ಇವರೇ ನೋಡಿ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ನಾಯಕಿ

03 Feb 2024

Author : Manjunatha

‘ಕಾಟೇರ’ ಗೆದ್ದ ಖುಷಿಯಲ್ಲಿರುವ ನಟ ದರ್ಶನ್, ತಮ್ಮ ಮುಂದಿನ ಸಿನಿಮಾದ ಘೋಷಣೆ ಈಗಾಗಲೇ ಮಾಡಿದ್ದಾರೆ.

ಹೊಸ ಸಿನಿಮಾ ಘೋಷಣೆ

ಆಕ್ಷನ್ ಸಿನಿಮಾ ‘ಡೆವಿಲ್: ದಿ ಹೀರೋ’ನಲ್ಲಿ ದರ್ಶನ್ ನಟಿಸಲಿದ್ದಾರೆ. ಈ ಸಿನಿಮಾವನ್ನು ಮಿಲನಾ ಪ್ರಕಾಶ್ ನಿರ್ದೇಶನ ಮಾಡಲಿದ್ದಾರೆ.

‘ಡೆವಿಲ್: ದಿ ಹೀರೋ’

‘ಡೆವಿಲ್’ ಸಿನಿಮಾಕ್ಕೆ ನಾಯಕಿಯ ಆಯ್ಕೆ ಆಗಿದ್ದು, ಕರ್ನಾಟಕದ ಚೆಲುವೆಯೇ ದರ್ಶನ್ ಎದುರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ದರ್ಶನ್ ಎದುರು ನಾಯಕಿ

ತುಳು ಸಿನಿಮಾ ‘ಸರ್ಕಸ್​’ನಲ್ಲಿ ನಟಿಸಿರುವ ಚೆಲುವೆ ರಚನಾ ರೈ ‘ಡೆವಿಲ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

ತುಳು ಸಿನಿಮಾ ‘ಸರ್ಕಸ್​’

ರಚನಾ ರೈ ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಕೆಲವು ಬ್ರ್ಯಾಂಡ್​ಗಳ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು.

ರೂಪದರ್ಶಿ ರಚನಾ ರೈ

ಇದೀಗ ಕನ್ನಡದ ‘ವಾಮನ’ ಸಿನಿಮಾನಲ್ಲಿ ಧನ್ವೀರ್ ಗೌಡ ಎದುರು ನಾಯಕಿಯಾಗಿ ನಟನೆ ಮಾಡಿದ್ದಾರೆ. ಆ ಸಿನಿಮಾ ಬಿಡುಗಡೆ ಆಗಬೇಕಿದೆ.

‘ವಾಮನ’ ಸಿನಿಮಾದ ನಟಿ

ರಚನಾ ರೈ ‘ಡೆವಿಲ್’ ಸಿನಿಮಾದ ನಾಯಕಿಯಾಗಿ ಆಯ್ಕೆ ಆದಂತೆ ಅವರ ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದೆ.

ಡೆವಿಲ್ ಸಿನಿಮಾ ನಾಯಕಿ

ಮಿಲನಾ ಪ್ರಕಾಶ್ ಹಾಗೂ ದರ್ಶನ್ ಜೋಡಿಗೆ ‘ಡೆವಿಲ್’ ಎರಡನೇ ಸಿನಿಮಾ. ಇದಕ್ಕೆ ಮುನ್ನ ದರ್ಶನ್​ಗಾಗಿ ‘ತಾರಕ್’ ಸಿನಿಮಾ ನಿರ್ದೇಶಿಸಿದ್ದರು ಪ್ರಕಾಶ್.

ಪ್ರಕಾಶ್ ಹಾಗೂ ದರ್ಶನ್

‘ಡೆವಿಲ್’ ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದ್ದು, ಈ ಸಿನಿಮಾ ಆಕ್ಷನ್ ಥ್ರಿಲ್ಲರ್ ಕತೆ ಹೊಂದಿರಲಿದೆ.

ಆಕ್ಷನ್ ಥ್ರಿಲ್ಲರ್ ಕತೆ

ಬಾಲಿವುಡ್ ನಟಿ ನೋರಾ ಫತೇಹಿ ಹಿಡಿದಿರುವ ಬ್ಯಾಗ್​ನ ಬೆಲೆ ಎಷ್ಟು ಗೊತ್ತೆ?