ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಹಿಡಿದಿರುವ ಬ್ಯಾಗ್​ನ ಬೆಲೆ ಸಾವಿರಗಳಲ್ಲ, ಲಕ್ಷಗಳು

21 Feb 2024

Author : Manjunatha

ಶಾಹಿದ್ ಕಪೂರ್ ಬಾಲಿವುಡ್​ನ ಜನಪ್ರಿಯ ನಟ, ಆರಕ್ಕೇರದ ಆದರೆ ಮೂರಕ್ಕೆ ಇಳಿಯದ ಶಾಹಿದ್ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ.

ನಟ ಶಾಹಿದ್ ಕಪೂರ್

ಶಾಹಿದ್ ಕಪೂರ್ ಇತ್ತೀಚೆಗೆ ಯಾವುದೇ ದೊಡ್ಡ ಹಿಟ್ ನೀಡಿಲ್ಲ ಆದರೂ ಅವರ ಬೇಡಿಕೆಯೇನೂ ಕಡಿಮೆಯಾಗಿಲ್ಲ. ಜನಪ್ರಿಯತೆ ಕುಗ್ಗಿಲ್ಲ. ಆದರೆ ಅವರಷ್ಟೆ ಅವರ ಪತ್ನಿಯೂ ಜನಪ್ರಿಯರು.

ಪತ್ನಿಯೂ ಜನಪ್ರಿಯ

ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್, ತಮ್ಮ ಪತಿಯಷ್ಟೇ ಜನಪ್ರಿಯರು. ನಟಿ ಅಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ದೊಡ್ಡ ಸಂಖ್ಯೆಯ ಫಾಲೋವರ್​ಗಳಿದ್ದಾರೆ.

ಫಾಲೋವರ್​ಗಳಿದ್ದಾರೆ

ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಮೀರಾ ರಜಪೂತ್ ಸರಳವಾದ ಶರ್ಟ್​ ಹಾಗೂ ಪ್ಯಾಂಟ್ ಧರಿಸಿದ್ದರು. ಕೈಯಲ್ಲೊಂದು ಬ್ಯಾಗ್​ ಇತ್ತು. ಆದರೆ ಕಾಣುವಷ್ಟು ಸರಳವಾಗಿರಲಿಲ್ಲ ಅದರ ಬೆಲೆ.

ಮೀರಾ ರಜಪೂತ್ ಬ್ಯಾಗ್

ಮೀರಾ ರಜಪೂತ್ ಕೈಯಲ್ಲಿ ಹಿಡಿದಿರುವ ಸರಳವಾಗಿ ಕಾಣುತ್ತಿರುವ ಈ ಬ್ಯಾಗಿನ ಬೆಲೆ ಬರೋಬ್ಬರಿ 3.19 ಲಕ್ಷ ರೂಪಾಯಿಗಳು ಎಂದರೆ ನಂಬಲೇ ಬೇಕು.

ಬ್ಯಾಗಿನ ಬೆಲೆ ಎಷ್ಟು?

ವ್ಯಾಲೆಂಟಿನೋ ವೋವೆನ್ ರಫಿಯಾ ಬ್ರ್ಯಾಂಡ್​ನ ರೋಮನ್ ಸ್ಟಡ್ ಟೋಟೆ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದಿದ್ದರು ಮೀರಾ ರಜಪೂತ್.

ವ್ಯಾಲೆಂಟಿನೋ ವೋವೆನ್ 

ಚಿತ್ರದಲ್ಲಿ ಮೀರಾ ರಜಪೂತ್ ಧರಿಸಿರುವ ಹಸಿರು ಬಣ್ಣದ ಚಪ್ಪಲಿಯ ಬೆಲೆ ಸುಮಾರು 32 ಸಾವಿರ ರೂಪಾಯಿಗಳು. ನೋಡಲು ಸಾಧಾರಣ ಚಪ್ಪಲಿಗಳಂತೆ ಕಾಣುತ್ತವೆ ಆದರೆ ಬೆಲೆ ಸಾಧಾರಾಣ ಅಲ್ಲ.

ಚಪ್ಪಲಿ ಬೆಲೆ ಎಷ್ಟು?

ಮೀರಾ ಧರಿಸಿರುವ ಜೀನ್ಸ್ ಡೆನಿಮ್ ಕಂಪೆನಿಯದ್ದು. ಆ ಜೀನ್ಸ್​ ಪ್ಯಾಂಟಿನ ಬೆಲೆ ಸುಮಾರು 35 ಸಾವಿರ ರೂಪಾಯಿಗಳಂತೆ. ಶರ್ಟ್​ನ ಬೆಲೆಯೂ ಆಸು ಪಾಸು ಅಷ್ಟೇ ಇದೆ.

ಜೀನ್ಸ್​ ಪ್ಯಾಂಟಿನ ಬೆಲೆ

ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ 2015 ರಲ್ಲಿ ವಿವಾಹವಾದರು. ಮೀರಾ ರಜಪೂತ್, ಕಾಫಿ ವಿತ್ ಕರಣ್​ಗೆ ಬಂದಾಗ ಆಡಿದ್ದ ಮಾತುಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು.

ಕಾಫಿ ವಿತ್ ಕರಣ್​

‘ಟಿಲ್ಲು ಸ್ಕ್ವೇರ್’ ಸಿನಿಮಾಕ್ಕೆ ಅನುಪಮಾ ಪರಮೇಶ್ವರನ್ ಸಂಭಾವನೆ ದುಪ್ಪಟ್ಟು, ಕಾರಣವೇನು?