Pic credit - Instagram

Author: Rajesh Duggumane

23  June 2025

ಆ ವಿಚಾರವನ್ನು ಹೆಚ್ಚು ಇಷ್ಟಪಡುತ್ತಾರೆ ನಟ ರಜನಿಕಾಂತ್ 

ರಜನಿಕಾಂತ್ 

ನಟ ರಜನಿಕಾಂತ್ ಅವರು ಸೂಪರ್​ ಸ್ಟಾರ್ ಎನಿಸಿಕೊಂಡಿದ್ದಾರೆ. ಕಾಲಿವುಡ್ ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. 

ಹೊಸ ಸಿನಿಮಾ 

ರಜನಿಕಾಂತ್​ಗೆ ಈಗ 73 ವರ್ಷ ವಯಸ್ಸು. ಈ ಏಜ್​ನಲ್ಲೂ ಅವರು ಹಲವು ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಾ ಗಮನ ಸೆಳೆಯುತ್ತಾ ಇದ್ದಾರೆ. 

ಏಕಾಂತ

‘ನನಗೆ ಹೆಚ್ಚು ಇಷ್ಟವಾದದ್ದು ಏಕಾಂತ. ಶೂಟಿಂಗ್ ಸಮಯದಲ್ಲಿ ಜನಸಂದಣಿ ಇರುವುದರಿಂದ, ನಾನು ಶೂಟಿಂಗ್ ಇಲ್ಲದಿರುವಾಗ ಏಕಾಂತತೆಯನ್ನು ಇಷ್ಟಪಡುತ್ತೇನೆ’ಎಂದ ರಜನಿ 

ಸಿಟ್ಟು 

ಸಿನಿಮಾ ರಂಗಕ್ಕೆ ಬಂದ ಆರಂಭದಲ್ಲಿ ರಜನಿಕಾಂತ್ ಅವರು ಸಾಕಷ್ಟು ಸಿಟ್ಟು ಮಾಡಿಕೊಳ್ಳುತ್ತಿದ್ದರು. ಆದರೆ, ನಂತರ ಅದು ಬದಲಾಯಿತು. 

ನಟ ಹೇಳಿದ್ದೇನು? 

‘ನಾನು ಮೊದಲು ನಟನಾಗಿ ಚಿತ್ರರಂಗಕ್ಕೆ ಬಂದಾಗ, ನಾನು ತುಂಬಾ ಕೋಪಗೊಳ್ಳುತ್ತಿದ್ದೆ, ಮತ್ತು ಅದನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಲಿಲ್ಲ’ ಎಂದಿದ್ದರು ರಜನಿ.

ಜವಾಬ್ದಾರಿ ಸಿಕ್ಕಾಗ

‘ನನಗೆ ಜನರಿಂದ ಜವಾಬ್ದಾರಿಗಳು ಮತ್ತು ಗೌರವ ಸಿಕ್ಕಾಗ ಸಿಟ್ಟನ್ನು ನನ್ನೊಳಗೆ ಮರೆಮಾಡಬೇಕಾಯಿತು’ ಎಂದು ರಜನಿ ಹೇಳಿದ್ದರು. 

ಕ್ರೀಡೆಯಲ್ಲಿ ಆಸಕ್ತಿ 

‘ನನಗೆ ಕ್ರೀಡೆಗಳಲ್ಲಿ ತುಂಬಾ ಆಸಕ್ತಿ ಇದೆ. ನನಗೆ ಫುಟ್‌ಬಾಲ್ ತುಂಬಾ ಇಷ್ಟ’ ಎಂದು ರಜನಿ ಅವರು ಈ ಮೊದಲು ಹೇಳಿಕೊಂಡಿದ್ದರು.

ಇಬ್ಬರು ಮಕ್ಕಳು 

ರಜನಿಕಾಂತ್ ಅವರಿಗೆ ಇಬ್ಬರು ಮಕ್ಕಳು. ಒಬ್ಬರು ಸೌಂದರ್ಯಾ ಹಾಗೂ ಮತ್ತೊಬ್ಬರು ಐಶ್ವರ್ಯಾ. ಇವರಿಗೂ ಚಿತ್ರರಂಗದ ಜೊತೆಗೆ ನಂಟಿದೆ.