ಮಹೇಶ್ ಬಾಬುಗೆ ಶ್ರೀಲೀಲಾ ಸಿಹಿ ಮುತ್ತು, ಇಬ್ಬರ ನಡುವೆ ವಯಸ್ಸಿನ ಅಂತರವೆಷ್ಟು ಗೊತ್ತೆ?

ಮಹೇಶ್ ಬಾಬುಗೆ ಶ್ರೀಲೀಲಾ ಸಿಹಿ ಮುತ್ತು, ಇಬ್ಬರ ನಡುವೆ ವಯಸ್ಸಿನ ಅಂತರವೆಷ್ಟು ಗೊತ್ತೆ?

09 DEC 2023

TV9 Kannada Logo For Webstory First Slide

Author : Manjunatha

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿ. ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದೆ.

ಪೋಸ್ಟರ್  ಬಿಡುಗಡೆ

‘ಗುಂಟೂರು ಖಾರಂ’ ಪೋಸ್ಟರ್​ನಲ್ಲಿ ಮಹೇಶ್​ಬಾಬುಗೆ ನಟಿ ಶ್ರೀಲೀಲಾ ಮುತ್ತು ಕೊಡುತ್ತಿರುವ ಸುಂದರ ಚಿತ್ರವಿದೆ.

ಮಹೇಶ್​ಬಾಬುಶ್ರೀಲೀಲಾ

ಚಿತ್ರರಂಗದಲ್ಲಿ ವಿಶೇಷವಾಗಿ ಕಿರಿಯ ವಯಸ್ಸಿನ ನಟಿಯರನ್ನು ಹಿರಿಯ ನಟರಿಗೆ ನಾಯಕಿಯರನ್ನಾಗಿ ಹಾಕಿಕೊಳ್ಳುವ ಚಾಳಿ ಇದೆ. ತೆಲುಗು ಚಿತ್ರರಂಗದಲ್ಲಿ ಇದು ತುಸು ಹೆಚ್ಚು.

ತೆಲುಗು ಚಿತ್ರರಂಗ

ಮಹೇಶ್ ಬಾಬು ಹಾಗೂ ಶ್ರೀಲೀಲಾ ನಡುವೆಯೂ ಸಹ ದೊಡ್ಡ ವಯಸ್ಸಿನ ಅಂತರವಿದೆ. ಮಹೇಶ್ ಬಾಬುಗೆ ಈಗ 48 ವರ್ಷ ವಯಸ್ಸು, ಅದೇ ಶ್ರೀಲೀಲಾಗೆ ಇನ್ನೂ 22.

ವಯಸ್ಸಿನ ಅಂತರ

ಮಹೇಶ್ ಬಾಬು ನಾಯಕ ನಟನಾಗಿ ನಾಲ್ಕು ಬ್ಲಾಕ್ ಬಸ್ಟರ್​ ಸಿನಿಮಾಗಳನ್ನು ನೀಡಿದ್ದಾಗಿನ್ನೂ ಶ್ರೀಲೀಲಾ ಹುಟ್ಟಿರಲೇ ಇಲ್ಲ.

ಶ್ರೀಲೀಲಾ ಹುಟ್ಟಿರಲಿಲ್ಲ

ಮಹೇಶ್​ ಬಾಬು ವಯಸ್ಸಿನಲ್ಲಿ ದೊಡ್ಡವರಾದರೂ, ನೋಡಲು ಈಗಲೂ ಹ್ಯಾಂಡ್ಸಮ್​ ಆಗಿಯೇ ಕಾಣುತ್ತಾರೆ. ಹಾಗಾಗಿ ಸಣ್ಣ ವಯಸ್ಸಿನ ನಟಿಯರೂ ಸಹ ನಟಿಸಲು ಒಪ್ಪುತ್ತಾರೆ.

ಮಹೇಶ್​ ಬಾಬು

ಆದರೆ ಮಹೇಶ್​ಗಿಂತಲೂ ಹಿರಿಯರಾದ ರವಿತೇಜ ಜೊತೆಗೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ರವಿತೇಜಗೆ 55 ವರ್ಷ ವಯಸ್ಸು.

ರವಿತೇಜ ವಯಸ್ಸು

ಏನೇ ಆಗಲಿ, ಶ್ರೀಲೀಲಾ ಪ್ರಸ್ತುತ ತೆಲುಗು ಚಿತ್ರರಂಗದ ಟಾಪ್ ನಟಿ, ಒಂದರ ಹಿಂದೊಂದು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

ಟಾಲಿವುಡ್ ಸ್ಟಾರ್

ಅಕ್ಕನ ಹಾದಿ ಹಿಡಿದಿರುವ ಖುಷಿ ಕಪೂರ್​ಗೆ ಒಲಿಯುತ್ತದೆಯೇ ಯಶಸ್ಸು?