ದಕ್ಷಿಣ ಭಾರತದ ಜನಪ್ರಿಯ ನಟಿ ತಮನ್ನಾ ಭಾಟಿಯಾ ಮತ್ತೊಮ್ಮೆ ಬಾಲಿವುಡ್​ಗೆ ಹೋಗಿದ್ದಾರೆ.

24 Feb 2024

Author : Manjunatha

ತಮನ್ನಾ ಭಾಟಿಯಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಪ್ರಮುಖರು. ಕನ್ನಡ ಸೇರಿದಂತೆ ತೆಲುಗು, ತಮಿಳಿನ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ದಕ್ಷಿಣ ಭಾರತದ ನಟಿ

ತಮನ್ನಾ ಭಾಟಿಯಾ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ.

ಎರಡು ದಶಕದಿಂದ ನಟನೆ

ತೆಲುಗು ಹಾಗೂ ತಮಿಳಿನ ಕೆಲವು ಸಿನಿಮಾಗಳಲ್ಲಿ ತಮನ್ನಾ ಭಾಟಿಯಾ ಈಗಾಗಲೇ ನಟಿಸುತ್ತಿದ್ದಾರೆ. ಇದೀಗ ಮತ್ತೆ ಹಿಂದಿಗೆ ಹಾರಿದ್ದಾರೆ.

ಮತ್ತೆ ಬಾಲಿವುಡ್​ಗೆ

ಮೂಲತಃ ಮಹಾರಾಷ್ಟ್ರದವರಾದ ತಮನ್ನಾ ಭಾಟಿಯಾ ನಟನೆಗೆ ಕಾಲಿಟ್ಟಿದ್ದು ಹಿಂದಿ ಸಿನಿಮಾ ಮೂಲಕವೇ ಆದರೆ ಮಿಂಚಿದ್ದು ಮಾತ್ರ ತೆಲುಗು ಹಾಗೂ ತಮಿಳಿನಲ್ಲಿ.

ತೆಲುಗು, ತಮಿಳು

ಎರಡು ದಶಕಗಳಿಂದಲೂ ನಟನೆಯಲ್ಲಿರುವ ತಮನ್ನಾ ಹಿಂದಿಯಲ್ಲಿ ಈವರೆಗೆ 10 ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. ಈಗ ಮತ್ತೆ ಹಿಂದಿ ಚಿತ್ರರಂಗದ ಕಡೆಗೆ ವಾಲಿದ್ದಾರೆ.

ಹಿಂದಿ ಚಿತ್ರರಂಗದ ಕಡೆ

ಹಿಂದಿಯ ಎರಡು ಸಿನಿಮಾಗಳಲ್ಲಿ ತಮನ್ನಾ ಭಾಟಿಯಾ ಪ್ರಸ್ತುತ ನಟಿಸುತ್ತಿದ್ದಾರೆ. ಒಂದು ಹಾರರ್ ಸಿನಿಮಾ ಇನ್ನೊಂದು ಆಕ್ಷನ್ ಸಿನಿಮಾ.

ಎರಡು ಹಿಂದಿ ಸಿನಿಮಾ

ಹಾರರ್ ಕಾಮಿಡಿ ಸಿನಿಮಾ ‘ಸ್ತ್ರೀ’ ಸಿನಿಮಾದ ಎರಡನೇ ಭಾಗದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ಅಂದರೆ ದೆವ್ವವಾಗಿ ನಟಿಸಲಿದ್ದಾರೆ.

‘ಸ್ತ್ರೀ’ ಎರಡನೇ ಭಾಗದಲ್ಲಿ

‘ವೇದ’ ಹೆಸರಿನ ಆಕ್ಷನ್ ಸಿನಿಮಾದಲ್ಲಿಯೂ ತಮನ್ನಾ ಭಟಿಯಾ ನಟಿಸುತ್ತಿದ್ದಾರೆ. ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾ ಇದಾಗಿದೆ.

ಹಿಂದಿ ಆಕ್ಷನ್ ಸಿನಿಮಾ

ತಮನ್ನಾ ಭಾಟಿಯಾ ಕಳೆದ ಕೆಲ ವರ್ಷಗಳಿಂದ ಐಟಂ ಹಾಡುಗಳಲ್ಲಿಯೂ ಡ್ಯಾನ್ಸ್ ಮಾಡುತ್ತಿದ್ದಾರೆ. ‘ಕೆಜಿಎಫ್’ ಹಾಡಿನಲ್ಲಿ ತಮನ್ನಾ ಐಟಂ ಹಾಡಿಗೆ ಕುಣಿದಿದ್ದರು.

 ಐಟಂ ಹಾಡುಗಳಲ್ಲಿ

‘ದೇವರ’ ಚಿತ್ರತಂಡಕ್ಕೆ ಧನ್ಯವಾದ ಹೇಳಿದ ನಟಿ ಜಾನ್ಹವಿ ಕಪೂರ್