ಅನುಷ್ಕಾ ಶೆಟ್ಟಿ ಗ್ರ್ಯಾಂಡ್ ಕಮ್​ಬ್ಯಾಕ್ ಮತ್ತೆ 'ಭಾಗಮತಿ', 'ಅರುಂಧತಿ'

07 NOV 2023

'ಬಾಹುಬಲಿ' ಬಳಿಕ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸದಿದ್ದ ಅನುಷ್ಕಾ ಇತ್ತೀಚೆಗಷ್ಟೆ 'ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಮೂಲಕ ಕಮ್​ಬ್ಯಾಕ್ ಮಾಡಿದ್ದಾರೆ.

ಶೆಟ್ಟಿ, ಪೋಲಿಶೆಟ್ಟಿ

'ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಬಳಿಕ ಹಲವು ಅವಕಾಶಗಳು ಅನುಷ್ಕಾ ಶೆಟ್ಟಿಯ ಅರಸಿ ಬರುತ್ತಿವೆ.

ಹಲವು ಅವಕಾಶ

ತೆಲುಗು ಚಿತ್ರರಂಗವನ್ನು ಆಳಿದ್ದ ಅನುಷ್ಕಾ ಶೆಟ್ಟಿಯ ವೈಭವದ ದಿನಗಳು ಮತ್ತೆ ಬರುವ ಸೂಚನೆಯೂ ಸಿಕ್ಕಿದೆ. ಇದು ಅನುಷ್ಕಾ ಅಭಿಮಾನಿಗಳಿಗೆ ಖುಷಿ ತಂದಿದೆ.

ವೈಭವದ ದಿನಗಳು

ಅನುಷ್ಕಾ ಶೆಟ್ಟಿಯ ಸೂಪರ್-ಡೂಪರ್ ಹಿಟ್ ಸಿನಿಮಾ 'ಅರುಂಧತಿ' ಮತ್ತೆ ಬರುತ್ತಿದೆ. 'ಅರುಂಧತಿ 2' ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

'ಅರುಂಧತಿ 2'

ಇದರ ಜೊತೆಗೆ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ಭಾಗಮತಿ'ಯ ಭಾಗ 2 ಮಾಡಲು ಸಹ ತಯಾರಿ ನಡೆದಿದೆ ಎನ್ನಲಾಗುತ್ತಿದೆ.

'ಭಾಗಮತಿ'ಯ ಭಾಗ 2

ಅನುಷ್ಕಾ ಶೆಟ್ಟಿ ಪ್ರಸ್ತುತ ಮಲಯಾಳಂನ 'ಕತನಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅನುಷ್ಕಾರ ಮೊದಲ ಮಲಯಾಳಂ ಸಿನಿಮಾ.

'ಕತನಾರ್'

ಅನುಷ್ಕಾ ಶೆಟ್ಟಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಬೇಕು, ಮುಂಚಿನಂತೆ ಒಂದರ ಹಿಂದೊಂದು ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ.

ಅಭಿಮಾನಿಗಳ ಆಸೆ

ಅನುಷ್ಕಾ ಸಹ ತಾವು ಉದ್ದೇಶಪೂರ್ವಕವಾಗಿ ಬ್ರೇಕ್ ತೆಗೆದುಕೊಂಡಿದ್ದಾಗಿಯೂ ಈಗ ಮತ್ತೆ ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಾಗಿ ಈ ಹಿಂದೆ ಹೇಳಿದ್ದರು.

ಅನುಷ್ಕಾ ಶೆಟ್ಟಿ

ಕಡಲ ತೀರದಲ್ಲಿ ನೇಹಾ ಕಕ್ಕರ್ ಸ್ನಾನ, ಫೇಮಸ್ ಗಾಯಕಿಯ ಹಾಟ್ ಅವತಾರ