ಪುನೀತ್ ರಾಜ್​ಕುಮಾರ್ ಸ್ಮರಣಾರ್ಥ ನೃತ್ಯ ನಮನ ಸಲ್ಲಿಸಲಿದ್ದಾರೆ ನಟಿ ತಾನ್ಯಾ ಹೋಪ್

24 Feb 2024

Author : Manjunatha

ಬೆಂಗಳೂರಿನ ನಟಿ ತಾನ್ಯಾ ಹೋಪ್, ಪ್ರಸ್ತುತ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ.

ತೆಲುಗು ಹಾಗೂ ತಮಿಳು

ಬೆಂಗಳೂರಿನವರಾದರೂ ತೆಲುಗು ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ತಾನ್ಯಾ ಹೋಪ್, ಕನ್ನಡದಲ್ಲಿಯೂ ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬೆಂಗಳೂರಿನ ಚೆಲುವೆ

‘ಯಜಮಾನ’ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ತಾನ್ಯಾ ಹೋಪ್, ಈ ವರೆಗೆ ಐದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ಯಜಮಾನ’ ಸಿನಿಮಾ

ಇದೀಗ ನಟಿ ತಾನ್ಯಾ ಹೋಪ್, ಅಪ್ಪು ನೆನಪಿಗಾಗಿ ನೃತ್ಯ ನಮನ ಸಲ್ಲಿಸಲಿದ್ದಾರೆ. ಅದೂ ‘ಗೌರಿ’ ಚಿತ್ರತಂಡದ ಮೂಲಕ.

ಅಪ್ಪು ನೆನಪಿಗಾಗಿ ನೃತ್ಯ

ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ನಟಿಸುತ್ತಿರುವ ಮೊದಲ ಸಿನಿಮಾ ‘ಗೌರಿ’ಯಲ್ಲಿ ತಾನ್ಯಾ ಹೋಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಪಾತ್ರದಲ್ಲಿ ತಾನ್ಯಾ

ಇದೀಗ ಸಮರ್ಜಿತ್ ಜೊತೆ ಸೇರಿಕೊಂಡು ಅಪ್ಪು ಹುಟ್ಟುಹಬ್ಬಕ್ಕಾಗಿ ವಿಶೇಷ ಹಾಡೊಂದರಲ್ಲಿ ತಾನ್ಯಾ ಹೋಪ್ ಹೆಜ್ಜೆ ಹಾಕಲಿದ್ದಾರೆ.

ವಿಶೇಷ ಹಾಡಿಗೆ ಡ್ಯಾನ್ಸ್

ಮಾರ್ಚ್ 17 ರಂದು ಬಿಡುಗಡೆ ಆಗಲಿರುವ ಈ ಹಾಡಿಗೆ ಮೋಹನ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಹಾಡಿನ ಚಿತ್ರೀಕರಣ ಚಾಲ್ತಿಯಲ್ಲಿದೆ.

ಹಾಡಿನ ಚಿತ್ರೀಕರಣ ಚಾಲ್ತಿ

ತಾನ್ಯಾ ಹೋಪ್ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ತಮಿಳು, ತೆಲುಗು ಚಿತ್ರರಂಗ

ಪ್ರಸ್ತುತ ಒಂದರ ಹಿಂದೊಂದರಂತೆ ಬರೋಬ್ಬರಿ ಮೂರು ತಮಿಳು ಸಿನಿಮಾಗಳಲ್ಲಿ ತಾನ್ಯಾ ಹೋಪ್ ನಟಿಸುತ್ತಿದ್ದಾರೆ.

ಮೂರು ತಮಿಳು ಸಿನಿಮಾ

ಮತ್ತೆ ಬಾಲಿವುಡ್​ಗೆ ಹೋದ ತಮನ್ನಾ ಭಾಟಿಯಾ, ಈ ಬಾರಿ ಹಾರರ್ ಸಿನಿಮಾ