ಬಾಲಿವುಡ್ ನಟಿ ಆಲಿಯಾ ಭಟ್ ಕೈಯಲ್ಲಿ ಹಿಡಿದಿರುವ ಈ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?

28 Mar 2024

Author : Manjunatha

ಬಾಲಿವುಡ್ ನಟಿ ಆಲಿಯಾ ಭಟ್, ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ಸ್ಟಾರ್ ನಾಯಕ ನಟಿ.

ಬಾಲಿವುಡ್ ನಟಿ ಆಲಿಯಾ

ಸಿನಿಮಾಗಳಲ್ಲಿ ಭಾರಿ ಮೊತ್ತದ ಸಂಭಾವನೆ ಪಡೆವ ಜೊತೆಗೆ ಸಿನಿಮಾ ನಿರ್ಮಾಣ ಹಾಗೂ ಇನ್ನಿತರೆ ಉದ್ಯಮಗಳಲ್ಲಿಯೂ ಆಲಿ ತೊಡಗಿಕೊಂಡಿದ್ದಾರೆ.

ಭಾರಿ ಮೊತ್ತದ ಸಂಭಾವನೆ

ತಮ್ಮ ಆದಾಯಕ್ಕೆ ತಕ್ಕಂತೆ ಐಶಾರಾಮಿ ಜೀವನವನ್ನು ಆಲಿಯಾ ಭಟ್ ನಡೆಸುತ್ತಿದ್ದಾರೆ. ಐಶಾರಾಮಿ ವಾಹನಗಳು, ಐಶಾರಾಮಿ ಮನೆ, ಧರಿಸುವ ಉಡುಪುಗಳು ಸಹ ಭಾರಿ ದುಬಾರಿಯವೆ.

ಐಶಾರಾಮಿ ಜೀವನ

ಆಲಿಯಾ ಭಟ್ ಬಳಿ ಸುಮಾರು 100ಕ್ಕೂ ಹೆಚ್ಚು ಬ್ಯಾಗುಗಳಿವೆಯಂತೆ. ಪ್ರತಿ ಬಾರಿ ವಿಮಾನ ನಿಲ್ದಾಣ ಅಥವಾ ಇನ್ನೆಲ್ಲಿಯಾದರೂ ಕಂಡಾಗ ಹೊಸದೊಂದು ಬ್ಯಾಗ್ ಹಿಡಿದಿರುತ್ತಾರೆ.

ಹೊಸದೊಂದು ಬ್ಯಾಗ್

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಆಲಿಯಾ ಭಟ್ ಕೈಯಲ್ಲಿ ಕಪ್ಪು ಬಣ್ಣದ ತುಸು ದೊಡ್ಡದಾದ ಬ್ಯಾಗ್ ಹಿಡಿದಿದ್ದರು. ಈ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?

ಬ್ಯಾಗಿನ ಬೆಲೆ ಎಷ್ಟು?

ಆಲಿಯಾ ಭಟ್ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆ ಬರೋಬ್ಬರಿ 2.07 ಲಕ್ಷ ರೂಪಾಯಿಗಳು. ಸರಳವಾಗಿ ಕಂಡರು ಈ ಬ್ಯಾಗು ಬಲು ದುಬಾರಿ.

ಬಲು ದುಬಾರಿ ಬ್ಯಾಗು

ಆಲಿಯಾ ಭಟ್ ಕೈಯಲ್ಲಿ ಹಿಡಿದಿರುವ ಬ್ಯಾಗು, ಗುಚ್ಚಿ ಕಂಪೆನಿಯ ಜಂಬೋ ಜಿಜಿ ಟೋಟೆ ಬ್ಯಾಗ್. ಈ ಸರಣಿಯ ಬ್ಯಾಗುಗಳು ತುಸು ದೊಡ್ಡದಾಗಿರುವ ಜೊತೆಗೆ ಬಲು ದುಬಾರಿ.

ಗುಚ್ಚಿ ಕಂಪೆನಿಯ ಬ್ಯಾಗು

ಏರ್​ಪೋರ್ಟ್​ನಲ್ಲಿ ಸರಳವಾದ ಉಡುಗೆಯಲ್ಲಿ ಕಾಣಿಸಿಕೊಂಡ ಆಲಿಯಾ ಭಟ್ ಬ್ಯಾಗ್​ ಮಾತ್ರ ಬಲು ದುಬಾರಿಯದ್ದೇ ಹಿಡಿದಿದ್ದರು.

ಆಲಿಯಾರ ಬ್ಯಾಗ್

ಆಲಿಯಾ ಭಟ್ ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಾತ್ರವಲ್ಲದೆ ಇನ್ನೂ ಕೆಲವು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಬನ್ಸಾಲಿ ಜೊತೆ ಸಿನಿಮಾ

ತಮಿಳು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ