ಕಿರುತೆರೆ ನಟಿ ಪವಿತ್ರಾ ಜಯರಾಂ ನಿಧನ, ಇಲ್ಲಿವೆ ಅವರ ಅಪರೂಪದ ಚಿತ್ರ, ಮಾಹಿತಿ

12 May 2024

Author : Manjunatha

ಕಿರಿತೆರೆ ನಟಿ ಪವಿತ್ರಾ ಜಯರಾಂ ಇಂದು (ಮೇ 11) ಆಂಧ್ರ ಪ್ರದೇಶದ ಕರ್ನೂಲಿನ ಬಳಿ ನಡೆದ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

     ಕಾರು ಅಪಘಾತ

ಪವಿತ್ರಾ ಜಯರಾಂ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ಸೊಂದು ಮುಖಾ-ಮುಖಿ ಢಿಕ್ಕಿ ಆದ ಪರಿಣಾಮ ನಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

   ಮುಖಾ-ಮುಖಿ ಢಿಕ್ಕಿ

ಮಂಡ್ಯದ ಹನಕೆರೆಯವರಾದ ಪವಿತ್ರಾ ಜಯರಾಂ ಆರಂಭದ ದಿನಗಳಲ್ಲಿ ಬಹಳ ಕಷ್ಟಪಟ್ಟು ಬಳಿಕ ಕಿರುತೆರೆ ಸೇರಿ ನಟಿಯಾದರು.

ಮಂಡ್ಯ ಮೂಲದ ನಟಿ

ಕನ್ನಡದ ‘ರೋಬೊ ಫ್ಯಾಮಿಲಿ’ ಪವಿತ್ರಾ ಜಯರಾಂ ನಟಿಸಿದ ಮೊದಲ ಧಾರಾವಾಹಿ. ಅದಾದ ಬಳಿಕ ಹಲವು ಅವಕಾಶಗಳು ಅವರಿಗೆ ದೊರೆತವು.

    ‘ರೋಬೊ ಫ್ಯಾಮಿಲಿ’

‘ರೋಬೋ ಫ್ಯಾಮಿಲಿ’, ‘ಜೋಕಾಲಿ’, ‘ನೀಲಿ’, ‘ರಾಧಾರಮಣ’ ಇನ್ನೂ ಕೆಲವು ಧಾರಾವಾಹಿಗಳಲ್ಲಿ ಪವಿತ್ರಾ ನಟಿಸಿ ಜನಪ್ರಿಯರಾಗಿದ್ದರು.

   ಹಲವು ಧಾರಾವಾಹಿ

ತೆಲುಗಿನ ‘ತ್ರಿನಯನಿ’ ಧಾರಾವಾಹಿ ಪವಿತ್ರಾ ಜಯರಾಂಗೆ ಒಳ್ಳೆಯ ಹೆಸರು ಗಳಿಸಿಕೊಟ್ಟಿತ್ತು. ತೆಲುಗು ಪ್ರೇಕ್ಷಕರಿಗೂ ಅವರು ನೆಚ್ಚಿನ ನಟಿಯಾಗಿದ್ದರು.

     ತೆಲುಗಿನ ‘ತ್ರಿನಯನಿ’

ಪವಿತ್ರಾ ಜಯರಾಂ ನಟಿಯಾಗುವ ಮುನ್ನ ಗ್ರಂಥಾಲಯದಲ್ಲಿ ಕೆಲಸ ಮಾಡಿದ್ದರು. ಸೇಲ್ಸ್ ಗರ್ಲ್​ ಆಗಿಯೂ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಿದ್ದರು.

ಕಷ್ಟದ ಜೀವನ ನಡೆಸಿದ್ದರು

ಇತ್ತೀಚೆಗೆ ಸ್ವಂತ ಯೂಟ್ಯೂಬ್ ಚಾನೆಲ್ ತೆರೆದಿದ್ದ ನಟಿ ಪವಿತ್ರಾ ಜಯರಾಂ ವ್ಲಾಗ್​ಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದರು.

ಯೂಟ್ಯೂಬ್ ಚಾನೆಲ್

ಪವಿತ್ರಾ ಜಯರಾಂ ನಿಧನ ಕಿರುತೆರೆಯ ಹಲವು ಸೆಲೆಬ್ರಿಟಿಗಳಿಗೆ ಆಘಾತ ತಂದಿದೆ. ಹಲವು ನಟ-ನಟಿಯರು ಪವಿತ್ರಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಅಗಲಿಕೆಗೆ ಸಂತಾಪ

ನಟಿ ಭೂಮಿ ಶೆಟ್ಟಿಯ ಹೊಸ ಅವತಾರ ನೋಡಿ ಹೇಗಿದೆ?