ಜಾನ್ಹವಿ ಕಪೂರ್, ತಾವು ನಟಿಸುತ್ತಿರುವ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ‘ದೇವರ’ ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ.

23 Feb 2024

Author : Manjunatha

ಬಾಲಿವುಡ್​ನ ಟಾಪ್ ಯುವನಟಿ ಜಾನ್ಹವಿ ಕಪೂರ್ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ‘ದೇವರ’ನಲ್ಲಿ ನಟಿಸುತ್ತಿದ್ದು, ಸಿನಿಮಾದ ನಾಯಕ ಜೂ ಎನ್​ಟಿಆರ್.

ಪ್ಯಾನ್ ಇಂಡಿಯಾ 

ಜಾನ್ಹವಿ ಕಪೂರ್​ಗೆ ಇದು ಮೊದಲ ದಕ್ಷಿಣ ಭಾರತದ ಸಿನಿಮಾ. ಈ ಸಿನಿಮಾದಲ್ಲಿ ನಟಿಸಲು ಆರಂಭದಲ್ಲಿ ಅವರಿಗೆ ಬಹಳ ಕಷ್ಟವಾಗಿತ್ತಂತೆ.

ದಕ್ಷಿಣ ಭಾರತದ ಸಿನಿಮಾ

ಜಾನ್ಹವಿ ಕಪೂರ್​ ಅವರಿಗೆ ದಕ್ಷಿಣ ಭಾರತದ ಭಾಷೆಗಳ ಪರಿಚಯ ಇಲ್ಲ. ಅದರಲ್ಲೂ ತೆಲುಗು ಭಾಷೆಯ ಪರಿಚಯ ಇಲ್ಲವೇ ಇಲ್ಲ.

ದಕ್ಷಿಣ ಭಾರತದ ಭಾಷೆ

ಭಾಷೆ ಬರದ ಕಾರಣ ‘ದೇವರ’ ಸಿನಿಮಾದಲ್ಲಿ ನಟಿಸಲು ಜಾನ್ಹವಿಗೆ ಆರಂಭದಲ್ಲಿ ಬಹಳ ಕಷ್ಟವಾಯ್ತಂತೆ. ಆದರೆ ಚಿತ್ರತಂಡ ಸಹಾಯ ಮಾಡಿದೆ.

ನಟಿಸಲು ಕಷ್ಟವಾಯ್ತಂತೆ

ನಾನು ತೆಲುಗು ಕಲಿಯಲು, ಸಂಭಾಷಣೆಗಳನ್ನು ಸರಿಯಾಗಿ ಹೇಳಲು ಚಿತ್ರತಂಡ ಬೆಂಬಲವಾಗಿ ನಿಂತಿತು. ನನಗೆ ಅವರು ತೆಲುಗು ಕಲಿಸಿಕೊಟ್ಟರು ಎಂದಿದ್ದಾರೆ ಜಾನ್ಹವಿ.

ತೆಲುಗು ಭಾಷೆ ಬರಲ್ಲ

ಜಾನ್ಹವಿ ಕಪೂರ್ ‘ದೇವರ’ ಸಿನಿಮಾನಲ್ಲಿ ತಂಗಂ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕಡಲ ತಡಿಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ.

ತಂಗಂ ಹೆಸರಿನ ಪಾತ್ರ

‘ದೇವರ’ ಸಿನಿಮಾದಲ್ಲಿ ಎರಡು ಶೇಡ್​ನಲ್ಲಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಒಂದರಲ್ಲಿ ರೆಟ್ರೊ ಹೆಣ್ಣುಮಗಳಾಗಿ ಜೊತೆಗೆ ಮಾಡರ್ನ್ ಯುವತಿಯಾಗಿಯೂ ಜಾನ್ಹವಿ ನಟಿಸುತ್ತಿದ್ದಾರೆ.

ಎರಡು ಶೇಡ್ ಜಾನ್ಹವಿ

ಜಾನ್ಹವಿ ಕಪೂರ್, ತಮಿಳಿನ ಒಂದು ಸಿನಿಮಾದ ಅವಕಾಶವನ್ನೂ ಬಾಚಿಕೊಂಡಿದ್ದಾರೆ. ಸೂರ್ಯ ನಟನೆಯ ಹೊಸ ಸಿನಿಮಾನಲ್ಲಿ ಜಾನ್ಹವಿ ನಟಿಸುತ್ತಿದ್ದಾರೆ.

ತಮಿಳು ಸಿನಿಮಾ ಅವಕಾಶ

ಬಾಲಿವುಡ್​ಗೆ ಕಾಲಿಡಲಿದ್ದಾರೆ ನಟ ಅರ್ಜುನ್ ರಾಮ್​ಪಾಲ್ ಪುತ್ರಿ ಮೈರಾ, ಇಲ್ಲಿವೆ ಚಿತ್ರಗಳು