ಬಾಲಿವುಡ್ ನಟಿ ಸೋನಂ ಕಪೂರ್ ಧರಿಸಿರುವ ಈ ಸರಳವಾದ ಉಡುಗೆಯ ಬೆಲೆ ಕೆಲವು ಲಕ್ಷಗಳು!

12 May 2024

Author : Manjunatha

ಸೋನಂ ಕಪೂರ್ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ತಮ್ಮ ಫ್ಯಾಷನ್​ ಸೆನ್ಸ್​ನಿಂದಾಗಿ ಬಹಳ ಜನಪ್ರಿಯರಾಗಿದ್ದವರು.

     ಸೋನಂ ಫ್ಯಾಷನ್

ಸೋನಂ ಕಪೂರ್ ಫ್ಯಾಷನ್ ಸೆನ್ಸ್ ಅನ್ನು ಫ್ಯಾಷನ್ ಸ್ಟೇಟ್​ಮೆಂಟ್ ಅನ್ನು ಫಾಲೋ ಮಾಡುವುದಾಗಿ ಹಲವು ನಟಿಯರು ಆಗ ಹೇಳಿಕೊಂಡಿದ್ದರು.

ನಟಿಯರ ಅಚ್ಚು-ಮೆಚ್ಚು

ಸೋನಂ ಕಪೂರ್ ಇಡೀ ಬಾಲಿವುಡ್​ನಲ್ಲಿ ಅತಿ ಹೆಚ್ಚು ಶಾಪಿಂಗ್ ಮಾಡುವ ಹಾಗೂ ಅತಿ ಹೆಚ್ಚು ಬ್ರ್ಯಾಂಡ್ ಪ್ರೀತಿಯುಳ್ಳ ನಟಿ ಎಂಬ ಹೆಸರು ಸಹ ಪಡೆದುಕೊಂಡಿದ್ದರು.

  ಅತಿ ಹೆಚ್ಚು ಶಾಪಿಂಗ್

ಈ ಚಿತ್ರದಲ್ಲಿ ಸೋನಂ ಕಪೂರ್ ಸರಳವಾದ ಬಟ್ಟೆಯೊಂದನ್ನು ಧರಿಸಿದ್ದಾರೆ ಎಂದು ನೋಡುಗರಿಗೆ ಅನ್ನಿಸುತ್ತದೆ ಆದರೆ ಅದರ ಬೆಲೆ ಬಲು ದುಬಾರಿ.

    ಬೆಲೆ ಬಲು ದುಬಾರಿ

ಸೋನಂ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಬರೋಬ್ಬರಿ 2.35 ಲಕ್ಷ ರೂಪಾಯಿಗಳು. ಈ ಉಡುಗೆಯ ಬೆಲೆ ಅಲ್ಬೆರ್ಟಾ ಸ್ಕರ್ಟ್.

ಉಡುಗೆಯ ಬೆಲೆ ಎಷ್ಟು?

ಸೋನಂ ಕಪೂರ್ ಧರಿಸಿರುವ ಈ ಉಡುಗೆಯನ್ನು ಡಿಸೈನ್ ಮಾಡಿರುವುದು ಮೂನ್​ರೆ ಹೆಸರಿನ ಜನಪ್ರಿಯ ವಿದೇಶಿ ಬ್ರ್ಯಾಂಡ್​ನವರು.

ವಿದೇಶಿ ಬ್ರ್ಯಾಂಡ್​ನವರು

100% ಆರ್ಗ್ಯಾನಿಕ್ ಉಣ್ಣೆ ಸೇರಿದಂತೆ ರೇಷ್ಮೆ ಇನ್ನಿತರೆ ವಸ್ತುಗಳನ್ನು ಬಳಸಿ ಈ ಬಟ್ಟೆಯನ್ನು ತಯಾರು ಮಾಡಲಾಗಿದೆ. ಅದೇ ಕಾರಣಕ್ಕೆ ಇದಕ್ಕೆ ಇಷ್ಟೋಂದು ಬೆಲೆ.

ಬಟ್ಟೆಯ ವಿಶೇಷತೆ ಏನು?

ಮದುವೆ ಬಳಿಕ ಚಿತ್ರರಂಗದಿಂದ ದೂರಾಗಿದ್ದ ಸೋನಂ ಕಪೂರ್ ಈಗ ಮತ್ತೆ ರೀ ಎಂಟ್ರಿ ನೀಡಿದ್ದು, ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬ್ಲೈಂಡ್ ಸಿನಿಮಾದಲ್ಲಿ ನಟಿಸಿದ್ದರು.

     ಸೋನಂ ರೀ ಎಂಟ್ರಿ

ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಅವರ ಪತಿ ಆನಂದ್ ಅಹುಜಾ ಖ್ಯಾತ ಉದ್ಯಮಿ. ಬ್ರಿಟನ್ ಹಾಗೂ ಭಾರತದಲ್ಲಿ ಅವರು ಉದ್ಯಮಗಳನ್ನು ಹೊಂದಿದ್ದಾರೆ.

ಪತಿ ಆನಂದ್ ಅಹುಜಾ

ಕಿರುತೆರೆ ನಟಿ ಪವಿತ್ರಾ ಜಯರಾಂ ನಿಧನ, ಇಲ್ಲಿದೆ ಅವರ ಚಿತ್ರಗಳು ಮತ್ತು ಮಾಹಿತಿ