ಬಾಲಿವುಡ್​ನ ಹಾಟ್ ನಟಿ ನೋರಾ ಫತೇಹಿ ಕೈಯಲ್ಲಿ ಹಿಡಿದಿರುವ ಬ್ಯಾಗ್​ನ ಬೆಲೆ ಎಷ್ಟು ಗೊತ್ತೆ?

02 Feb 2024

Author : Manjunatha

ನೋರಾ ಫತೇಹಿ ಬಾಲಿವುಡ್​ನ ಹಾಟ್ ನಟಿಯರಲ್ಲಿ ಒಬ್ಬರು. ಐಟಂ ಹಾಡುಗಳಿಂದ ಸಖತ್ ಜನಪ್ರಿಯರಾಗಿದ್ದಾರೆ.

ಬಾಲಿವುಡ್​ನ ಹಾಟ್ ನಟಿ

ನೋರಾ ಫತೇಹಿ ಗ್ಲಾಮರ್ ಆಗಿರುವ ಜೊತೆಗೆ ಸಖತ್ ಸ್ಟೈಲಿಷ್ ಸಹ. ಸದಾ ಸ್ಪೈಲಿಷ್ ಆದ ಉಡುಗೆಗಳನ್ನು ಧರಿಸುತ್ತಾರೆ.

ಸಖತ್ ಸ್ಟೈಲಿಷ್ ನಟಿ

ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ನೋರಾ ಅವರ ಕೈಯಲ್ಲಿದ್ದ ಲೂವಿ ವಿಟಾನ್ ಬ್ಯಾಗ್ ಗಮನ ಸೆಳೆದಿದೆ.

ಲೂವಿ ವಿಟಾನ್ ಬ್ಯಾಗ್

ಅಂದಹಾಗೆ ನೋರಾ ಫತೇಹಿ ಕೈಯಲ್ಲಿ ಹಿಡಿದಿರುವ ಲೂವಿ ವಿಟಾನ್ ಬ್ರ್ಯಾಂಡ್​ನ ಬ್ಯಾಗಿನ ಬೆಲೆ ಬರೋಬ್ಬರಿ 2.90 ಲಕ್ಷ ರೂಪಾಯಿ.

2.90 ಲಕ್ಷ ರೂಪಾಯಿ

ಲೂಯಿ ವಿಟಾನ್ ಬ್ಯಾಗುಗಳ ಬೆಲೆ ಎಷ್ಟೋ ಯುವಕರ ವಾರ್ಷಿಕ ಸಂಬಳಕ್ಕಿಂತಲೂ ಹೆಚ್ಚಿರುತ್ತದೆ. ಭಾರಿ ಐಶಾರಾಮಿ ಬ್ರ್ಯಾಂಡ್ ಅದು.

ಐಶಾರಾಮಿ ಬ್ರ್ಯಾಂಡ್ 

ಬಾಲಿವುಡ್ ನಟಿ ನೋರಾ ಫತೇಹಿ ಇದೀಗ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುತ್ತಿಲ್ಲ ಬದಲಿಗೆ ಹಾಡೊಂದಕ್ಕೆ ಕುಣಿಯಲಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ

ಪ್ರೇಮ್ ನಿರ್ದೇಶನ ಮಾಡಿ, ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದ ಐಟಂ ಹಾಡಿನಲ್ಲಿ ನೋರಾ ಫತೇಹಿ ಡ್ಯಾನ್ಸ್ ಮಾಡಿದ್ದಾರೆ.

ಕೆಡಿ ಸಿನಿಮಾದಲ್ಲಿ ನೋರಾ

ನೋರಾ ಫತೇಹಿ ಇದೀಗ ಹಲವು ಬಾಲಿವುಡ್ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ಪರಭಾಷೆ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಲಿವುಡ್ ಪ್ರಾಜೆಕ್ಟ್

ನೋರಾ ಫತೇಹಿ ಮೂಲತಃ ಕೆನಡಾದವರು ಆದರೆ ಪ್ರಸ್ತುತ ಭಾರತದಲ್ಲಿಯೇ ನೆಲೆಸಿದ್ದು, ಸತತವಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಮೂಲತಃ ಕೆನಡಾದವರು

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ತೊರೆದಿರುವ 165 ಕೋಟಿ ಮೌಲ್ಯದ ಮನೆ ಹೇಗಿತ್ತು?