ದೊಡ್ಡ ಸಿನಿಮಾ ಅವಕಾಶ ಬಾಚಿಕೊಂಡ ‘ಅನಿಮಲ್’ ಸ್ಟಾರ್ ತೃಪ್ತಿ ದಿಮ್ರಿ

ದೊಡ್ಡ ಸಿನಿಮಾ ಅವಕಾಶವನ್ನೇ ಬಾಚಿಕೊಂಡ ‘ಅನಿಮಲ್’ ಸ್ಟಾರ್ ತೃಪ್ತಿ ದಿಮ್ರಿ

10 DEC 2023

TV9 Kannada Logo For Webstory First Slide

Author : Manjunatha

ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ದೊಡ್ಡ ಹಿಟ್ ಆಗಿದೆ. ಸಿನಿಮಾದಲ್ಲಿ ನಟಿಸುವವರ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ.

‘ಅನಿಮಲ್’ ಸಿನಿಮಾ

ಸಿನಿಮಾದಲ್ಲಿ ರಣ್​ಬೀರ್ ಕಪೂರ್ ನಾಯಕ ಹಾಗೂ ರಶ್ಮಿಕಾ ಮಂದಣ್ಣ ನಾಯಕಿ. ಎರಡನೇ ನಾಯಕಿಯಾಗಿ ತೃಪ್ತಿ ದಿಮ್ರಿ ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ

ತೃಪ್ತಿ ದಿಮ್ರಿಯದ್ದು ಸಣ್ಣ ಪಾತ್ರವಾದರೂ ನಾಯಕಿ ಪಾತ್ರಕ್ಕಿಂತಲೂ ಹೆಚ್ಚು ಗಮನ ಸೆಳೆದಿದ್ದು, ಸಿನಿಮಾ ನೋಡಿದವರು ಸಹ ತೃಪ್ತಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ.

ತೃಪ್ತಿ ದಿಮ್ರಿ

ತೃಪ್ತಿ ದಿಮ್ರಿ ಸಖತ್ ಬೋಲ್ಡ್ ದೃಶ್ಯಗಳಲ್ಲಿ ‘ಅನಿಮಲ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸಖತ್ ಬೋಲ್ಡ್ ದೃಶ್ಯ

ಒಂದೇ ಸಿನಿಮಾದ ಕೆಲವು ದೃಶ್ಯಗಳಿಂದಲೇ ತೃಪ್ತಿ ದಿಮ್ರಿ ಸ್ಟಾರ್ ಆಗಿದ್ದು, ಇದೀಗ ಭಾರಿ ದೊಡ್ಡ ಸಿನಿಮಾ ಒಂದರ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾರೆ.

ತೃಪ್ತಿ ದಿಮ್ರಿ ಸ್ಟಾರ್

ಪ್ರಭಾಸ್ ನಟಿಸಲಿರುವ ಮುಂದಿನ ಸಿನಿಮಾ ‘ಸ್ಪಿರಿಟ್​’ಗೆ ತೃಪ್ತಿ ದಿಮ್ರಿ ನಾಯಕಿ ಎನ್ನಲಾಗುತ್ತಿದೆ. ಸಣ್ಣ ಪಾತ್ರದಿಂದ ಒಮ್ಮೆಲೆ ಸ್ಟಾರ್ ಸಿನಿಮಾಕ್ಕೆ ನಾಯಕಿಯಾಗಿದ್ದಾರೆ.

ತೃಪ್ತಿ ದಿಮ್ರಿ ನಾಯಕಿ

ಈಗ ‘ಅನಿಮಲ್’ ಸಿನಿಮಾ ನಿರ್ದೇಶನ ಮಾಡಿರುವ ಸಂದೀಪ್ ರೆಡ್ಡಿ ವಂಗಾ ಅವರೇ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಸಂದೀಪ್ ರೆಡ್ಡಿ ವಂಗಾ

‘ಸ್ಪಿರಿಟ್’ ಸಿನಿಮಾ ಮಾತ್ರವೇ ಅಲ್ಲದೆ ಬಾಲಿವುಡ್​ನ ಇನ್ನೂ ಕೆಲವು ಸಿನಿಮಾಗಳ ಅವಕಾಶಗಳು ತೃಪ್ತಿಯನ್ನು ಅರಸಿ ಬಂದಿವೆ.

‘ಸ್ಪಿರಿಟ್’ ಸಿನಿಮಾ

ಮಹೇಶ್ ಬಾಬುಗೆ ಶ್ರೀಲೀಲಾ ಸಿಹಿಮುತ್ತು, ಇಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತೆ?