‘ಸರಕ್ರೋಟ್’ ಇದು ಸಮಂತಾರ ಬೆಳಗಿನ ಉಪಹಾರ, ಇದರ ಮಹತ್ವ ಏನು ಗೊತ್ತೆ?
01 Mar 2024
Author : Manjunatha
ನಟಿ ಸಮಂತಾ ಕಳೆದ ಕೆಲವು ವರ್ಷಗಳಿಂದ ತೀವ್ರ ಅನಾರೋಗ್ಯ ಎದುರಿಸಿದ್ದರು. ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ.
ತೀವ್ರ ಅನಾರೋಗ್ಯ
ಮೆಯೋಟಿಸ್ ಹೆಸರಿನ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರು ಸಮಂತಾ. ಮನುಷ್ಯನ ದೇಹದ ರೋಗನಿರೋಧಕ ಶಕ್ತಿ ಕ್ಷೀಣಿಸುವಂತಾಗುವುದೇ ಮೆಯೋಟಿಸ್ ಖಾಯಿಲೆ.
ಮೆಯೋಟಿಸ್ ಖಾಯಿಲೆ
ವೈದ್ಯರ ಸಹಾಯ, ದಿನ ನಿತ್ಯದ ವ್ಯಾಯಾಮ, ಯೋಗ, ಪ್ರಕೃತಿ ಚಿಕಿತ್ಸೆ, ಅಧ್ಯಾತ್ಮ, ಡಯೆಟ್ ಎಲ್ಲವನ್ನೂ ಬಳಸಿ ಅನಾರೋಗ್ಯದಿಂದ ಸಮಂತಾ ಚೇತರಿಸಿಕೊಂಡಿದ್ದಾರೆ.
ಸಮಂತಾ ಚೇತರಿಕೆ
ಮೆಯೋಟಿಸ್ನಿಂದ ಚೇತರಿಸಿಕೊಂಡ ಬಳಿಕ ಸಮಂತಾ ತಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಆಹಾರ ಕ್ರಮದಲ್ಲಿ.
ಆಹಾರ ಕ್ರಮ ಬದಲಾವಣೆ
ಸಮಂತಾ ಈಗ ಸಾಮಾನ್ಯ ಆಹಾರ ಸೇವಿಸುವುದಿಲ್ಲ. ಆಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ಪಥ್ಯ ಪಾಲಿಸುತ್ತಾರೆ. ವಿಶೇಷ ಆಹಾರ ಖಾದ್ಯಗಳನ್ನು ಸೇವಿಸುತ್ತಾರೆ.
ವಿಶೇಷ ಆಹಾರ ಖಾದ್ಯ
ಸಮಂತಾ ಪ್ರತಿದಿನ ಬೆಳಿಗ್ಗೆ ‘ಸರಕ್ರೋಟ್’ ಎಂಬ ಉಪಹಾರ ಸೇವನೆ ಮಾಡುತ್ತಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ ಸಮಂತಾ.
‘ಸರಕ್ರೋಟ್’ ಸೇವನೆ
ಸರಕ್ರೋಟ್ ಅನ್ನು ಗೆಡ್ಡೆಕೋಸಿನಿಂದ ಮಾಡಲಾಗಿರುತ್ತದೆ. ಫರ್ಮೆಂಟ್ (ಹುದುಗಿಸಿದ) ಮಾಡಲಾದ ಗೆಡ್ಡೆಕೋಸನ್ನು ಸರಕ್ರೋಟ್ ಎನ್ನಲಾಗುತ್ತದೆ.
ಫರ್ಮೆಂಟ್ ಆಹಾರ
ಸರಕ್ರೋಟ್ ಸೇವನೆಯಿಂದ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಒಳ್ಳೆಯ ಬ್ಯಾಕ್ಟೀರಿಯಾ
ದೋಸೆ, ಇಡ್ಲಿಗಳು ಸಹ ಫರ್ಮೆಂಟೆಡ್ (ಹುದುಗಿಸಿ) ಆಹಾರಗಳೇ, ಆದರೆ ಅವನ್ನು ಬೇಯಿಸುವ ಅಥವಾ ಕಾವಲಿಯಲ್ಲಿ ಕಾಯಿಸುವ ಕಾರಣ, ಅವಕ್ಕಿಂತಲೂ ಸರಕ್ರೋಟ್ ಒಳ್ಳೆಯದೆನ್ನಲಾಗುತ್ತದೆ.
ಸರಕ್ರೋಟ್ ಒಳ್ಳೆಯದು
ಮೆಚ್ಚಿನ ಇಬ್ಬರು ನಟರ ಚಿತ್ರ ಹಂಚಿಕೊಂಡ ಸಮಂತಾ, ಯಾರು ಆ ನಟರು?
ಮತ್ತಷ್ಟು ನೋಡಿ