ಬಾಲಿವುಡ್ ನಟಿ ಆಲಿಯಾ ಭಟ್ ಹಿಡಿದಿರುವ ಆ ಕಪ್ಪು ಬ್ಯಾಗಿನ ಬೆಲೆ ಸಾವಿರಗಲ್ಲ, ಕೆಲವು ಲಕ್ಷಗಳು!

18 Feb 2024

Author : Manjunatha

ಆಲಿಯಾ ಭಟ್, ಬಾಲಿವುಡ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರು. ದೀಪಿಕಾ ಹಾಗೂ ಆಲಿಯಾ ಇಬ್ಬರು ಟಾಪ್ ಎರಡು ಸ್ಥಾನವನ್ನು ಅಲಂಕರಿಸಿದ್ದಾರೆ.

ದೀಪಿಕಾ ಹಾಗೂ ಆಲಿಯಾ

ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಆಲಿಯಾ ಭಟ್, ಯಶಸ್ಸಿನ ಜೊತೆಗೆ ಪ್ರಶಸ್ತಿಗಳನ್ನು ಸಹ ಬಾಚಿಕೊಳ್ಳುತ್ತಿದ್ದಾರೆ.

ಯಶಸ್ಸಿನ ಜೊತೆ ಪ್ರಶಸ್ತಿ

‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿನ ಅವರ ಅತ್ಯುತ್ತಮ ನಟನೆ ಗುರುತಿಸಿ ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ಇತ್ತೀಚೆಗಷ್ಟೆ ನೀಡಲಾಗಿದೆ.

ಗಂಗೂಬಾಯಿ ಸಿನಿಮಾ

ಅತ್ಯುತ್ತಮ ನಟಿಯಾಗಿರುವ ಜೊತೆಗೆ ಸ್ಟೈಲ್ ಐಕಾನ್ ಸಹ ಆಗಿರುವ ಆಲಿಯಾ ಭಟ್, ಸರಳವಾಗಿ ಕಂಡರು ಐಶಾರಾಮಿ ಬ್ರ್ಯಾಂಡ್​ನ ಫ್ಯಾಷನ್ ಆಕ್ಸೆಸ್ಸರಿಗಳನ್ನೇ ಬಳಸುತ್ತಾರೆ.

ಸ್ಟೈಲ್ ಐಕಾನ್ ಆಲಿಯಾ

ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಆಲಿಯಾ ಭಟ್ ಕೈಯಲ್ಲಿ ಒಂದು ಕಪ್ಪು ಬಣ್ಣದ ಬ್ಯಾಗೊಂದನ್ನು ಹಿಡಿದಿದ್ದರು. ಸರಳವಾಗಿ ಕಾಣುತ್ತಿದ್ದ ಆ ಬ್ಯಾಗಿನ ಬೆಲೆ ಕೆಲವು ಲಕ್ಷಗಳು.

ಕಪ್ಪು ಬಣ್ಣದ ಬ್ಯಾಗ್

ಆಲಿಯಾ ಭಟ್ ಹಿಡಿದಿದ್ದ ಆ ಕಪ್ಪು ಬ್ಯಾಗಿನ ಬೆಲೆ 4.33 ಲಕ್ಷ ರೂಪಾಯಿಗಳು. ಆ ಬ್ಯಾಗು ಜಗದ್​ವಿಖ್ಯಾತ ಗುಚ್ಚಿ ಸಂಸ್ಥೆಯ ಬ್ಯಾಗು.

ಬ್ಯಾಗ್​ನ ಬೆಲೆ ಎಷ್ಟು?

ಆಲಿಯಾ ಭಟ್ ಬಳಿ ಹಲವು ಬ್ರ್ಯಾಂಡ್​ಗಳ ಹಲವು ಬಣ್ಣಗಳ ದುಬಾರಿ ಬ್ಯಾಗುಗಳ ಕಲೆಕ್ಷನ್ ಇದೆ. ಕೆಲವು ದಿನಗಳ ಹಿಂದೆಯಷ್ಟೆ ಗುಚ್ಚಿಯದ್ದೇ ಬೇರೆ ಬ್ಯಾಗೊಂದನ್ನು ಹಿಡಿದು ಹೊರಬಂದಿದ್ದರು.

ಬ್ಯಾಗುಗಳ ಕಲೆಕ್ಷನ್ ಇದೆ

ಆಲಿಯಾ ಭಟ್ ಸರಳವಾಗಿ ಕಾಣುವ ಉಡುಗೆಗಳನ್ನು ಧರಿಸುತ್ತಾರೆ, ಆಲಿಯಾರ ಬಟ್ಟೆಗಳು ನೋಡಲು ಸರಳವಾಗಿ ಕಂಡರೂ ಸಹ ಭಾರಿ ದುಬಾರಿಯಾಗಿರುತ್ತವೆ.

ಸರಳ ಕಾಣುವ ಉಡುಗೆ

ನಟಿಯಾಗಿ ಸಖತ್ ಹೆಸರು ಮಾಡಿರುವ ಆಲಿಯಾ ನಿರ್ಮಾಪಕಿಯೂ ಆಗಿದ್ದು, ಆಲಿಯಾ ನಿರ್ಮಾಣ ಮಾಡಿರುವ ‘ಪೋಚರ್’ ಹೆಸರಿನ ವೆಬ್ ಸರಣಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

‘ಪೋಚರ್’ ವೆಬ್ ಸರಣಿ

ಫ್ಯಾಷನ್ ಐಕಾನ್ ಸೋನಂ ಕಪೂರ್ ಕೈಯಲ್ಲಿರುವ ಪುಟ್ಟ ಬ್ಯಾಗಿನ ಬೆಲೆ ಎಷ್ಟು ಲಕ್ಷ ಗೊತ್ತೆ?