ಈ ಹಾಟ್ ಚೆಲುವೆಯೇ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ರ ಗರ್ಲ್​ಫ್ರೆಂಡ್. ಬ್ರೆಜಿಲಿಯನ್ ಮಾಡೆಲ್​ಗಿದೆ ಬಾಲಿವುಡ್ ನಂಟು

02 APR 2024

Author : Manjunatha

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬ್ರೆಜಿಲ್​ನ ಮಾಡೆಲ್​ ಲಾರೆಸ್ಸಾ ಬೊನೆಸ್ಸಿ ಜೊತೆ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ.

ಬ್ರೆಜಿಲ್​ ಮಾಡೆಲ್​ 

ಲಾರೆಸ್ಸಾ ಬೊನೆಸ್ಸಿ ಹಾಗೂ ಆರ್ಯನ್ ಖಾನ್ ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಲಾರೆಸ್ಸಾ ಬೊನೆಸ್ಸಿ

ಆರ್ಯನ್ ಖಾನ್, ಲಾರೆಸ್ಸಾ ಬೊನೆಸ್ಸಿ ಯನ್ನು ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ಅವರ ತಾಯಿ ರೆನೆಟಾ ಬೊನೆಸ್ಸಿಯನ್ನು ಸಹ ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ.

ರೆನೆಟಾ ಬೊನೆಸ್ಸಿ

ಇತ್ತೀಚೆಗೆ ಲಾರೆಸ್ಸಾ ಬೊನೆಸ್ಸಿ ಮತ್ತು ರೆನೆಟಾ ಬೊನೆಸ್ಸಿ ಶಾರುಖ್ ಖಾನ್ ಮನೆಗೆ ಆಗಮಿಸಿದ್ದರು ಎನ್ನಲಾಗುತ್ತಿದ್ದು, ಆರ್ಯನ್ ಖಾನ್, ರೆನೆಟಾ ಬೊನೆಸ್ಸಿಗೆ ತಮ್ಮ ಬ್ರ್ಯಾಂಡ್​ನ ಉಡುಪುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಶಾರುಖ್ ಮನೆಗೆ ಭೇಟಿ

ಆರ್ಯನ್ ಖಾನ್ ಪ್ರಸ್ತುತ ತಮ್ಮ ಮೊದಲ ವೆಬ್ ಸರಣಿ ನಿರ್ದೇಶನ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ತಂದೆಯೇ ನಟಿಸುತ್ತಿರುವ ‘ಸ್ಟಾರ್​ಡಮ್’ ಹೆಸರಿನ ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ ಆರ್ಯನ್.

ಆರ್ಯನ್ ನಿರ್ದೇಶನ

ಆರ್ಯನ್ ಖಾನ್ ಹೆಸರು ಈ ಹಿಂದೆ ಕೆಲವು ಸ್ಟಾರ್ ನಟರ ಮಕ್ಕಳೊಡನೆ ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಸುಳ್ಳು ಎನ್ನಲಾಗಿ ಕೊನೆಗೆ ಈಗ ಬ್ರೆಜಿಲ್​ ಮಾಡೆಲ್​ಗೆ ಹೃದಯ ಕೊಟ್ಟಿದ್ದಾರೆ ಆರ್ಯನ್.

ಹಲವರೊಟ್ಟಿಗೆ ಹೆಸರು

ಆರ್ಯನ್ ಖಾನ್ ಅವರ ಮೊದಲ ವೆಬ್ ಸರಣಿಗೆ ಅವರ ತಂದೆ ಶಾರುಖ್ ಖಾನ್ ಅವರೇ ಬಂಡವಾಳ ಹೂಡಿದ್ದಾರೆ. ರೆಡ್ ಚಿಲ್ಲೀಸ್ ವತಿಯಿಂದಲೇ ವೆಬ್ ಸರಣಿ ನಿರ್ಮಾಣಗೊಳ್ಳಲಿದೆ.

ವೆಬ್ ಸರಣಿ ನಿರ್ಮಾಣ

ಆರ್ಯನ್ ಖಾನ್ ನಿರ್ದೇಶಕನಾಗುವ ಮೊದಲೇ ಉದ್ಯಮಿಯೂ ಆಗಿದ್ದಾರೆ. ಎರಡು ಬ್ರ್ಯಾಂಡ್​ಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಉದ್ಯಮಿಯೂ ಆಗಿದ್ದಾರೆ

ಡಿ ವ್ಯೋಲ್ ಹೆಸರಿನ ಬ್ರ್ಯಾಂಡ್ ಒಂದನ್ನು ಪ್ರಾರಂಭಿಸಿದ್ದು, ಆಧುನಿಕ ಫ್ಯಾಷನ್​ನ ಬಟ್ಟೆಗಳ ಜೊತೆಗೆ ವೋಡ್ಕಾ ಸೇರಿದಂತೆ ಇನ್ನೂ ಕೆಲವು ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಡಿ ವ್ಯೋಲ್ ಬ್ರ್ಯಾಂಡ್

ಬೋಲ್ಡ್ ಸುಂದರಿ ದಿಶಾ ಪಟಾನಿ ಚಿತ್ರಗಳನ್ನು ಇಲ್ಲಿ ನೋಡಿ