ಬಾಲಿವುಡ್ ಫ್ಯಾಷನ್ ಐಕಾನ್ ಸೋನಂ ಕಪೂರ್ ಕೈಯಲ್ಲಿರುವ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?

18 Feb 2024

Author : Manjunatha

ಸೋನಂ ಕಪೂರ್ ತಮ್ಮ ನಟನೆಗಿಂತಲೂ ಹೆಚ್ಚಾಗಿ ತಮ್ಮ ಫ್ಯಾಷನ್ ಸೆನ್ಸ್​ನಿಂದ ಹೆಚ್ಚು ಹೆಸರು ಗಳಿಸಿರುವವರು.

ಸೋನಂ ಕಪೂರ್ 

ಬಾಲಿವುಡ್​ನಲ್ಲಿ ಅತ್ಯಂತ ಹೆಚ್ಚು ಐಶಾರಾಮಿ, ದುಬಾರಿ ಬ್ರ್ಯಾಂಡ್​ಗಳನ್ನು ಬಳಸುವವರು ಸೋನಂ ಕಪೂರ್ ಎಂಬ ಮಾತಿದೆ.

ಸೋನ ದುಬಾರಿ ಬ್ರ್ಯಾಂಡ್

ಸೋನಂ ಕಪೂರ್ ಶಾಪಿಂಗ್ ಬಗ್ಗೆಯೂ ಬಾಲಿವುಡ್​ನಲ್ಲಿ ಹಲವು ಜೋಕ್​ಗಳು ಹರಿದಾಡುತ್ತಿವೆ. ಸೋನಂ ಕಪೂರ್ ಸದಾ ಅತ್ಯುತ್ತಮವಾದ ಬ್ರ್ಯಾಂಡ್​ನ ಬಟ್ಟೆಗಳನ್ನೇ ಬಳಸುತ್ತಾರೆ.

ಸೋನಂ ಬಗ್ಗೆ ಜೋಕ್

ಸೋನಂ ಕಪೂರ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಧರಿಸಿದ್ದ ಉಡುಗೆ ಸಖತ್ ಗಮನ ಸೆಳೆಯಿತು. ಉಡುಗೆಗಿಂತಲೂ ಅವರ ಕೈಯಲ್ಲಿದ್ದ ಬ್ಯಾಗು ಫ್ಯಾಷನ್ ಪ್ರಿಯರ ಕಣ್ಣು ಕುಕ್ಕಿತು.

ಸೋನಂರ ಬ್ಯಾಗು

ಆ ಕಾರ್ಯಕ್ರಮದಲ್ಲಿ ಸೋನಂ ಕಪೂರ್ ಕೈಯಲ್ಲಿ ಹಿಡಿದಿದ್ದ ಬ್ಯಾಗಿನ ಬೆಲೆ ಬರೋಬ್ಬರಿ 4.58 ಲಕ್ಷ ರೂಪಾಯಿಗಳು. 

ಬ್ಯಾಗಿನ ಬೆಲೆ ಎಷ್ಟು?

ಸೋನಂ ಕಪೂರ್ ಅವರ ಬ್ಯಾಗು ವಿಶ್ವದ ಐಶಾರಾಮಿ ಬ್ರ್ಯಾಂಡ್​ಗಳಲ್ಲಿ ಒಂದಾದ ಡಯೋರ್ ಬ್ರ್ಯಾಂಡ್​ನ ಬ್ಯಾಗು. ಹಾಗಾಗಿ ಇದರ ಬೆಲೆ ಇಷ್ಟು ದುಬಾರಿ.

ಐಶಾರಾಮಿ ಬ್ರ್ಯಾಂಡ್

ಸೋನಂ ಧರಿಸಿರುವ ಉಡುಗೆ ಸಹ ಡಿಯೋರ್ ಸಂಸ್ಥೆಯದ್ದೇ. ಉಡುಗೆಯ ಬೆಲೆಯೂ ಸಹ 3 ಲಕ್ಷ ರೂಪಾಯಿಗಳು ಎನ್ನಲಾಗುತ್ತದೆ. ಇಂಥಹಾ ಹಲವು ದುಬಾರಿ ಉಡುಗೆಗಳು ಅವರ ಬಳಿ ಇವೆ.

ಡಿಯೋರ್ ಸಂಸ್ಥ ಬ್ಯಾಗ್

ಸೋನಂ ಕಪೂರ್ ಮದುವೆಯಾದ ಬಳಿಕ ಸಿನಿಮಾ ಆಯ್ಕೆಯ ವಿಷಯದಲ್ಲಿ ತುಸು ಬದಲಾಗಿದ್ದಾರೆ. ಗ್ಲಾಮರ್ ರಹಿತವಾದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಗ್ಲಾಮರ್ ರಹಿತ ಪಾತ್ರ

ಸೋನಂ ಕಪೂರ್ ನಟಿಸಿದ್ದ ‘ಬ್ಲೈಂಡ್’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು. ಕ್ರೈಂ ಥ್ರಿಲ್ಲರ್ ಕಥೆಯುಳ್ಳ ಈ ಸಿನಿಮಾನಲ್ಲಿ ಕುರುಡಿಯ ಪಾತ್ರದಲ್ಲಿ ಸೋನಂ ನಟಿಸಿದ್ದರು.

‘ಬ್ಲೈಂಡ್’ ಸಿನಿಮಾ

ರಕುಲ್ ಪ್ರೀತ್ ಸಿಂಗ್ ಧರಿಸಿರುವ ಈ ಹೊಳೆಯುವ ಹಸಿರು ಬಣ್ಣದ ಉಡುಗೆಯ ಬೆಲೆ ಎಷ್ಟು ಗೊತ್ತೆ?