Pic credit - Instagram

Author: Rajesh Duggumane

24  June 2025

ಅನುಪಮಾ ಪರಮೇಶ್ವರನ್ ಸಿನಿಮಾಗೆ ಸೆನ್ಸಾರ್ ಕಿರಿಕ್ ಯಾವುದು ಸಿನಿಮಾ? 

ಯಾವ ಸಿನಿಮಾ?

ಅನುಪಮಾ ಪರಮೇಶ್ವರನ್ ಅವರು ‘ಜಾನಕಿ’ ಹೆಸರಿನ ಸಿನಿಮಾ ಮಾಡಿದ್ದಾರೆ. ಆದರೆ, ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಒಪ್ಪಿಗೆ ಕೊಟ್ಟಿಲ್ಲ. 

ಸಚಿವ ನಟನೆ 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಹಾಯಕ ಸಚಿವ ಸುರೇಶ್ ಗೋಪಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 

ಟೈಟಲ್ ವಿವಾದ 

‘ಜಾನಕಿ’ ಎಂದರೆ ಸೀತೆ ಎಂಬರ್ಥವಿದೆ. ಹೀಗಾಗಿ, ಸಿನಿಮಾ ಟೈಟಲ್ ಬದಲಿಸಲು ಸೆನ್ಸಾರ್ ಬೋರ್ಡ್ ಸೂಚನೆ ನೀಡಿರೋದು ತಂಡಕ್ಕೆ ಸಮಸ್ಯೆ ಆಗಿದೆ. 

ವಕೀಲೆ ಪಾತ್ರ 

ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಅವರು ಸಂತ್ರಸ್ತೆಯ ಪಾತ್ರ ಮಾಡುತ್ತಾ ಇದ್ದಾರೆ. ಸುರೇಶ್ ಗೋಪಿ ಅವರದ್ದು ವಕೀಲನ ಪಾತ್ರ. 

ಟೈಟಲ್ ಬದಲಿಸಿದರೆ 

ಟೈಟಲ್​ನಲ್ಲಿ ಬದಲಾವಣೆ ಮಾಡಿದರೆ ಇಡೀ ಸಿನಿಮಾದ ಸಂಭಾಷಣೆಗಳನ್ನು ಬದಲಿಸಬೇಕಾಗುತ್ತದೆ ಎಂಬುದು ಚಿತ್ರತಂಡದ ವಾದ ಆಗಿದೆ. 

ಜೂನ್ 27

ಅಂದುಕೊಂಡಂತೆ ನಡೆದಿದ್ದರೆ ಅನುಪಮಾ ಪರಮೇಶ್ವರನ್ ಅವರ ಈ ಸಿನಿಮಾ ಜೂನ್ 27ರಂದು ತೆರೆಗೆ ಬರಬೇಕಿತ್ತು. ಆದರೆ, ಈಗ ರಿಲೀಸ್ ಆಗುತ್ತಿಲ್ಲ. 

ಕನ್ನಡದಲ್ಲೂ ನಟನೆ 

ಅನುಪಮಾ ಅವರು ಕನ್ನಡ ಚಿತ್ರರಂಗದವರಿಗೂ ಪರಿಚಯವಿದ್ದಾರೆ. ಅವರು ಕನ್ನಡದಲ್ಲಿ ‘ನಟಸಾರ್ವಭೌಮ’ ಹೆಸರಿನ ಸಿನಿಮಾ ಮಾಡಿದ್ದಾರೆ. 

ಗ್ಲಾಮರ್ ಬೆಡಗಿ 

ಅನುಪಮಾ ಪರಮೇಶ್ವರನ್ ಅವರು ಗ್ಲಾಮರ್ ಬೆಡಗಿ. ಅವರು ಗ್ಲಾಮರಸ್ ಆಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ.