ಹೊಸ ನಟಿ, ಹಿಟ್ ಸಿನಿಮಾ ನೀಡಿಲ್ಲ, ಈಗ ಪ್ರಭಾಸ್ಗೆ ನಾಯಕಿ: ಯಾರೀಕೆ?
02 Feb 2025
Manjunatha
ಕೆಲವು ನಟ, ನಟಿಯರಿಗೆ ಸಖತ್ ಅದೃಷ್ಟವಿರುತ್ತದೆ. ಸತತ ಫ್ಲಾಪ್ ಸಿನಿಮಾ ನೀಡಿದರೂ ಅವಕಾಶಗಳು ಸಿಗುತ್ತಲೇ ಇರುತ್ತವೆ.
ಸತತ ಫ್ಲಾಪ್ ಸಿನಿಮಾ
ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಸತತವಾಗಿ ಫ್ಲಾಪ್ ನೀಡುತ್ತಿದ್ದಾರೆ ಆದರೂ ಬೇಡಿಕೆಯಲ್ಲಿದ್ದಾರೆ. ಇಲ್ಲೊಬ್ಬ ನಟಿಯದ್ದೂ ಅದೇ ಅದೃಷ್ಟ.
ಬೆಡಗಿ ಜಾನ್ಹವಿ ಕಪೂರ್
ಭಾಗ್ಯಶ್ರೀ ಭೊರ್ಸೆ ನಾಯಕಿಯಾಗಿ ನಟಿಸಿರುವ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿದೆ, ಆ ಸಿನಿಮಾ ಸಹ ಫ್ಲಾಪ್.
ನಾಯಕಿ ಭಾಗ್ಯಶ್ರೀ ಭೊರ್ಸೆ
ಆದರೆ ಈಗಾಗಲೇ ನಟಿಗೆ ಪ್ರಭಾಸ್ ಜೊತೆ ನಟಿಸುವ ಅವಕಾಶ ಅರಸಿ ಬಂದಿದೆ. ಪ್ರಭಾಸ್-ಪ್ರಶಾಂತ್ ವರ್ಮಾ ಸಿನಿಮಾದ ನಾಯಕಿ ಈಕೆ.
ಪ್ರಭಾಸ್-ಪ್ರಶಾಂತ್
ಭಾಗ್ಯಶ್ರೀ ಬೋರ್ಸೆ, ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾದರೂ ನಾಯಕಿಯಾಗಿ ಅಲ್ಲ. ಬಹಳ ಚಿಕ್ಕ ಪಾತ್ರಗಳು ಅವು.
ಎರಡು ಹಿಂದಿ ಸಿನಿಮಾ
ರವಿತೇಜ ಜೊತೆ ನಟಿಸಿದ ‘ಮಿಸ್ಟರ್ ಬಚ್ಚನ್’ ಬಿಡುಗಡೆ ಆಗಿ ಫ್ಲಾಪ್ ಆಗಿದೆ. ವಿಜಯ್ ದೇವರಕೊಂಡ ಜೊತೆ ‘ಕಿಂಗ್ಡಮ್’ನಲ್ಲಿ ನಟಿಸುತ್ತಿದ್ದಾರೆ.
‘ಮಿಸ್ಟರ್ ಬಚ್ಚನ್’ ಸಿನಿಮಾ
‘ಕಿಂಗ್ ಡಮ್’ ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳಿದೆ. ಆಗಲೇ ನಟಿಗೆ ಪ್ರಭಾಸ್ ಸಿನಿಮಾದಲ್ಲಿ ನಾಯಕಿಯಾಗುವ ಅದೃಷ್ಟ ಬಂದಿದೆ.
‘ಕಿಂಗ್ ಡಮ್’ ಸಿನಿಮಾ
ತಾಯಿಯಾಗುತ್ತಿದ್ದಾರೆ ನಟಿ ಕಿಯಾರಾ, ಕೈಯಲ್ಲಿರುವ ಸಿನಿಮಾಗಳೆಷ್ಟು?
ಇದನ್ನೂ ನೋಡಿ