ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್​ರ ಪುತ್ರಿ ಸುಹಾನಾ ಖಾನ್​ರ ಆಸ್ತಿ ಮೌಲ್ಯ ಎಷ್ಟು?

14 May 2024

Author : Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗಷ್ಟೆ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿಯೇ ನೆಲೆ ಕಂಡುಕೊಳ್ಳುವ ಯೋಚನೆಯಲ್ಲಿದ್ದಾರೆ.

   ಶಾರುಖ್ ಖಾನ್ ಪುತ್ರಿ

ಸುಹಾನಾ ಖಾನ್ ‘ಆರ್ಚೀಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಟಿಯಾಗಿ ಎಂಟ್ರಿ ಕೊಟ್ಟರು. ಇದೀಗ ಇನ್ನೊಂದು ಸಿನಿಮಾ ಅವಕಾಶವನ್ನು ಸುಹಾನಾ ಬಾಚಿಕೊಂಡಿದ್ದಾರೆ.

    ‘ಆರ್ಚೀಸ್’ ಸಿನಿಮಾ

23 ವರ್ಷ ವಯಸ್ಸಿನ ಸುಹಾನಾ ಖಾನ್ ನಟಿಯಾಗಿರುವ ಜೊತೆಗೆ ಹೂಡಿಕೆದಾರರು ಸಹ. ಈಗಿನಿಂದಲೂ ಹಣದ ಹೂಡಿಕೆಯನ್ನು ಅವರು ಪ್ರಾರಂಭಿಸಿದ್ದಾರೆ.

   23 ವರ್ಷದ ಸುಹಾನಾ

ಕೆಲವು ಕಂಪೆನಿಗಳಲ್ಲಿ ಹಾಗೂ ರಿಯಲ್ ಎಸ್ಟೇಟ್​ ಮೇಲೆ ಹೂಡಿಕೆ ಮಾಡಿರುವ ಸುಹಾನಾ ಖಾನ್​ರ ಈಗಿನ ಒಟ್ಟು ಆಸ್ತಿ ಮೌಲ್ಯ 14 ಕೋಟಿ ರೂಪಾಯಿಗಳು ಎನ್ನಲಾಗುತ್ತದೆ.

ರಿಯಲ್ ಎಸ್ಟೇಟ್ ಹೂಡಿಕೆ

ಇತ್ತೀಚೆಗಷ್ಟೆ ನಟಿ ಸುಹಾನಾ ಖಾನ್ ಮುಂಬೈನ ಹೊರವಲಯದಲ್ಲಿರುವ ಆಲಿಭಾಗ್​ನಲ್ಲಿ 1.50 ಕೋಟಿ ಮೌಲ್ಯದ ಕೃಷಿ ಜಮೀನು ಖರೀದಿ ಮಾಡಿದ್ದಾರೆ. ಅಲ್ಲಿ ಫಾರ್ಮಿಂಗ್ ಮಾಡುವ ಆಸೆಯಂತೆ ಅವರಿಗೆ.

  ಕೃಷಿ ಜಮೀನು ಖರೀದಿ

ಮೇಬಲಿನ್ ಹೆಸರಿನ ಜನಪ್ರಿಯ ಸೌಂದರ್ಯವರ್ಧಕ ಬ್ರ್ಯಾಂಡ್​ನಲ್ಲಿಯೂ ಸಹ ಸುಹಾನಾ ಖಾನ್ ಹೂಡಿಕೆ ಮಾಡಿದ್ದಾರೆ. ಈ ಬ್ರ್ಯಾಂಡ್​ನ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಸುಹಾನಾ.

    ಸೌಂದರ್ಯವರ್ಧಕ 

ಸುಹಾನಾ ಖಾನ್, ತಮ್ಮ ಸಹೋದರ ಆರ್ಯನ್ ಖಾನ್​ರ ಡಿ ಯಾವೋಲ್​ನಲ್ಲಿಯೂ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಡಿ ಯಾವೋಲ್​ಗೆ ಮಾಡೆಲ್ ಸಹ ಆಗಿದ್ದಾರೆ ಸುಹಾನಾ ಖಾನ್.

ಮಾಡೆಲ್ ಸುಹಾನಾ ಖಾನ್

ಸುಹಾನಾ ಖಾನ್ ಧೀರೂಬಾಯಿ ಇಂಟರ್ನ್ಯಾಷನಲ್ ಸ್ಕೂಲ್​ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ಅಮೆರಿಕದಲ್ಲಿ ಸಿನಿಮಾ ತಂತ್ರಜ್ಞಾನ ಮತ್ತು ನಟನೆಯ ಪದವಿ ಪಡೆದಿದ್ದಾರೆ.

    ಸಿನಿಮಾ ತಂತ್ರಜ್ಞಾನ 

ಸುಹಾನಾ ಖಾನ್ ರ ಮುಂದಿನ ಸಿನಿಮಾವನ್ನು ದೊಡ್ಡ ನಿರ್ಮಾಣ ಸಂಸ್ಥೆಯೊಂದು ನಿರ್ಮಿಸುತ್ತಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಶಾರುಖ್ ಖಾನ್ ಸಹ ನಟಿಸುತ್ತಿದ್ದಾರೆ.

ದೊಡ್ಡ ನಿರ್ಮಾಣ ಸಂಸ್ಥೆ

ಸೋನಂ ಕಪೂರ್ ಧರಿಸಿರುವ ಈ ಸರಳವಾಗಿ ಕಾಣುವ ಉಡುಗೆಯ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಊಹಿಸಿ