ರಮೇಶ್ ಅರವಿಂದ್ ನಡೆಸಿಕೊಟ್ಟ ಟಿವಿ ಶೋಗಳು ಯಾವುವು? ಮೊದಲ ಶೋ ಯಾವುದು ಗೊತ್ತೆ?

06 DEC 2023

Author : Manjunatha

ರಮೇಶ್ ಅರವಿಂದ್ ಹಿರಿಯ ಸಿನಿಮಾ ನಟರಾಗಿರುವ ಜೊತೆಗೆ ಟಿವಿ ರಂಗದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ.

ರಮೇಶ್ ಅರವಿಂದ್

ರಮೇಶ್​ ಅರವಿಂದ್​ರ ಟಿವಿ ಕಾರ್ಯಕ್ರಮಗಳಿಗೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗವೇ ಇದೆ.

ಅಭಿಮಾನಿ ವರ್ಗವೇ ಇದೆ

ರಮೇಶ್ ಮೊದಲು ಟಿವಿ ನಿರೂಪಣೆ ಪ್ರಾರಂಭಿಸಿದ್ದು ಬಹಳ ಹಿಂದೆ. ಡಿಡಿ ಚಂದನದಲ್ಲಿ ಎಂದರೆ ನಂಬಲೇ ಬೇಕು.

ಡಿಡಿ ಚಂದನ

ಶಂಕರ್ ನಾಗ್ ನಡೆಸಿಕೊಡುತ್ತಿದ್ದ ‘ಪರಿಚಯ’ ಸರಣಿಯನ್ನು ರಮೇಶ್ ಅರವಿಂದ್ ಮುಂದುವರೆಸಿದ್ದರು. 

‘ಪರಿಚಯ’ ಸರಣಿ

ಬೆಂಗಳೂರಿನ ಆಟೋ ಚಾಲಕರು, ತರಕಾರಿ ಮಾರುವವರನ್ನು ಜಾಲಿಯಾಗಿ ಮಾತನಾಡಿಸುತ್ತಿದ್ದ ವಿಭಿನ್ನವಾದ ಕಾರ್ಯಕ್ರಮ ಅದಾಗಿತ್ತು.

ವಿಭಿನ್ನ ಕಾರ್ಯಕ್ರಮ

ಬಹುವರ್ಷಗಳ ಬಳಿಕ ‘ಪ್ರೀತಿಯಿಂದ ರಮೇಶ್’ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ನಡೆಸಿಕೊಟ್ಟರು, ಅದು ಹಿಟ್ ಆಯ್ತು.

‘ಪ್ರೀತಿಯಿಂದ ರಮೇಶ್’

ಕನ್ನಡದ ಕೋಟ್ಯಧಿಪತಿ ಶೋ ನ ಒಂದು ಸೀಸನ್​ಗೆ ಹೋಸ್ಟ್ ಸಹ ಆಗಿದ್ದರು ನಟ ರಮೇಶ್ ಅರವಿಂದ್. ಅಲ್ಲಿಯೂ ಜವಾಬ್ದಾರಿಯುತವಾಗಿ ಶೋ ನಡೆಸಿಕೊಟ್ಟರು.

ಕನ್ನಡದ ಕೋಟ್ಯಧಿಪತಿ

ಇನ್ನು ವೀಕೆಂಡ್ ವಿತ್ ರಮೇಶ್ ಅನ್ನು 2014 ರಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಐದು ಸೀಸನ್ ಮುಗಿಸಿದ್ದು ಆರನೇ ಸೀಸನ್​ಗೆ ರೆಡಿಯಾಗಿದ್ದಾರೆ.

ವೀಕೆಂಡ್ ವಿತ್ ರಮೇಶ್

ರಮೇಶ್ ಅರವಿಂದ್ ನಡೆಸಿಕೊಟ್ಟ ಟಿವಿ ಶೋಗಳು ಯಾವುವು? ಮೊದಲ್ಯಾವುದು ಗೊತ್ತೆ?