ನಟಿ ಸಮಂತಾ ತಮ್ಮ ಮೆಚ್ಚಿನ ಇಬ್ಬರು ನಟರ ಚಿತ್ರವನ್ನು ಇನ್​ಸ್ಟಾನಲ್ಲಿ ಹಂಚಿಕೊಂಡಿದ್ದಾರೆ, ಯಾರು ಆ ನಟರು?

27 Feb 2024

Author : Manjunatha

ನಟಿ ಸಮಂತಾ ಸಿನಿಮಾ ರಂಗಕ್ಕೆ ಕಾಲಿಟ್ಟು 14 ವರ್ಷಗಳಾಗಿವೆ. ಸಮಂತಾ ನಟಿಸಿದ ಮೊದಲ ಸಿನಿಮಾ ‘ಏ ಮಾಯ ಚೇಸಾವೆ’ 2010ರ ಫೆಬ್ರವರಿ 26ಕ್ಕೆ ಬಿಡುಗಡೆ ಆಗಿತ್ತು.

‘ಏ ಮಾಯ ಚೇಸಾವೆ’

‘ಏ ಮಾಯ ಚೇಸಾವೆ’ ಸಿನಿಮಾದ ಬಳಿಕ ಸಮಂತಾ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ತೆಲುಗು, ತಮಿಳಿನ ಸ್ಟಾರ್ ನಟರೊಟ್ಟಿಗೆ ಸಮಂತಾ ನಟಿಸಿದ್ದಾರೆ.

ತೆಲುಗು-ತಮಿಳು ಚಿತ್ರರಂಗ

ಚಿತ್ರರಂಗದಲ್ಲಿ ಅನುಭವ ಗಳಿಸುತ್ತಾ ಸಾಗಿದಂತೆ ಭಿನ್ನ ಪ್ರಯೋಗಗಳಿಗೂ ಕೈ ಹಾಕಿದ ಸಮಂತಾ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ.

ಭಿನ್ನ ಪ್ರಯೋಗಗಳಿಗೆ ಕೈ

ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷಗಳ ಬಳಿಕವೂ ಸಮಂತಾ ಬೇಡಿಕೆ ಉಳಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾ, ವೆಬ್ ಸರಣಿ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ.

ಸರಣಿ ಸಿನಿಮಾಗಳು

ಇದೀಗ ಸಮಂತಾ, ಚಿತ್ರರಂಗದಲ್ಲಿ 14 ವರ್ಷ ಪೂರೈಸಿರುವ ಕಾರಣ ಚಿತ್ರರಂಗದ ಹಲವು ಗಣ್ಯರು ಸಮಂತಾಗೆ ಶುಭಾಶಯ ತಿಳಿಸಿದ್ದಾರೆ.

ಸಮಂತಾಗೆ ಶುಭಾಶಯ

ಶುಭಾಶಯಗಳನ್ನು ತಿಳಿಸಿರುವವರಿಗೆ ಅಭಿನಂದನೆ ತಿಳಿಸುವ ಜೊತೆಗೆ, ಸಮಂತಾ ತನ್ನ ಮೆಚ್ಚಿನ ಇಬ್ಬರು ನಟರ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮೆಚ್ಚಿನ ಇಬ್ಬರು ನಟರು

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿ ಜೊತೆಗಿನ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದು, ನನ್ನ ಆಲ್​ ಟೈಂ ಫೇವರೇಟ್ ನಟ ಎಂದು ಬರೆದುಕೊಂಡಿದ್ದಾರೆ.

ಸೂಪರ್ ಸ್ಟಾರ್ ಮಮ್ಮುಟಿ

ಇದರ ಜೊತೆಗೆ ಮಲಯಾಳಂ ನಟ ಫಹಾದ್ ಫಾಸಿಲ್​ರ ಜಾಹೀರಾತೊಂದರ ಚಿತ್ರವನ್ನು ಹಂಚಿಕೊಂಡು ಇವರೂ ಸಹ ನನ್ನ ಫೇವರೇಟ್ ನಟ ಎಂದು ಬರೆದುಕೊಂಡಿದ್ದಾರೆ.

ನಟ ಫಹಾದ್ ಫಾಸಿಲ್

ಸಮಂತಾ ಪ್ರಸ್ತುತ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಶೀಘ್ರವೇ ಚಿತ್ರರಂಗಕ್ಕೆ ಮರು ಎಂಟ್ರಿ ಸಹ ನೀಡಲಿದ್ದಾರೆ.

ಚಿತ್ರರಂಗದಿಂದ ಬ್ರೇಕ್

ಅಪ್ಪುಗಾಗಿ ಹೆಜ್ಜೆ ಹಾಕಲಿದ್ದಾರೆ ನಟಿ ತಾನ್ಯಾ ಹೋಪ್