ರಶ್ಮಿಕಾ, ಕಾಜೋಲ್ ಬಳಿಕ ಪ್ರಿಯಾಂಕಾ ಚೋಪ್ರಾಗೂ ಡೀಪ್ ಫೇಕ್ ವಿಡಿಯೋ ಸಂಕಷ್ಟ ಎದುರಾಗಿದೆ.
05 DEC 2023
Author : Manjunatha
ಡೀಪ್ ಫೇಕ್ ತಂತ್ರಜ್ಞಾನ ನಟಿಯರ ನೆಮ್ಮದಿ ಕೆಡಿಸಿದೆ, ಒಬ್ಬರಾದ ಮೇಲೊಬ್ಬ ನಟಿಯರನ್ನು ಡೀಪ್ ಫೇಕ್ ಕಾಡುತ್ತಿದೆ.
ನಟಿಯರಿಗೆ ಸಂಕಷ್ಟ
ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಮೊದಲಿಗೆ ರಶ್ಮಿಕಾ ಮಂದಣ್ಣರ ನಕಲಿ ವಿಡಿಯೋ ನಿರ್ಮಿಸಿ ವೈರಲ್ ಮಾಡಲಾಗಿತ್ತು.
ರಶ್ಮಿಕಾ ನಕಲಿ ವಿಡಿಯೋ
ಬಳಿಕ ನಟಿ ಕಾಜೊಲ್, ಕತ್ರಿನಾ ಕೈಫ್, ಆಲಿಯಾ ಭಟ್ರ ನಕಲಿ ವಿಡಿಯೋ, ಚಿತ್ರಗಳನ್ನು ಮಾಡಿ ಹಂಚಿಕೊಳ್ಳಲಾಯ್ತು.
ಕಾಜೊಲ್ ಕತ್ರಿನಾ
ಈಗ ನಟಿ ಪ್ರಿಯಾಂಕಾ ಚೋಪ್ರಾರ ನಕಲಿ ವಿಡಿಯೋ ಸೃಷ್ಟಿಸಿ ಅದನ್ನು ವೈರಲ್ ಮಾಡಲಾಗಿದೆ.
ನಕಲಿ ವಿಡಿಯೋ ಸೃಷ್ಟಿ
ಯಾವುದೋ ಬೇರೆ ಅಶ್ಲೀಲ ವಿಡಿಯೋಕ್ಕೆ ಪ್ರಿಯಾಂಕಾರ ಮುಖ ಎಡಿಟ್ ಮಾಡಿ ಹಾಕಿ ವಿಡಿಯೋವನ್ನು ವೈರಲ್ ಮಾಡಲಾಗಿದೆ.
ಪ್ರಿಯಾಂಕಾ ವಿಡಿಯೋ
ಆದರೆ ಇದು ನಕಲಿ ವಿಡಿಯೋ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ, ರಶ್ಮಿಕಾ ಮಂದಣ್ಣರ ವಿಡಿಯೋ ರೀತಿ ಪೂರ್ಣ ಡೀಪ್ ಫೇಕ್ ವಿಡಿಯೋ ಇದಾಗಿಲ್ಲ.
ಡೀಪ್ ಫೇಕ್ ವಿಡಿಯೋ
ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಹಾಲಿವುಡ್ ನಟಿ
ಜೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಹಿಂದಿ ಸಿನಿಮಾದಲ್ಲಿಯೂ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್ ಸಿನಿಮಾ
ಹಸಿರು ಸೀರೆಯುಟ್ಟು ಬಂದ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ, ಮುಡಿಯಲ್ಲಿ ಮಲ್ಲಿಗೆ ಮಿಸ್ಸಿಂಗ್
ಮತ್ತಷ್ಟು ನೋಡಿ