ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಟ್ಟರು ‘ಅನಿಮಲ್’ ವಿಲನ್ ಆದರೆ, ಸಿನಿಮಾ ಯಾವುದು?

30 DEC 2023

Author : Manjunatha

ರಣ್​ಬೀರ್ ಕಪೂರ್ ನಟಿಸಿರುವ ‘ಅನಿಮಲ್’ ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಅನ್ನಿಸಿಕೊಂಡಿದೆ.

‘ಅನಿಮಲ್’ ಸಿನಿಮಾ

ಈ ಸಿನಿಮಾದಲ್ಲಿ ರಣ್​ಬೀರ್ ಕಪೂರ್ ಜೊತೆಗೆ ವಿಲನ್ ಪಾತ್ರದಲ್ಲಿ ನಟಿಸಿದ್ದ ಬಾಬಿ ಡಿಯೋಲ್ ಸಹ ಸಾಕಷ್ಟು ಪ್ರಶಂಸೆ ಗಳಿಸಿದ್ದರು.

ಬಾಬಿ ಡಿಯೋಲ್ 

‘ಅನಿಮಲ್’ ಮೂಲಕ ಗಮನ ಸೆಳೆದಿರುವ ಬಾಬಿ ಡಿಯೋಲ್, ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗ

ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ನಟಿಸುತ್ತಿದ್ದಾರೆ.

ನಂದಮೂರಿ ಬಾಲಕೃಷ್ಣ

ಸಿನಿಮಾದ ಚಿತ್ರೀಕರಣದಲ್ಲಿ ಈಗಾಗಲೇ ಪಾಲ್ಗೊಂಡಿರುವ ಬಾಬಿ ಡಿಯೋಲ್, ಈ ಸಿನಿಮಾದಲ್ಲಿ ನಟಿಸಲು ಭಾರಿ ದೊಡ್ಡ ಸಂಭಾವನೆ ಪಡೆದಿದ್ದಾರಂತೆ.

ಚಿತ್ರೀಕರಣದಲ್ಲಿ ಬಾಬಿ

ನಟಿ ಊರ್ವಶಿ ರೌಟೆಲ್ಲಾ ಸಹ ಬಾಲಕೃಷ್ಣರ 109ನೇ ಸಿನಿಮಾದಲ್ಲಿ ನಟಿಸುತ್ತಿದ್ದು, ತಮ್ಮ ಸಿನಿಮಾದಲ್ಲಿ ಬಾಬಿ ಸಹ ನಟಿಸುತ್ತಿರುವ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ.

ನಟಿ ಊರ್ವಶಿ ರೌಟೆಲ್ಲಾ

‘ಅನಿಮಲ್’ ಸಿನಿಮಾದ ವಿಲನ್ ಪಾತ್ರದಲ್ಲಿ ಬಾಬಿ ಡಿಯೋಲ್ ಸಖತ್ ಮಿಂಚಿದ್ದಾರೆ. ಆ ಸಿನಿಮಾದ ಬಳಿಕ ಅವರಿಗೆ ಇನ್ನಷ್ಟು ಹೆಚ್ಚಿನ ಆಫರ್​ಗಳು ಅರಸಿ ಬರುತ್ತಿವೆ.

ಸಖತ್ ಮಿಂಚಿದ್ದಾರೆ

ಕ್ರಿಕೆಟ್ ಮ್ಯಾಚ್ ಒಂದನ್ನು ನೋಡುತ್ತಿರುವ ಬಾಬಿ ಡಿಯೋಲ್​ರ ಚಿತ್ರವೊಂದನ್ನು ನೋಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಬಾಬಿಯನ್ನು ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿದ್ದರು.

ಸಂದೀಪ್ ರೆಡ್ಡಿ ವಂಗಾ

ನಿರ್ಣಾಯಕ ಸಮಯದಲ್ಲಿ ಕ್ಯಾಪ್ಟನ್ ಆದ ತನಿಷಾ ಕುಪ್ಪಂಡ