ನಟ ಅರ್ಜುನ್ ರಾಮ್​ಪಾಲ್ ಪುತ್ರಿ ಬಾಲಿವುಡ್​ಗೆ ಕಾಲಿಡಲಿದ್ದಾರೆ. ಇಲ್ಲಿದೆ ಭಾವಿ ನಟಿಯ ಬಗ್ಗೆ ಮಾಹಿತಿ.

23 Feb 2024

Author : Manjunatha

ಅರ್ಜುನ್ ರಾಮ್​ಪಾಲ್ ಎರಡು ದಶಕಕ್ಕೂ ಹೆಚ್ಚು ಕಾಲದಿಂದಲೂ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ.

ಅರ್ಜುನ್ ರಾಮ್​ಪಾಲ್

ನಾಯಕ ನಟನಾಗಿ, ವಿಲನ್ ಆಗಿ, ಪೋಷಕ ಪಾತ್ರ ಹೀಗೆ ಹಲವು ರೀತಿಯ ಪಾತ್ರಗಳಲ್ಲಿ ಅರ್ಜುನ್ ರಾಮ್​ಪಾಲ್ ಮಿಂಚಿದ್ದಾರೆ.

ಎರಡು ದಶಕ ನಟನೆ

ಅರ್ಜುನ್ ರಾಮ್​ಪಾಲ್​ಗೆ ಇಬ್ಬರು ಪುತ್ರಿಯರಿದ್ದು ಇಬ್ಬರೂ ಚಿತ್ರರಂಗಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.

ಇಬ್ಬರು ಪುತ್ರಿಯರು

ಅರ್ಜುನ್ ರಾಮ್​ಪಾಲ್​ರ ಪುತ್ರಿ ಮೈರಾ ರಾಮ್​ಪಾಲ್ ಈಗಾಗಲೇ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದು ಶೀಘ್ರವೇ ನಟನೆಗೆ ಕಾಲಿಡಲಿದ್ದಾರೆ.

ಮೈರಾ ರಾಮ್​ಪಾಲ್

ಮುಂಬೈನ ಡೈರಾ ಸೇರಿದಂತೆ ಹಲವು ಫ್ಯಾಷನ್ ಶೋಗಳಲ್ಲಿ ಮೈರಾ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಮಾಡೆಲ್ ಮೈರಾ 

ಇನ್​ಸ್ಟಾಗ್ರಾಂನಲ್ಲಿಯೂ ಮೈರಾ ಜನಪ್ರಿಯರಾಗಿದ್ದಾರೆ. ತಮ್ಮ ಹಾಟ್ ಚಿತ್ರಗಳನ್ನು, ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುತ್ತಿರುತ್ತಾರೆ.

ಇನ್​ಸ್ಟಾ ಮಾಡೆಲ್ 

ತಮ್ಮ ಪುತ್ರಿ ಮೈರಾ ಚಿತ್ರರಂಗದಲ್ಲಿ ಕರಿಯರ್ ಮಾಡಿಕೊಳ್ಳುವ ಕನಸು ಕಂಡಿದ್ದು ಆಕೆ ಬುದ್ಧಿವಂತೆಯೂ, ಶ್ರಮಜೀವಿಯೂ ಆಗಿದ್ದಾಳೆ ಎಂದು ರಾಮ್​ಪಾಲ್ ಹೇಳಿದ್ದಾರೆ.

ಪುತ್ರಿ ಬಗ್ಗೆ ರಾಮ್​ಪಾಲ್

ಅರ್ಜುನ್ ರಾಮ್​ಪಾಲ್​ರ ಮೊದಲ ಪುತ್ರಿ ಮಹಿಕಾ ರಾಮ್​ಪಾಲ್ ಸಹ ಸಿನಿಮಾಗಳಲ್ಲಿ ಆಸಕ್ತಿ ಹೊಂದಿದ್ದು ಲಂಡನ್​ನಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ.

ಅಭಿನಯ ತರಬೇತಿ

ಮಹಿಕಾ ಹಾಗೂ ಮೈರಾ ಇಬ್ಬರೂ ಸಹ ನಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವ ಉಮೇದಿನಲ್ಲಿದ್ದು ಆದಷ್ಟು ಬೇಗ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ.

ಬಾಲಿವುಡ್​ಗೆ ಎಂಟ್ರಿ

ಶಾಹಿದ್ ಕಪೂರ್ ಬಾಲಿವುಡ್ ನ ಜನಪ್ರಿಯ ನಟ, ಆರಕ್ಕೇರದ ಆದರೆ ಮೂರಕ್ಕೆ ಇಳಿಯದ ಶಾಹಿದ್ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ.