ಫ್ಯಾಷನ್ ಶೋನಲ್ಲಿ ಮಿಂಚು ಹರಿಸಿದ ಪುಷ್ಪ ನಿರ್ದೇಶಕನ ಸುಕುಮಾರ್ ಪುತ್ರಿ ಸುಕೃತಿ

25 JUNE 2024

Author : Manjunatha

‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್, ಟಾಲಿವುಡ್​ನಲ್ಲಿ ರಾಜಮೌಳಿ ಬಳಿಕ ಸ್ಟಾರ್ ನಿರ್ದೇಶಕ.

  ನಿರ್ದೇಶಕ ಸುಕುಮಾರ್

ಸುಕುಮಾರ್ ಸಿನಿಮಾ ಬಗ್ಗೆ ಅತೀವ ಫ್ಯಾಷನ್ ಉಳ್ಳ ನಿರ್ದೇಶಕ. ಅಂತೆಯೇ ಅವರ ಮಗಳಿಗೆ ಸಹ ಮನೊರಂಜನಾ ಕ್ಷೇತ್ರದ ಬಗ್ಗೆ ಆಸಕ್ತಿಯಿದೆ.

 ಮಗಳಿಗೆ ಸಹ ಆಸಕ್ತಿಯಿದೆ

ಸುಕುಮಾರ್ ಪುತ್ರಿ ಸುಕೃತಿ ಫ್ಯಾಷನ್, ಮಾಡೆಲಿಂಗ್ ಬಗ್ಗೆ ಆಸಕ್ತಿ ಹೊಂದಿದ್ದು ಫ್ಯಾಷನ್ ಶೋಗಳಲ್ಲಿ ಭಾಗಿಯಾಗಿದ್ದಾರೆ.

ಫ್ಯಾಷನ್ ಶೋಗಳಲ್ಲಿ ಭಾಗಿ

ರೀನೆ ಕ್ರಿಸ್ಟಲ್ ಕೋಚರ್​ ಫ್ಯಾಷನ್ ಶೋನಲ್ಲಿ ಸುಕೃತಿ ಸುಕುಮಾರ್ ಶೋ ಸ್ಟಾಪರ್ ಆಗಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.

  ರೀನೆ ಕ್ರಿಸ್ಟಲ್ ಕೋಚರ್​

ಸುಕೃತಿ ಸುಕುಮಾರ್ ನಟಿ ಸಹ ಆಗಿದ್ದು, ತಂದೆಯನ್ನೂ ಮೀರಿಸಿ ಈಗಾಗಲೇ ಒಮ್ಮೆ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

  ನಟಿ ಸುಕೃತಿ ಸುಕುಮಾರ್ 

‘ಗಾಂಧಿ ತಾತ ಚೆಟ್ಟು’ ಹೆಸರಿನ ಮಕ್ಕಳ ಸಿನಿಮಾದಲ್ಲಿ ಸುಕುಮಾರ್ ಪುತ್ರಿ ನಟಿಸಿದ್ದು, ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

  ಗಾಂಧಿ ತಾತ ಚೆಟ್ಟು ಚಿತ್ರ

ಜನರಿಂದಲೇ ಹಣ ಪಡೆದು ಕೇವಲ 85 ಲಕ್ಷ ರೂಪಾಯಿ ಹಣದಲ್ಲಿ ಮಾಡಿದ ‘ಗಾಂಧಿ ತಾತ ಚೆಟ್ಟು’ ಸಿನಿಮಾ ಕೆಲವು ವಿದೇಶಿ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಗೆದ್ದಿದೆ.

    ಹಲವು ಪ್ರಶಸ್ತಿ ಗೆದ್ದಿದೆ

ಸುಕೃತಿ ಸುಕುಮಾರ್, ಸುಕುಮಾರ್ ಹಾಗೂ ತಬಿತಾ ಸುಕುಮಾರ್ ಅವರ ಮೊದಲ ಮಗಳಾಗಿದ್ದು, ನಟನೆಯಲ್ಲಿ ಬಹಳ ಆಸಕ್ತಿ ಹೊಂದಿರುವವರಾಗಿದ್ದಾರೆ.

ಸುಕುಮಾರ್ ಹಾಗೂ ತಬಿತಾ

ಸುಕುಮಾರ್ ಹಾಗೂ ತಬಿತಾ ದಂಪತಿಗೆ ಒಬ್ಬ ಮಗ ಸಹ ಇದ್ದಾನೆ. ಮಕ್ಕಳಿಬ್ಬರಿಗೂ ಸಿನಿಮಾ ರಂಗದ ಮೇಲೆ ಅತೀವ ಆಸಕ್ತಿ ಇದೆಯಂತೆ.

  ಒಬ್ಬ ಮಗನೂ ಇದ್ದಾನೆ

ಶಾರುಖ್ ಖಾನ್ ಪುತ್ರಿ ಸುಹಾನಾ ಹಿಡಿದಿರುವ ಈ ಪುಟ್ಟ ಬ್ಯಾಗಿನ ಬೆಲೆ ಕೆಲವು ಲಕ್ಷಗಳು