ದಕ್ಷಿಣ ಚಿತ್ರರಂಗದ ಮೂಲಕ ನಟನೆಗೆ ಕಾಲಿಟ್ಟ ಬಾಲಿವುಡ್ ನಟಿ ತಾಪ್ಸಿಯ ಮೊದಲ ಸಿನಿಮಾಕ್ಕೆ ಸಿಕ್ಕ ಸಂಭಾವನೆ ಎಷ್ಟು?

31 Jan 2024

Author : Manjunatha

ದೀಪಿಕಾ, ಪ್ರಿಯಾಂಕಾ ಚೋಪ್ರಾ ರೀತಿಯಲ್ಲಿಯೇ ಬಾಲಿವುಡ್​ನ ಜನಪ್ರಿಯ ನಟಿ ತಾಪ್ಸಿ ಪನ್ನು, ನಟನೆಗೆ ಕಾಲಿಟ್ಟಿದ್ದು ದಕ್ಷಿಣ ಭಾರತ ಚಿತ್ರರಂಗದ ಮೂಲಕ.

ಬಾಲಿವುಡ್​ನ ನಟಿ

ತಾಪ್ಸಿ ಪನ್ನು ನಟಿಸಿದ ಮೊದಲ ಸಿನಿಮಾ ತೆಲುಗಿನ ‘ಜುಮ್ಮಂದಿ ನಾದಂ’. ಸಿನಿಮಾ ನಿರ್ದೇಶಿಸಿದ್ದು ರಾಘವೇಂದ್ರ ರಾವ್.

‘ಜುಮ್ಮಂದಿ ನಾದಂ’

‘ಜುಮ್ಮಂದಿ ನಾದಂ’ ಸಿನಿಮಾ 2010ರಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾಕ್ಕೆ ತಮಗೆ ಸಿಕ್ಕ ಸಂಭಾವನೆ ಎಷ್ಟೆಂದು ನಟಿ ತಾಪ್ಸಿ ಪನ್ನು ಹೇಳಿಕೊಂಡಿದ್ದಾರೆ.

 ಸಿಕ್ಕ ಸಂಭಾವನೆ ಎಷ್ಟು

ತಮ್ಮ ಮೊದಲ ಸಿನಿಮಾಕ್ಕೆ ತಾಪ್ಸಿ ಪನ್ನುಗೆ ಬರೋಬ್ಬರಿ 5 ಲಕ್ಷ ರೂಪಾಯಿ ಸಂಭಾವನೆ ದೊರೆತಿತ್ತಂತೆ. ಆ ಸಿನಿಮಾಕ್ಕಾಗಿ ಸುಮಾರು 50 ದಿನ ತಾಪ್ಸಿ ಶೂಟಿಂಗ್ ಮಾಡಿದ್ದರು.

5 ಲಕ್ಷ ಸಂಭಾವನೆ

ತಾಪ್ಸಿಯ ಎರಡನೇ ಸಿನಿಮಾಕ್ಕೂ ಸಹ ಐದು ಲಕ್ಷ ರೂಪಾಯಿ ಸಂಭಾವನೆಯೇ ದೊರಕಿತ್ತಂತೆ. 14 ವರ್ಷದ ಹಿಂದೆ ಇದು ಕಡಿಮೆ ಮೊತ್ತವೇನಲ್ಲ.

2ನೇ ಸಿನಿಮಾ ಸಂಭಾವನೆ

ತಾಪ್ಸಿ ಪನ್ನು ನಟನೆ ಆರಂಭಿಸಿದ ಮೊದಲ ನಾಲ್ಕು ವರ್ಷ ಒಂದೇ ಒಂದು ಹಿಂದಿ ಸಿನಿಮಾ ಅವಕಾಶವೂ ಅವರಿಗೆ ಲಭಿಸಿರಲಿಲ್ಲ.

ಬಾಲಿವುಡ್ ಅವಕಾಶ ಇಲ್ಲ

ಆ ನಂತರ ಒಂದರ ಹಿಂದೊಂದು ಅವಕಾಶಗಳು ದೊರೆಯಲು ಆರಂಭವಾದವು. ಬಾಲಿವುಡ್​ನ ಮಹಿಳಾ ಪ್ರಧಾನ ಸಿನಿಮಾಗಳ ಮೆಚ್ಚಿನ ನಟಿಯಾದರು ತಾಪ್ಸಿ.

ಬಾಲಿವುಡ್ ಸ್ಟಾರ್

ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾದ ಬಳಿಕವೂ ಆಗೊಮ್ಮೆ-ಈಗೊಮ್ಮೆ ತೆಲುಗು-ತಮಿಳು ಸಿನಿಮಾಗಳಲ್ಲಿ ತಾಪ್ಸಿ ನಟಿಸುತ್ತಿದ್ದಾರೆ.

ಹಿಂದಿ ಯಲ್ಲಿ ಬ್ಯುಸಿ

ಆದರೆ 2022ರ ಬಳಿಕ ತಾಪ್ಸಿ ಪನ್ನು ಹಿಂದಿ ಸಿನಿಮಾಗಳ ಬಿಟ್ಟರೆ ಪರಭಾಷೆಯ ಯಾವೊಂದು ಸಿನಿಮಾದಲ್ಲಿಯೂ ನಟಿಸಿಲ್ಲ.

ಇತ್ತೀಚೆಗೆ ನಟಿಸಿಲ್ಲ

ಮದುವೆಗೆ ತಯಾರಾಗುತ್ತಿರುವ ತಮನ್ನಾ ಭಾಟಿಯಾ: ಮದುವೆ ಎಲ್ಲಿ, ಯಾವಾಗ?