂಪಾಯಿ.

    ಗ್ರೇ ಬೇಬಿಕಾನ್ ಡ್ರೆಸ್

ಅನನ್ಯಾ ಹೆಗಲಿಗೆ ಧರಿಸಿರುವ ಬ್ಯಾಗಿನ ಬೆಲೆಯೂ ಕಡಿಮೆ ಏನಿಲ್ಲ. ಗುಸ್ಸಿ ಬ್ರ್ಯಾಂಡ್​ನ ಈ ಬ್ಯಾಗಿನ ಬೆಲೆ ಬರೋಬ್ಬರಿ 2.50 ಲಕ್ಷ ರೂಪಾಯಿಗಳು.

   ಬ್ಯಾಗಿನ ಬೆಲೆ ಎಷ್ಟು?

ಮತ್ತೊಮ್ಮೆ ದಳಪತಿ ವಿಜಯ್ ಜೊತೆ ನಟಿಸಲಿದ್ದಾರೆ ಶ್ರುತಿ ಹಾಸನ್