ಆ ರೀತಿಯ ಸಿನಿಮಾಗಳ ನೋಡಲ್ಲ, ನಟಿಸುವ ಅವಕಾಶ ಸಿಕ್ಕರೆ ಬಿಡಲ್ಲ ಎಂದಿದ್ದಾರೆ ನಟಿ ಆಂಡ್ರಿಯಾ.

29 Mar 2024

Author : Manjunatha

ನಟಿ, ಗಾಯಕಿ ಆಂಡ್ರಿಯಾ ಜೆರ್ಮಿಯಾ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿದ್ದು, ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಆಂಡ್ರಿಯಾ ಜೆರ್ಮಿಯಾ

‘ಆಯರತ್ತಿಲ್ ಒರುವನ್’, ‘ವಿಶ್ವರೂಪಂ’, ‘ಮಂಕಾತ’, ‘ವರ ಚೆನ್ನೈ’, ‘ಮಾಸ್ಟರ್’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಆಂಡ್ರಿಯಾ ನಟಿಸಿದ್ದಾರೆ.

ಸೂಪರ್ ಹಿಟ್ ಸಿನಿಮಾ

ಇದೀಗ ಆಂಡ್ರಿಯಾ ನಟಿಸಿರುವ ‘ಕಾ: ದಿ ಫಾರೆಸ್ಟ್’ ಸಿನಿಮಾ ಬಿಡುಗಡೆ ಆಗಲಿದ್ದು, ಈ ಹಾರರ್ ಥ್ರಿಲ್ಲರ್ ಸಿನಿಮಾನಲ್ಲಿ ಆಂಡ್ರಿಯಾರದ್ದು ಪ್ರಧಾನ ಪಾತ್ರ.

‘ಕಾ: ದಿ ಫಾರೆಸ್ಟ್’ ಸಿನಿಮಾ

ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಆಂಡ್ರಿಯಾ, ತಮಗೆ ಯಾವ ರೀತಿಯ ಸಿನಿಮಾ ಇಷ್ಟ ಎಂಬುದನ್ನು ಹೇಳಿಕೊಂಡಿದ್ದಾರೆ.

   ಸಿನಿಮಾದ ಪ್ರಚಾರ

ನನಗೆ ಹಾರರ್ ಸಿನಿಮಾಗಳು ನೋಡಲು ಇಷ್ಟವಿಲ್ಲ, ಹಿಂಸೆ, ಹಾರರ್ ಇದ್ದರೆ ನಾನು ನೋಡುವುದಿಲ್ಲ, ಆದರೆ ನಟಿಸುವ ಅವಕಾಶ ಸಿಕ್ಕರೆ ಬಿಡಲ್ಲ ಎಂದಿದ್ದಾರೆ.

ಹಾರರ್  ಇಷ್ಟವಿಲ್ಲ

ಆಂಡ್ರಿಯಾ ಒಳ್ಳೆಯ ನಟಿಯಾಗಿರುವ ಜೊತೆಗೆ ಬಹಳ ಒಳ್ಳೆಯ ಹಾಡುಗಾರ್ತಿ ಸಹ. ಹಲವು ಹಾಡುಗಳನ್ನು ಆಂಡ್ರಿಯಾ ಹಾಡಿದ್ದಾರೆ.

ಒಳ್ಳೆಯ ಹಾಡುಗಾರ್ತಿ

ಆಂಡ್ರಿಯಾ ಬಹಳ ಚೆನ್ನಾಗಿ ವೈಯಲಿನ್, ಗಿಟಾರ್​ಗಳನ್ನು ಸಹ ನುಡಿಸುತ್ತಾರೆ. ಬಾಲ್ಯದಿಂದಲೇ ಸಂಗೀತಾಭ್ಯಾಸವನ್ನು ಸಹ ಆಂಡ್ರಿಯಾ ಮಾಡಿದ್ದಾರೆ.

ವೈಯಲಿನ್, ಗಿಟಾರ್

ಆಂಡ್ರಿಯಾ ಪ್ರಸ್ತುತ ನಾಲ್ಕು ತಮಿಳು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ವರ್ಷ ಆಂಡ್ರಿಯಾ ಸಖತ್ ಬ್ಯುಸಿ.

ಈ ವರ್ಷ ಸಖತ್ ಬ್ಯುಸಿ

ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ ಈವರೆಗೆ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ.

ಕನ್ನಡದಲ್ಲಿ ನಟಿಸಿಲ್ಲ

ಆಲಿಯಾ ಭಟ್​ ಹಿಡಿದಿರುವ ಈ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಊಹಿಸಿ