ಅಂಬಾನಿ ಮದುವೆಗೆ ಬಂದ ರಿಯಾನಾ ಕೈಯಲ್ಲಿರುವ ಬ್ಯಾಗಿನ ಬೆಲೆ ಎಷ್ಟು ಗೊತ್ತೆ?

01 Mar 2024

Author : Manjunatha

ಅಂತರಾಷ್ಟ್ರೀಯ ಪಾಪ್ ತಾರೆ ರಿಯಾನಾ ಭಾರತಕ್ಕೆ ಬಂದಿದ್ದಾರೆ, ಮುಖೇಶ್ ಅಂಬಾನಿ ಪುತ್ರನ ಮದುವೆಯಲ್ಲಿ ಅವರು ಪ್ರದರ್ಶನ ನೀಡಲಿದ್ದಾರೆ.

ಪಾಪ್ ತಾರೆ ರಿಯಾನಾ

ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಿಯಾನಾ, ಅಂಬಾನಿ ಮದುವೆಯಲ್ಲಿ ಪ್ರದರ್ಶನ ನೀಡುತ್ತಿರುವುದು ವಿಶೇಷ.

ಕೋಟ್ಯಂತರ ಅಭಿಮಾನಿ

ಕೆಲವು ಸುದ್ದಿಗಳ ಪ್ರಕಾರ ರಿಯಾನಾಗೆ ಸುಮಾರು 60 ಕೋಟಿ ರೂಪಾಯಿ ಸಂಭಾವನೆ ನೀಡಿ ಭಾರತಕ್ಕೆ ಕರೆಸಲಾಗಿದೆಯಂತೆ.

60 ಕೋಟಿ ಸಂಭಾವನೆ

ಹೀಗೆ ಭಾರತಕ್ಕೆ ಬಂದ ರಿಯಾನಾ ಕೈಯಲ್ಲಿ ಬ್ಯಾಗ್ ಒಂದನ್ನು ಹಿಡಿದು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆ ಬ್ಯಾಗಿನ ಬೆಲೆ ಎಷ್ಟು ಗೊತ್ತೆ?

ಬ್ಯಾಗಿನ ಬೆಲೆ ಎಷ್ಟು?

ರಿಯಾನಾ ಕೈಯಲ್ಲಿ ಹಿಡಿದಿದ್ದ ಬ್ಯಾಗಿನ ಬೆಲೆ ಬರೋಬ್ಬರಿ 4.31 ಲಕ್ಷ ರೂಪಾಯಿಗಳು, ಐಶಾರಾಮಿ ಡಿಯೋರ್ ಕಂಪೆನಿಯ ಬ್ಯಾಗ್ ಅದು.

4.31 ಲಕ್ಷ ರೂಪಾಯಿ

ರಿಯಾನಾ ಇಂದು ‘ಸ್ಟ್ರೀಟ್ ಸ್ಟೈಲ್’ ಮಾದರಿಯ ಉಡುಪಿನಲ್ಲಿ ಕಾಣಿಸಿಕೊಂಡರು. ಸಖತ್ ಫಂಕಿಯಾಗಿ ಬಟ್ಟೆ ತೊಟ್ಟಿದ್ದರು.

‘ಸ್ಟ್ರೀಟ್ ಸ್ಟೈಲ್’ ಮಾದರಿ

ರಿಯಾನಾ ವಿಶ್ವದ ಟಾಪ್ ಫ್ಯಾಷನ್ ಐಕಾನ್​ಗಳಲ್ಲಿ ಒಬ್ಬರು. ಹಾಗಾಗಿ ಅವರ ಸ್ಟೈಲ್ ಸ್ಟೇಟ್​ಮೆಂಟ್​ ಮೇಲೆ ವಿಶ್ವದ ಕಣ್ಣಿರುತ್ತದೆ.

ಟಾಪ್ ಫ್ಯಾಷನ್ ಐಕಾನ್

ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ರಿಯಾನಾ ಕೈಯಲ್ಲಿ ಫಂಕಿಯಾಗಿ ಕಾಣುವ ಕನ್ನಡಕವೂ ಇತ್ತು. ಅದರ ಬೆಲೆ ಸಹ ನಾಲ್ಕು ಲಕ್ಷ ರೂಪಾಯಿ ಎನ್ನಲಾಗುತ್ತಿದೆ.

ಕನ್ನಡಕದ ಬೆಲೆ ಎಷ್ಟು?

ರಿಯಾನಾ ಅಂಬಾನಿ ಪುತ್ರನ ಮದುವೆಯಲ್ಲಿ ನೀಡಲಿರುವ ಕೆಲವು ಗಂಟೆಗಳ ಪ್ರದರ್ಶನಕ್ಕೆ ತಂದಿರುವ ಲಾರಿಗಟ್ಟಲೆ ಲಗೇಜಿನ ಬಗ್ಗೆಯೂ ಜೋರು ಚರ್ಚೆಯಾಗುತ್ತಿದೆ.

ಲಾರಿಗಟ್ಟಲೆ ಲಗೇಜು

ಬೆಳಗಿನ ಉಪಹಾರಕ್ಕೆ ‘ಸರಕ್ರೋಟ್’ ತಿನ್ನುವ ಸಮಂತಾ, ಏನಿದರ ಮಹತ್ವ?