ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಗೊತ್ತೆ?

05 DEC 2023

Author : Manjunatha

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅತಿ ಹೆಚ್ಚು ಸಂಭಾವನೆ ಪಡೆವ ಭಾರತದ ಸ್ಟಾರ್ ನಟರಲ್ಲಿ ಒಬ್ಬರು.

ಬಾಲಿವುಡ್ ಸ್ಟಾರ್

ಅಕ್ಷಯ್​ರ ಸಾಲು-ಸಾಲು ಸಿನಿಮಾಗಳು ಸೋತರೂ ಸಹ ಅವರ ಬೇಡಿಕೆ ತುಸುವೂ ಕಡಿಮೆಯಾಗಿಲ್ಲ. ಈಗಲೂ ಹಲವು ಸಿನಿಮಾ ಅವರ ಕೈಯಲ್ಲಿವೆ.

ಸಾಲು-ಸಾಲು ಸೋಲು

ಅಕ್ಷಯ್ ಕುಮಾರ್ ಕೈಯಲ್ಲಿ ಪ್ರಸ್ತುತ ಎಂಟು ಸಿನಿಮಾಗಳಿವೆ. ಇವುಗಳಲ್ಲಿ ಮೂರು ಸಿನಿಮಾಗಳು ಬಯೋಪಿಕ್​ಗಳಾಗಿವೆ.

ಎಂಟು ಸಿನಿಮಾ

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಕ್ಷಯ್, ಟೈಗರ್ ಶ್ರಾಫ್ ಜೊತೆ ನಟಿಸಿದ್ದಾರೆ.

ಅಕ್ಷಯ್-ಟೈಗರ್

ಛತ್ರಪತಿ ಶಿವಾಜಿ ಮಹಾರಾಜ್ ಜೀವನ ಆಧರಿಸಿದ ಮರಾಠಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. 

ಛತ್ರಪತಿ ಶಿವಾಜಿ

ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ತಮಿಳಿನ ‘ಸೂರರೈ ಪೋಟ್ರು’ ಸಿನಿಮಾದ ರೀಮೇಕ್ ಇದು.

ಕ್ಯಾಪ್ಟನ್ ಗೋಪಿನಾಥ್

‘ಸ್ಕೈ ಫೋರ್ಸ್’ ಹೆಸರಿನ ಆಕ್ಷಯ್ ಸಿನಿಮಾದಲ್ಲಿ ಅಕ್ಷಯ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಎಸಿಪಿ ಪಾತ್ರ ಅವರದ್ದು.

‘ಸ್ಕೈ ಫೋರ್ಸ್’

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್​ನ ಅಧ್ಯಕ್ಷ ಸಿ ಶಂಕರನ್ ನಾಯರ್ ಜೀವನ ಆಧರಿಸಿದ ಸಿನಿಮಾದಲ್ಲಿ ಅಕ್ಷಯ್ ನಟಿಸುತ್ತಿದ್ದಾರೆ.

ಸಿ ಶಂಕರನ್ ನಾಯರ್

‘ಸಿಂಘಂ ಅಗೇನ್’ ಸಿನಿಮಾದಲ್ಲಿಯೂ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಸಹ ಇದ್ದಾರೆ.

‘ಸಿಂಘಂ ಅಗೇನ್’

ರಶ್ಮಿಕಾ, ಆಲಿಯಾ, ಕತ್ರಿನಾ ಬಳಿಕ ಡೀಪ್ ಫೇಕ್ ಸಂಕಷ್ಟಕ್ಕೆ ಸಿಲುಕಿದ ಪ್ರಿಯಾಂಕಾ ಚೋಪ್ರಾ