ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಮತ್ತೊಬ್ಬ ಬಾಲಿವುಡ್ ಯುವ ಚೆಲುವೆ: ಯಾವ ಸಿನಿಮಾ?

02 NOV 2023

ಬಾಲಿವುಡ್​ನ ನಟಿಯರು ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸುವುದು ಹೊಸತೇನೂ ಅಲ್ಲ. ಆದರೆ ಆಗಿನ ಪರಿಸ್ಥಿತಿ ಬೇರೆ, ಈಗಿನ ವಾತಾವರಣ ಬೇರೆ.

ಈಗ ಪರಿಸ್ಥಿತಿ ಬೇರೆ

ಆಗೆಲ್ಲ ದಕ್ಷಿಣದವರು ಹೆಚ್ಚುವರಿ ಸಂಭಾವನೆ, ಸವಲತ್ತುಗಳನ್ನು ಕೊಟ್ಟು ಬಾಲಿವುಡ್ ನಟಿಯರ ಕರೆತರಬೇಕಿತ್ತು, ಈಗ ಬಾಲಿವುಡ್ ನಟಿಯರೇ ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ತುದಿಗಾಲಲ್ಲಿ ನಟಿಯರು

ಬಾಲಿವುಡ್​ನ ಜನಪ್ರಿಯ ಯುವನಟಿ ಜಾನ್ಹವಿ ಕಪೂರ್ ಇತ್ತೀಚೆಗಷ್ಟೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು, ಜೂ ಎನ್​ಟಿಆರ್ ನಟನೆಯ 'ದೇವರ' ಸಿನಿಮಾ ಮೂಲಕ.

ಜಾನ್ಹವಿ ಕಪೂರ್

ಜಾನ್ಹವಿ ಕಪೂರ್​ರ ವಾರಗೆಯವರೇ ಆಗಿರುವ ಮತ್ತೊಬ್ಬ ಸ್ಟಾರ್ ಯುವ ಬಾಲಿವುಡ್ ಯುವನಟಿ ಸಹ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ.

ಬಾಲಿವುಡ್ ಯುವನಟಿ

ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಅವರು ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮಿಳು ಸಿನಿಮಾ ಒಂದರ ಮೂಲಕ ಅವರು ದಕ್ಷಿಣಕ್ಕೆ ಕಾಲಿಡುತ್ತಿದ್ದಾರೆ.

ಸಾರಾ ಅಲಿ ಖಾನ್

ದೊಡ್ಡ ನಿರ್ಮಾಣ ಸಂಸ್ಥೆಯೊಂದು ನಿರ್ಮಿಸುತ್ತಿರುವ ಯುವ ನಾಯಕ ನಟನ ಸಿನಿಮಾಕ್ಕೆ ಸಾರಾ ನಾಯಕಿ ಆಗಲಿದ್ದಾರಂತೆ. ಇದು ತಮಿಳಿನ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

ತಮಿಳು ಸಿನಿಮಾ

ಸಾರಾ ಅಲಿ ಖಾನ್ ನಟನೆಗೆ ಕಾಲಿಟ್ಟಿದ್ದು 2018ರಲ್ಲಿ, ಈವರೆಗೆ ಏಳು ಸಿನಿಮಾಗಳಲ್ಲಿ ಮಾತ್ರವೇ ಸಾರಾ ನಟಿಸಿದ್ದಾರೆ. ಆದರೂ ಬಾಲಿವುಡ್​ನ ಬೇಡಿಕೆಯ ನಟಿ.

ಹಿಂದಿ ಸಿನಿಮಾ

ಪ್ರಸ್ತುತ ನಾಲ್ಕು ಹಿಂದಿ ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಬಳಿಕ ತಮಿಳು ಸಿನಿಮಾದಲ್ಲಿ ಸಾರಾ ನಟಿಸಲಿದ್ದಾರೆ.

ಬ್ಯುಸಿ ನಟಿ

‘ಯೂ-ಟರ್ನ್’ ನಟಿ ಶ್ರದ್ಧಾ ಕಪೂರ್ ಈಗೇನು ಮಾಡುತ್ತಿದ್ದಾರೆ? ಅವರ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?