ಈ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಬಂದ ಅತಿಥಿಗಳ್ಯಾರು? ಇಲ್ಲಿದೆ ಪಟ್ಟಿ

16 Jan 2024

Author : Manjunatha

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಗ್​ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದರು. ಇವರನ್ನು ಸ್ಪರ್ಧಿ ಎಂದು ಕೆಲವರು ತಪ್ಪು ತಿಳಿದಿದ್ದರು.

ಶಾಸಕ ಪ್ರದೀಪ್ ಈಶ್ವರ್

ಬಿಗ್​ಬಾಸ್ ಮಾಜಿ ವಿಜೇತ ಪ್ರಥಮ್, ಲಾರ್ಡ್ ಪ್ರಥಮ್ ಆಗಿ ಬಿಗ್​ಬಾಸ್ ಮನೆಗೆ ಬಂದಿದ್ದರು. ಸ್ಪರ್ಧಿಗಳಿಗೆ ಸಖತ್ ಟ್ವಾಟ್ಲೆ ಕೊಟ್ಟಿದ್ದರು.

ಲಾರ್ಡ್ ಪ್ರಥಮ್

ನಟಿ ತಾರಾ ವಿಶೇಷ ಅತಿಥಿಯಾಗಿ ಮನೆಗೆ ಬಂದಿದ್ದರು. ಅವರು ಡ್ರೋನ್ ಪ್ರತಾಪ್​ ಜೊತೆ ಮಾತನಾಡಿದ್ದು ಆ ವಾರದ ವಿಶೇಷವಾಗಿತ್ತು.

ನಟಿ ತಾರಾ ವಿಶೇಷ ಅತಿಥಿ

ಬಿಗ್​ಬಾಸ್ ಮೊದಲ ಸೀಸನ್​ನ ಸ್ಪರ್ಧಿಯಾಗಿದ್ದ ಬ್ರಹ್ಮಾಂಡ ಗುರೂಜಿ ಸಹ ಬಿಗ್​ಬಾಸ್ ಮನೆಗೆ ಬಂದು ಕೆಲವು ಟಾಸ್ಕ್​ಗಳನ್ನು ಮಾಡಿಸಿದರು.

ಬ್ರಹ್ಮಾಂಡ ಗುರೂಜಿ

ಮಹರ್ಷಿಗಳು ಬಿಗ್​ಬಾಸ್ ಮನೆಗೆ ಬಂದು ಸ್ಪರ್ಧಿಗಳಿಗೆ ಅವರ ಭವಿಷ್ಯ ಹೇಳಿದರು. ಡ್ರೋನ್ ಪ್ರತಾಪ್​ಗೆ ಹೇಳಿದ ಭವಿಷ್ಯ ಟೀಕೆಗೆ ಗುರಿಯಾಯ್ತು.

ಮಹರ್ಷಿ ಭವಿಷ್ಯ

ಮಾಜಿ ಬಿಗ್​ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಬಿಗ್​ಬಾಸ್ ಮನೆಗೆ ಬಂದಿದ್ದರು. ಸುದೀಪ್ ಬಾರದ ವಾರದಲ್ಲಿ ಅವರು ಬಂದಿದ್ದರು.

ಶೈನ್ ಶೆಟ್ಟಿ ಆಗಮನ

ಮಾಜಿ ಸ್ಪರ್ಧಿ ಶುಭ ಪೂಂಜಾ ಸಹ ಬಿಗ್​ಬಾಸ್ ಮನೆಗೆ ಬಂದಿದ್ದರು. ಶೈನ್ ಶೆಟ್ಟಿ ಹಾಗೂ ಶುಭ ಒಟ್ಟಿಗೆ ಮನೆಗೆ ಆಗಮಿಸಿದ್ದರು.

ಅತಿಥಿ ಶುಭ ಪೂಂಜಾ

ನಟಿ ಶ್ರುತಿ ಸಹ ಬಿಗ್​ಬಾಸ್ ಮನೆಗೆ ಬಂದಿದ್ದರು. ಮನೆಯಲ್ಲಿ ನ್ಯಾಯಾಲಯ ಕ್ರಿಯೇಟ್ ಮಾಡಿ ಕೆಲವು ಆದೇಶಗಳನ್ನು ನೀಡಿದರು.

ಬಿಗ್​ಬಾಸ್ ವಿಜೇತೆ ಶ್ರುತಿ

‘ಕಾಂತಾರ’ ಬೆಡಗಿ ಸಪ್ತಮಿ ಗೌಡ ಬಿಗ್​ಬಾಸ್ ಮನೆಗೆ ಬಂದು, ಮುಟ್ಟಿನ ಕಪ್​ಗಳ ಕುರಿತು ಜಾಗೃತಿ ಮೂಡಿಸಿದರು.

ಬೆಡಗಿ ಸಪ್ತಮಿ ಗೌಡ

ಧಾರಾವಾಹಿ ನಟಿ, ನಿರೂಪಕಿ ಸುಶ್ಮಾ ಕೆ ರಾವ್ ಬಿಗ್​ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದರು. ವರ್ತೂರು ಸಂತೋಷ್ ಜೊತೆ ಆಪ್ತ ಮಾತುಕತೆ ನಡೆಸಿದ್ದರು.

ನಿರೂಪಕಿ ಸುಶ್ಮಾ ಕೆ ರಾವ್

2024ರ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುತ್ತಿರುವ ಆಯೆಷಾ ಖಾನ್ ಯಾರು? ಹಿನ್ನೆಲೆ ಏನು?