ಪ್ರಿಯಾಂಕಾ-ನಿಕ್ ಜೋನಸ್ ತೊರೆದಿರುವ 165 ಕೋಟಿ ಮೌಲ್ಯದ ಐಶಾರಾಮಿ ಮನೆ ಹೇಗಿತ್ತು ಗೊತ್ತೆ?

01 Feb 2024

Author : Manjunatha

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ 2019ರಿಂದ ಲಾಸ್ ಏಂಜಲ್ಸ್​ನ ಐಶಾರಾಮಿ ನಿವಾಸದಲ್ಲಿ ವಾಸವಿದ್ದರು.

ಐಶಾರಾಮಿ ನಿವಾಸ

ಆದರೆ ಈಗ ಆ ಮನೆಯನ್ನು ತೊರೆದಿದ್ದಾರೆ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅದಕ್ಕೆ ಕಾರಣವೂ ಇದೆ.

ಮನೆಯನ್ನು ತೊರೆದಿದ್ದಾರೆ

ಆ ಮನೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಮನೆಯ ವಾಸ ಯೋಗ್ಯವಲ್ಲವೆಂದು ಮನೆಯನ್ನು ತೊರೆದಿದ್ದಾರೆ ಪ್ರಿಯಾಂಕಾ ಹಾಗೂ ನಿಕ್.

ವಾಸ ಯೋಗ್ಯವಲ್ಲ

165 ಕೋಟಿ ರೂಪಾಯಿ ಮೌಲ್ಯದ ಮನೆಯಲ್ಲಿ ಹಲವು ಐಶಾರಾಮಿ ಸವಲತ್ತುಗಳಿದ್ದವು. ಎಲ್ಲವನ್ನೂ ಬಿಟ್ಟು ಬೇರೆಡೆ ನೆಲೆಸಿದ್ದಾರೆ ದಂಪತಿ.

165 ಕೋಟಿ ರೂಪಾಯಿ

ಆ ಮನೆಯಲ್ಲಿ ಏಳು ವಿಶಾಲ ಬೆಡ್​ರೂಂಗಳು, ಒಂಬತ್ತು ಬಾತ್​ರೂಂಗಳು ಇದ್ದವು. ಇಡೀ ಮನೆಗೆ ಟೆಂಪ್ರೇಚರ್ ಕಂಟ್ರೋಲ್ ವ್ಯವಸ್ಥೆ ಇತ್ತು.

ಏಳು ವಿಶಾಲ ಬೆಡ್​ರೂಂ

ಇಂಡೋರ್ ಬಾಲ್ ಗೇಮ್ ಕೋರ್ಟ್, ಸ್ವಿಮ್ಮಿಂಗ್ ಪೂಲ್, ಹೋಮ್ ಥಿಯೇಟರ್, ಸ್ಪಾ, ಜಿಮ್, ಬಿಲಿಯರ್ಡ್ಸ್​ ರೂಂ ಇನ್ನೂ ಹಲವು ಸವಲತ್ತುಗಳಿದ್ದವು.

ಹಲವು ಸವಲತ್ತುಗಳಿದ್ದವು

ಪ್ರತ್ಯೇಕ ಕಾರು ಗ್ಯಾರೇಜ್, ಶೆಫ್ ರೂಂ, ನೌಕರರಿಗೆ ಪ್ರತ್ಯೇಕ ವಸತಿ ಸೌಕರ್ಯ, ಪ್ರಿಯಾಂಕಾ ಹಾಗೂ ನಿಕ್​ರ ಕಚೇರಿ ಸಹ ಆ ಮನೆಯಲ್ಲಿತ್ತು.

ಮನೆಯಲ್ಲಿ ಏನೇನಿದ್ದವು?

ಆದರೆ ಆ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್, ಸ್ಪಾ, ಬಾರ್ಬಿಕ್ಯೂ ಏರಿಯಾಗಳಲ್ಲಿ ಸತತ ನೀರಿನ ಲೀಕೇಜ್ ಆಗುತ್ತಿತ್ತಂತೆ.

ಸ್ವಿಮ್ಮಿಂಗ್ ಪೂಲ್

ಮನೆ ಖರೀದಿಸಿದಾಗಿನಿಂದಲೂ ಮನೆಯ ಒಂದಲ್ಲ ಒಂದು ಕಡೆ ವಾಟರ್ ಲೀಕೇಜ್ ಸಮಸ್ಯೆ ಇದ್ದು, ಇದರಿಂದಾಗಿ ಆ ಮನೆ ವಾಸಯೋಗ್ಯವಲ್ಲ ಎಂದು ಪ್ರಿಯಾಂಕಾ-ನಿಕ್ ಮನೆಯನ್ನು ತೊರೆದಿದ್ದಾರೆ.

ವಾಟರ್ ಲೀಕೇಜ್ ಸಮಸ್ಯೆ

ತೆಲುಗು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಬಾಲಿವುಡ್ ನಟಿ ತಾಪ್ಸಿ ಪನ್ನು ಮೊದಲ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು?